Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಗುಜರಾತ್ ಎದುರು ಲಕ್ನೋಗೆ ಹೀನಾಯ ಸೋಲು

ಐಪಿಎಲ್ 2023: ಗುಜರಾತ್ ಎದುರು ಲಕ್ನೋಗೆ ಹೀನಾಯ ಸೋಲು
ಅಹಮ್ಮದಾಬಾದ್ , ಭಾನುವಾರ, 7 ಮೇ 2023 (19:10 IST)
ಅಹಮ್ಮದಾಬಾದ್: ಐಪಿಎಲ್ 2023 ರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 56 ರನ್ ಗಳ ಹೀನಾಯ ಸೋಲು ಕಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 227 ರನ್ ಗಳ ಭರ್ಜರಿ ಮೊತ್ತ ದಾಖಲಿಸಿತು. ವೃದ್ಧಿಮಾನ್ ಸಹಾ 81, ಶುಬ್ಮನ್ ಗಿಲ್ ಅಜೇಯ 94 ರನ್ ಗಳಿಸಿದರು.

ಈ ಮೊತ್ತ ಬೆನ್ನತ್ತಿದ ಲಕ್ನೋ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಲಷ್ಟೇ ಶಕ್ತವಾಯಿತು. ಕ್ವಿಂಟನ್ ಡಿ ಕಾಕ್ 70, ಕೈಲ್ ಮೇಯರ್ಸ್ 48 ರನ್ ಗಳ ಕೊಡುಗೆ ನೀಡಿದರು. ಆದರೆ ಆರಂಭಿಕರು ನೀಡಿದ ಉತ್ತಮ ಆರಂಭವನ್ನು ಗೆಲುವಾಗಿ ಪರಿವರ್ತಿಸುವಲ್ಲಿ ಲಕ್ನೋ ಬ್ಯಾಟಿಗರು ವಿಫಲರಾದರು. ಗುಜರಾತ್ ಪರ ಮೋಹಿತ್ ಶರ್ಮಾ 4 ವಿಕೆಟ್ ಕಬಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ರಾಜಸ್ಥಾನ್ ರಾಯಲ್ಸ್ ಗೆ ಹೈದರಾಬಾದ್ ಎದುರಾಳಿ