INDW vs SAW: ಪ್ರಶಸ್ತಿ ಗೆದ್ದ ಖುಷಿಯಲ್ಲಿ ಕಾಲಿಗೆ ಬಿದ್ದ ಹರ್ಮನ್ ಪ್ರೀತ್ ಕೌರ್: ಜಯ್ ಶಾ ಏನು ಮಾಡಿದ್ರು ವಿಡಿಯೋ ನೋಡಿ

Krishnaveni K
ಸೋಮವಾರ, 3 ನವೆಂಬರ್ 2025 (09:01 IST)
Photo Credit: X
ಮುಂಬೈ: ಮಹಿಳಾ ಏಕದಿನ ವಿಶ್ವಕಪ್ ಚಾಂಪಿಯನ್ ಆದ ಖುಷಿಯಲ್ಲಿ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಕಾಲಿಗೆ ಬಿದ್ದಾಗ ಜಯ್ ಶಾ ಏನು ಮಾಡಿದ್ರು ಈ ವಿಡಿಯೋ ನೋಡಿ.

ದಕ್ಷಿಣ ಆಫ್ರಿಕಾವನ್ನು 52 ರನ್ ಗಳಿಂದ ಸೋಲಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್ ಚಾಂಪಿಯನ್ ಆದ ಖುಷಿಯಲ್ಲಿ ಸಂಭ್ರಮಿಸಿತು. ಈ ಗೆಲುವನ್ನು ಪ್ರತಿಯೊಬ್ಬ ಭಾರತೀಯರೂ ಸಂಭ್ರಮಿಸಿದರು.

ಇನ್ನು, ಪ್ರಶಸ್ತಿ ವಿತರಣೆ ಸಮಾರಂಭದ ವೇಳೆ ನಾಯಕಿ ಹರ್ಮನ್ ಪ್ರೀತ್ ಕೌರ್ ಮುಖದಲ್ಲಿ ಖುಷಿ ಎದ್ದು ಕಾಣುತ್ತಿತ್ತು. ಇದು ಮಹಿಳಾ ಕ್ರಿಕೆಟ್ ಗೆ ಪ್ರಶಸ್ತಿಯ ಕೊನೆಯಲ್ಲ ಆರಂಭ ಎಂದು ಸಾರಿದರು. ಬಳಿಕ ಖುಷಿ ಖುಷಿಯಿಂದಲೇ ಟ್ರೋಫಿ ಎತ್ತಿಕೊಳ್ಳಲು ಹೋದರು.

ಐಸಿಸಿ ಮುಖ್ಯಸ್ಥರಾಗಿರುವ ಜಯ್ ಶಾ ಟ್ರೋಫಿ ಹಸ್ತಾಂತರಿಸಲು ನಿಂತಿದ್ದರು. ಈ ವೇಳೆ ಹರ್ಮನ್ ನೇರವಾಗಿ ಹೋಗಿ ಜಯ್ ಶಾ ಕಾಲಿಗೆ ನಮಸ್ಕರಿಸಲು ಹೋಗಿದ್ದಾರೆ. ಇದಕ್ಕೆ ಕಾರಣವೂ ಮಹಿಳಾ ಕ್ರಿಕೆಟ್ ಗೆ ಹೊಸ ರೂಪ ನೀಡಿದ್ದೇ ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾಗಿದ್ದಾಗ. ಡಬ್ಲ್ಯುಪಿಎಲ್, ಮಹಿಳಾ ಕ್ರಿಕೆಟಿಗರಿಗೂ ಸಮಾನ ವೇತನ ಇತ್ಯಾದಿ ಪರಿಷ್ಕರಣೆ ತಂದಿದ್ದು ಅವರ ಕಾಲಘಟ್ಟದಲ್ಲಿ. ಹೀಗಾಗಿ ಹರ್ಮನ್ ಟ್ರೋಫಿ ಪಡೆಯುವ ಮೊದಲು ಜಯ್ ಶಾ ಕಾಲಿಗೆ ಬಿದ್ದರು.

ಆದರೆ ಜಯ್ ಶಾ ಹಾಗೆ ಮಾಡಬೇಡಿ ಎಂದು ಹರ್ಮನ್ ಹೇಳಿ ಟ್ರೋಫಿ ವಿತರಿಸಿ ಅಭಿನಂದಿಸಿದರು.  ಈ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಹಿರಿಯರಿಗೆ ಕಾಲಿಗೆ ಬೀಳುವುದು ನಮ್ಮ ಸಂಪ್ರದಾಯ. ಹರ್ಮನ್ ಇದನ್ನು ಖುಷಿಯ ಸಂದರ್ಭದಲ್ಲೂ ಮರೆಯಲಿಲ್ಲ ಎಂದು ಹೊಗಳಿದ್ದಾರೆ. ಮತ್ತೆ ಕೆಲವರು ಜಯ್ ಶಾ ಕಾಲಿಗೆ ಬೀಳುವ ಅಗತ್ಯವಿರಲಿಲ್ಲ ಎಂದು ಟೀಕಿಸಿದವರೂ ಇದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ICC Rankings: ಅಗ್ರಸ್ಥಾನ ಕಳೆದುಕೊಂಡ ಸ್ಮೃತಿ ಮಂಧಾನ, ಅಗ್ರ 10ರ ಪಟ್ಟಿಗೆ ಲಗ್ಗೆಯಿಟ್ಟ ಜೆಮಿಮಾ

ಐಸಿಸಿ ವಿಶ್ವಕಪ್‌ ತಂಡಕ್ಕೆ ಲಾರಾ ವೋಲ್ವಾರ್ಟ್‌ ಸಾರಥ್ಯ: ಕಪ್‌ ಗೆದ್ದರೂ ಹರ್ಮನ್‌ಗೆ ಸಿಗದ ಚಾನ್ಸ್‌

ಮುಟ್ಟಾದಾಗ ಮಹಿಳಾ ಕ್ರಿಕೆಟಿಗರು ಏನು ಮಾಡ್ತಾರೆ: ಶಾಕಿಂಗ್ ವಿಚಾರ ಹೇಳಿದ ಜೆಮಿಮಾ ರೊಡ್ರಿಗಸ್

ಪುರುಷರಿಗೊಂದು ಮಹಿಳೆಯರಿಗೊಂದು ನ್ಯಾಯನಾ.. ಬಿಸಿಸಿಐ ಮಾಡಿದ್ದು ಸರಿಯಿಲ್ಲ ಫ್ಯಾನ್ಸ್ ಆಕ್ರೋಶ

ಟ್ರೋಫಿ ಸ್ವೀಕರಿಸಲು ಬಂದ ಹರ್ಮನ್ ಪ್ರೀತ್ ಈ ನಡೆಯನ್ನು ಗೌರವಯುತವಾಗಿ ಬೇಡವೆಂದ ಜಯ್‌ ಶಾ

ಮುಂದಿನ ಸುದ್ದಿ
Show comments