Publish Date: Wed, 24 Feb 2021 (08:58 IST)
Updated Date: Wed, 24 Feb 2021 (09:08 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಹೊನಲು ಬೆಳಕಿನ ಟೆಸ್ಟ್ ಇಂದಿನಿಂದ ಗುಜರಾತ್ ನ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಪಂದ್ಯಕ್ಕೆ ಎರಡೂ ತಂಡಗಳೂ ತಮ್ಮ ವೇಗದ ಬೌಲಿಂಗ್ ಅಸ್ತ್ರವನ್ನು ಪಣಕ್ಕಿಡಲಿದೆ. ಅತ್ತ ಇಂಗ್ಲೆಂಡ್ ಕಳೆದ ಪಂದ್ಯದಲ್ಲಿ ಪ್ರಮುಖ ವೇಗಿ ಜೇಮ್ಸ್ ಆಂಡರ್ಸನ್ ರನ್ನು ಹೊರಗಿಟ್ಟಿತ್ತು. ಭಾರತ ಕೂಡಾ ಈ ಮಹತ್ವದ ಪಂದ್ಯಕ್ಕಾಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿತ್ತು. ಈ ಪಂದ್ಯಕ್ಕೆ ಇಬ್ಬರೂ ಕಮ್ ಬ್ಯಾಕ್ ಮಾಡಲಿದ್ದಾರೆ. ಕಳೆದ ಪಂದ್ಯಗಳೆರಡೂ ಸಂಪೂರ್ಣವಾಗಿ ಸ್ಪಿನ್ನರ್ ಗಳಿಗೆ ಸಹಾಯವಾಗುವಂತಹ ಪಿಚ್ ನಲ್ಲಿ ಆಡಿದ್ದ ತಂಡಗಳು ಈಗ ತಮ್ಮ ವೇಗದ ಬೌಲಿಂಗ್ ಪಡೆಯ ಸಾಮರ್ಥ್ಯ ಪ್ರದರ್ಶಿಸಲು ಉತ್ಸುಕವಾಗಿದೆ. ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 2.30 ಕ್ಕೆ ಪಂದ್ಯ ಆರಂಭವಾಗಲಿದೆ.