Select Your Language

Notifications

webdunia
webdunia
webdunia
webdunia

IND vs AFG: ಮೂರೇ ದಿನಕ್ಕೆ ಭಾರತ, ಅಫ್ಘಾನಿಸ್ತಾನ ಟೆಸ್ಟ್ ಅಂತ್ಯ

IND vs AFG
Photo Credit: X
ಮುಲ್ಲಾನ್ ಪುರ: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯ ಕೇವಲ ಮೂರೇ ದಿನಕ್ಕೆ ಮುಕ್ತಾಯಗೊಂಡಿದೆ. ಭಾರತ ಈ ಪಂದ್ಯವನ್ನು ಇನಿಂಗ್ಸ್ ಮತ್ತು 300 ರನ್ ಗಳ ಬೃಹತ್ ಅಂತರದಿಂದ ಗೆದ್ದುಕೊಂಡಿದೆ.

ಭಾರತ ಮೊದಲ ಇನಿಂಗ್ಸ್ ನಲ್ಲಿ ನೀಡಿದ್ದ 548 ರನ್ ಗಳ ಬೃಹತ್ ಗುರಿ ಬೆನ್ನತ್ತಲಾಗದೇ ಆಫ್ಘನ್ನರು 152 ರನ್ ಗಳಿಗೆ ಆಲೌಟ್ ಆಗಿದ್ದರು. ಇದರಿಂದಾಗಿ ಭಾರತ ಎದುರಾಳಿ ಮೇಲೆ ಫಾಲೋ ಆನ್ ಹೇರಿತು. ಎರಡನೇ ಇನಿಂಗ್ಸ್ ನಲ್ಲಿ ಅಫ್ಘಾನ್ ಬ್ಯಾಟಿಂಗ್ ಇನ್ನಷ್ಟು ಕಳಪೆಯಾಗಿತ್ತು. ಕೇವಲ 112 ರನ್ ಗಳಿಗೆ ಆಲೌಟ್ ಆಯಿತು.

ಇದರೊಂದಿಗೆ ಭಾರತ ಬೃಹತ್ ಅಂತರದ ಗೆಲುವು ಸಾಧಿಸಿತು. ಅಫ್ಘಾನಿಸ್ತಾನದ ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ಕಬಳಿಸಿದ್ದ ಭಾರತೀಯ ಬೌಲರ್ ಮಾನವ್ ಸುತಾರ್ ಎರಡನೇ ಇನಿಂಗ್ಸ್ ನಲ್ಲಿ 1 ವಿಕೆಟ್ ಗಳಿಸಿದರು. ಎರಡನೇ ಇನಿಂಗ್ಸ್ ನಲ್ಲಿ ವಾಷಿಂಗ್ಟನ್ ಸುಂದರ್ ಮಾರಕ ದಾಳಿ ಸಂಘಟಿಸಿ 4 ವಿಕೆಟ್ ಕಿತ್ತರು. ಕುಲದೀಪ್ ಯಾದವ್ 3 ಮತ್ತು ಮೊಹಮ್ಮದ್ ಸಿರಾಜ್ 1 ವಿಕೆಟ್ ತಮ್ಮದಾಗಿಸಿಕೊಂಡರು.

ಈ ಗೆಲುವು ಭಾರತಕ್ಕೆ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ದೊಡ್ಡ ಅಂತರದ ಗೆಲುವು ಎನಿಸಿಕೊಂಡಿದೆ. ಇದು ಎರಡನೇ ಬಾರಿಗೆ ಭಾರತದ ವಿರುದ್ಧ ಅಫ್ಘಾನಿಸ್ತಾನ ಇನಿಂಗ್ಸ್ ಅಂತರದ ಸೋಲು ಅನುಭವಿಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ- ಅಫ್ಗಾನಿಸ್ತಾನ ಟೆಸ್ಟ್‌: ಸುತಾರ್‌, ವಾಷಿಂಗ್ಟನ್‌ ಮೋಡಿ, ಇನಿಂಗ್ಸ್‌ ಗೆಲುವಿನತ್ತ ಟೀಂ ಇಂಡಿಯಾ