Daily Horoscope
✕

ಅಂಡರ್ 19 ವಿಶ್ವಕಪ್ ಗೆದ್ದ ಭಾರತದ ಹುಡುಗರು: ಪ್ರಧಾನಿ ಮೋದಿ ಅಭಿನಂದನೆ

Webdunia
ಭಾನುವಾರ, 6 ಫೆಬ್ರವರಿ 2022 (09:00 IST)
ಆಂಟಿಗ್ವಾ: ಇಂಗ್ಲೆಂಡ್ ವಿರುದ್ಧ ನಡೆದ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯವನ್ನು ಗೆದ್ದ ಭಾರತ ಮತ್ತೊಮ್ಮೆ ಕಿರಿಯರ ವಿಶ್ವಕಪ್ ಚಾಂಪಿಯನ್ ಆಗಿದೆ. ಭಾರತೀಯರ ಸಾಧನೆಗೆ ಪ್ರಧಾನಿ ಮೋದಿ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.
 

ಈ ಮೂಲಕ ಐದನೇ ಬಾರಿಗೆ ಭಾರತ ಅಂಡರ್ 19 ವಿಶ್ವಕಪ್ ತನ್ನದಾಗಿಸಿಕೊಂಡಿದೆ. ಇಂಗ್ಲೆಂಡ್ ತಂಡವನ್ನು 4 ವಿಕೆಟ್ ಗಳಿಂದ ರೋಚಕವಾಗಿ ಸೋಲಿಸಿದ ಭಾರತ ಮತ್ತೊಮ್ಮೆ ಕಪ್ ತಮ್ಮದಾಗಿಸಿಕೊಂಡಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್  44.5 ಓವರ್ ಗಳಲ್ಲಿ 189 ರನ್ ಗಳಿಗೆ ಆಲೌಟ್ ಆಯಿತು. ಜೇಮ್ಸ್ ರೂ 95 ರನ್ ಗಳಿಸಿ ಮಿಂಚಿದರು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಭಾರತ ಆರಂಭದಲ್ಲೇ ರಘುವಂಶಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಬಳಿಕ ಶೇಕ್ ರಶೀದ್ 50, ನಿಶಾಂತ್ ಸಿಂಧು ಅಜೇಯ 50 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಭಾರತ ಅಂತಿಮವಾಗಿ 47.4 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು. ಗೆದ್ದ ಭಾರತೀಯ ಕ್ರಿಕೆಟಿಗರಿಗೆ 40 ಲಕ್ಷ ರೂ. ಬಹುಮಾನ ಸಂದಾಯವಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs WI: ಭಾರತ ಹಾಗೂ ವೆಸ್ಟ್ ಇಂಡೀಸ್ T20 ಸರಣಿ ಆರಂಭ: ವೇಳಾಪಟ್ಟಿ, ಸಮಯ ಮತ್ತು ಲೈವ್ ಸ್ಟ್ರೀಮಿಂಗ್ ವಿವರಗಳು

ತಲೆಯಲ್ಲಿ ಬುದ್ಧಿ ಇಲ್ವಾ… ವಿಮಾನ ನಿಲ್ದಾಣದಲ್ಲಿ ಸಿಟ್ಟಾದ ಕ್ರಿಕೆಟಿಗ ಇಶಾನ್ ಕಿಶನ್ video

ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡ ಆಯ್ಕೆ: ಟೀಮ್ ಇಂಡಿಯಾ ವೇಗದ ಪಡೆಗೆ ಬಿಗ್ ಬೂಸ್ಟ್

ಅಕ್ಟೋಬರ್ 5 ಅಥವಾ 6ರಂದು ಭಾರತದ ಟೆಸ್ಟ್ ಮತ್ತು ವೈಟ್ ಬಾಲ್ ತಂಡಗಳ ಆಯ್ಕೆ ಪ್ರಕಟ

ಟೀಂ ಇಂಡಿಯಾ ಪರ ರೋಹಿತ್, ಕೊಹ್ಲಿ ಮುಂದಿನ ಸರಣಿ ಆಡೋದು ಯಾವಾಗ: ಇಲ್ಲಿದೆ ವೇಳಾಪಟ್ಟಿ

ಮುಂದಿನ ಸುದ್ದಿ
Show comments