Select Your Language

Notifications

webdunia
webdunia
webdunia
webdunia

ಐಪಿಎಲ್ 2023: ರಾಜಸ್ಥಾನ್ ರಾಯಲ್ಸ್ ಗೆ ಹೈದರಾಬಾದ್ ಎದುರಾಳಿ

ಐಪಿಎಲ್ 2023: ರಾಜಸ್ಥಾನ್ ರಾಯಲ್ಸ್ ಗೆ ಹೈದರಾಬಾದ್ ಎದುರಾಳಿ
ಜೈಪುರ , ಭಾನುವಾರ, 7 ಮೇ 2023 (08:38 IST)
ಜೈಪುರ: ಐಪಿಎಲ್ 2023 ರಲ್ಲಿ ಇಂದು ಎರಡನೆಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್  ಪಂದ್ಯವಾಡಲಿದೆ.

ರಾಜಸ್ಥಾನ್ ರಾಯಲ್ಸ್ ಇದುವರೆಗೆ 10 ಪಂದ್ಯವಾಡಿದ್ದು 5 ರಲ್ಲಿ ಗೆಲುವು ಸಾಧಿಸಿದೆ. ಆರಂಭದಲ್ಲಿ ತೋರಿದ ಅದ್ಭುತ ನಿರ್ವಹಣೆ ಕಾಯ್ದುಕೊಳ್ಳಲು ರಾಜಸ್ಥಾನ್ ವಿಫಲವಾಗಿದೆ. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ದಯನೀಯ ವೈಫಲ್ಯ ಅನುಭವಿಸಿತ್ತು. ಆ ತಪ್ಪುಗಳನ್ನು ತಿದ್ದಿಕೊಳ್ಳಬೇಕಿದೆ.

ಅತ್ತ ಹೈದರಾಬಾದ್ ಇದುವರೆಗೆ ಆಡಿದ 9 ಪಂದ್ಯಗಳಲ್ಲಿ ಗೆದ್ದಿದ್ದು ಕೇವಲ 3 ಪಂದ್ಯಗಳಲ್ಲಿ ಮಾತ್ರ. ಈ ಬಾರಿ ಹೈದರಾಬಾದ್ ಗೆ ಯಾಕೋ ಅದೃಷ್ಟ ಕೈ ಹಿಡಿಯಲೇ ಇಲ್ಲ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಗುಜರಾತ್-ಲಕ್ನೋ ಮುಖಾಮುಖಿ