Webdunia - Bharat's app for daily news and videos

Install App

ಐಪಿಎಲ್: ಉಳಿಸಿಕೊಳ್ಳುವ ಆಟಗಾರರಿಗೆ ಫ್ರಾಂ ಚೈಸಿಗಳು ನೀಡಬೇಕಾದ ವೇತನವೆಷ್ಟು ಗೊತ್ತಾ?

Webdunia
ಭಾನುವಾರ, 28 ನವೆಂಬರ್ 2021 (09:35 IST)
ಮುಂಬೈ: ಐಪಿಎಲ್ 2022 ರ ಮೆಗಾ ಹರಾಜು ಪ್ರಕ್ರಿಯೆಗೆ ಮುನ್ನ ಎಲ್ಲಾ ಫ್ರಾಂಚೈಸಿಗಳು ಉಳಿಸಿಕೊಳ‍್ಳುವ ಆಟಗಾರರ ಲಿಸ್ಟ್ ರೆಡಿ ಮಾಡಿದೆ. ನಿಯಮಗಳ ಪ್ರಕಾರ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಹಾಗಿದ್ದರೆ ಉಳಿಸಿಕೊಳ್ಳುವ ಆಟಗಾರರಿಗೆ ನೀಡಬೇಕಾದ ವೇತನವೆಷ್ಟು ಗೊತ್ತಾ?

ನಾಲ್ವರು ಆಟಗಾರರನ್ನು ಉಳಿಸಿಕೊಳ್ಳುವುದಿದ್ದರೆ ಲೆಕ್ಕಾಚಾರ ಹೀಗಿರಲಿದೆ: ಉಳಿಸಿಕೊಳ್ಳುವ ಆಟಗಾರರಿಗೆ ಒಟ್ಟಾರೆ 42 ಕೋಟಿ ರೂ. ಖರ್ಚು ಮಾಡಬೇಕಾಗುತ್ತದೆ. ಈ ಪೈಕಿ ಮೊದಲ ಆಯ್ಕೆಯ ಆಟಗಾರನಿಗೆ 16 ಕೋಟಿ ರೂ. ವೇತನ ನೀಡಬೇಕು. ಎರಡನೇ ಆಯ್ಕೆ ಆಟಗಾರನಿಗೆ 12 ಕೋಟಿ ರೂ., ಮೂರನೇ ಆಯ್ಕೆಯ ಆಟಗಾರನಿಗೆ 8 ಕೋಟಿ ರೂ. ಮತ್ತು ನಾಲ್ಕನೇ ಆಟಗಾರನಿಗೆ 6 ಕೋಟಿ ರೂ. ವೇತನ ನೀಡಬೇಕು.

ಮೂವರು ಆಟಗಾರರಿದ್ದರೆ: ಮೂವರು ಆಟಗಾರರಿಗೆ ಒಟ್ಟು 33 ಕೋಟಿ ರೂ. ವ್ಯಯಿಸಬಹುದಾಗಿದೆ. ಈ ಪೈಕಿ ಮೊದಲ ಆಟಗಾರನಿಗೆ 15 ಕೋಟಿ, ಎರಡನೇ ಆಟಗಾರನಿಗೆ 11 ಕೋಟಿ, ಮೂರನೇ ಆಟಗಾರನಿಗೆ 7 ಕೋಟಿ ರೂ. ನೀಡಬೇಕು.

ಇಬ್ಬರು ಆಟಗಾರರಿದ್ದರೆ: ಇಬ್ಬರು ಆಟಗಾರರಿಗೆ 24 ಕೋಟಿ ರೂ. ಮೀಸಲಿಡಬಹುದು. ಈ ಪೈಕಿ ಮೊದಲ ಆಟಗಾರನಿಗೆ 14 ಕೋಟಿ, ಎರಡನೇ ಆಟಗಾರನಿಗೆ 10 ಕೋಟಿ ರೂ. ನೀಡಬಹುದು.

ಕೇವಲ ಒಬ್ಬ ಆಟಗಾರನಿದ್ದರೆ: ಕೇವಲ ಒಬ್ಬ ಆಟಗಾರರನ್ನು ಉಳಿಸುವುದಾದರೆ ಆತನಿಗೆ 14 ಕೋಟಿ ರೂ. ಸಂಭಾವನೆ ನೀಡಬೇಕಾಗುತ್ತದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments