Webdunia - Bharat's app for daily news and videos

Install App

INDvsENG test: ಜೋಡಿಯಾಗಿ ದಾಖಲೆ ಮಾಡಿದ ಅಶ್ವಿನ್-ಜಡೇಜಾ

Krishnaveni K
ಗುರುವಾರ, 25 ಜನವರಿ 2024 (12:52 IST)
Photo Courtesy: Twitter
ಹೈದರಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಹೈದರಾಬಾದ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಭಾರತದ ಸ್ಪಿನ್ ಜೋಡಿ ರವಿಚಂದ್ರನ್ ಅಶ್ವಿನ್-ರವೀಂದ್ರ ಜಡೇಜಾ ದಾಖಲೆಯೊಂದನ್ನು ಮಾಡಿದ್ದಾರೆ.

ಈ ಇಬ್ಬರೂ ಟೆಸ್ಟ್ ಕ್ರಿಕೆಟ್ ನಲ್ಲಿ ಜೊತೆಯಾಗಿ ಆಡುತ್ತಿದ್ದರೆ ಎದುರಾಳಿಗಳ ಕತೆ ಮುಗಿದಂತೇ ಎಂಬ ಮಾತಿದೆ. ಅಷ್ಟರಮಟ್ಟಿಗೆ ಇಬ್ಬರೂ ಜೋಡಿಯಾಗಿ ಟೀಂ ಇಂಡಿಯಾಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಸಕ್ಸಸ್ ತಂದುಕೊಡುತ್ತಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ಕೇವಲ ಬೌಲಿಂಗ್ ಮಾತ್ರವಲ್ಲ, ಎಷ್ಟೋ ಬಾರಿ ಬ್ಯಾಟಿಂಗ್ ನಲ್ಲೂ ಆಪತ್ ಬಾಂಧವರಾದ ಜೋಡಿಯಿದು.

ಇದೀಗ ಇಬ್ಬರೂ ಬೌಲಿಂಗ್ ನಲ್ಲಿ ಹೊಸ ದಾಖಲೆಯನ್ನೇ ಮಾಡಿದ್ದಾರೆ. ಅಶ್ವಿನ್-ಜಡೇಜಾ ಜೋಡಿ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಪರ ಜೋಡಿಯಾಗಿ 500 ಪ್ಲಸ್ ವಿಕೆಟ್ ಪಡೆದ ದಾಖಲೆ ಮಾಡಿದೆ. ಟೀಂ ಇಂಡಿಯಾ ಪರ ಅತ್ಯಧಿಕ ವಿಕೆಟ್ ಪಡೆದ ಜೋಡಿ ಎಂಬ ದಾಖಲೆ ಇದುವರೆಗೆ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಹೆಸರಿನಲ್ಲಿತ್ತು. ಇಬ್ಬರೂ ಜೊತೆಯಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ 501 ವಿಕೆಟ್ ಕಬಳಿಸಿದ್ದರು.

ಆದರೆ ಆ ದಾಖಲೆ ಇದೀಗ ಅಶ್ವಿನ್-ಜಡೇಜಾ ಜೋಡಿಯ ಪಾಲಾಗಿದೆ. 50 ಟೆಸ್ಟ್ ಪಂದ್ಯಗಳಿಂದ ಈ ಜೋಡಿ ಈ ದಾಖಲೆ ಮಾಡಿದೆ. ಈ ಪಂದ್ಯದಲ್ಲಿ ಇಂದು ಈಗಾಗಲೇ ಅಶ್ವಿನ್ 2 ವಿಕೆಟ್ ಕಬಳಿಸಿದರೆ ಜಡೇಜಾ 1 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ. ಜಾಗತಿಕವಾಗಿ ಈ ದಾಖಲೆ ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಹೆಸರಿನಲ್ಲಿದೆ. ಈ ವೇಗದ ಜೋಡಿ ಜೊತೆಯಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ 138 ಟೆಸ್ಟ್ ಪಂದ್ಯಗಳಿಂದ 1039 ವಿಕೆಟ್ ಕಬಳಿಸಿದೆ.

ಇದರ ಜೊತೆಗೆ ಅಶ್ವಿನ್ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ 150 ಪ್ಲಸ್ ವಿಕೆಟ್ ಪಡೆದ ದಾಖಲೆಯನ್ನೂ ಮಾಡಿದರು. ಈ ದಾಖಲೆ ಮಾಡಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮೊಹಮ್ಮದ್ ಶಮಿಯನ್ನು ಟೀಂ ಇಂಡಿಯಾಕ್ಕೆ ಯಾಕೆ ಆಯ್ಕೆ ಮಾಡ್ತಿಲ್ಲ: ಶಾಕಿಂಗ್ ಹೇಳಿಕೆ ನೀಡಿದ ವೇಗಿ

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಿಂದ ಸ್ಪಷ್ಟನೆ ಕೇಳಿದ ಬೆನ್ನಲ್ಲೇ ಐಪಿಎಲ್‌ಗೆ ರವಿಚಂದ್ರನ್‌ ಅಶ್ವಿನ್ ಗುಡ್‌ಬೈ

ಪಿಟಿ ಉಷಾ ಮಗನ ಮದುವೆ ಊಟಕ್ಕೆ ಫಿದಾ ಆದ ಮೇರಿ ಕೋಮ್‌

ಶುಭಮನ್ ಗಿಲ್ ಆಯ್ಕೆ ಮಾಡ್ತೀರಾ, ತಿರುಗಿಬಿದ್ದ ಸಂಜು ಸ್ಯಾಮ್ಸನ್

ಸೌರವ್ ಗಂಗೂಲಿ ಹೊಸ ಇನಿಂಗ್ಸ್‌ ಆರಂಭ: ದಾದಾ ಇನ್ನು ಕ್ರಿಕೆಟ್ ಲೀಗ್‌ನಲ್ಲಿ ಮುಖ್ಯ ಕೋಚ್

ಮುಂದಿನ ಸುದ್ದಿ
Show comments