Select Your Language

Notifications

webdunia
webdunia
webdunia
webdunia

ವಿಶ್ವದಾಖಲೆಯ ಮೊತ್ತ ದಾಖಲಾದ ಮೈದಾನದಲ್ಲಿ ಇಂದು ಭಾರತ-ಇಂಗ್ಲೆಂಡ್ ಏಕದಿನ ಕದನ

ವಿಶ್ವದಾಖಲೆಯ ಮೊತ್ತ ದಾಖಲಾದ ಮೈದಾನದಲ್ಲಿ ಇಂದು ಭಾರತ-ಇಂಗ್ಲೆಂಡ್ ಏಕದಿನ ಕದನ
ನ್ಯಾಟಿಂಗ್ ಹ್ಯಾಮ್ , ಗುರುವಾರ, 12 ಜುಲೈ 2018 (09:31 IST)
ನ್ಯಾಟಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಟಿ20 ಸರಣಿ ಈಗಾಗಲೇ ಮುಕ್ತಾಯವಾಗಿದ್ದು, ಇಂದಿನಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.

‍ನ್ಯಾಟಿಂಗ್ ಹ್ಯಾಮ್ ನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ವಿಶ್ವ ದಾಖಲೆಯ 481 ರನ್ ಸಿಡಿಸಿದ್ದು ಇದೇ ಮೈದಾನದಲ್ಲಿ. ಟಿ20 ಸರಣಿ ಗೆದ್ದ ಉತ್ಸಾಹದಲ್ಲಿರುವ ಟೀಂ ಇಂಡಿಯಾ ಏಕದಿನ ಸರಣಿಯನ್ನೂ ಕೈ ವಶ ಮಾಡಿಕೊಂಡು ಮುಂಬರುವ ವಿಶ್ವಕಪ್ ಗೆ ಭರ್ಜರಿ ತಯಾರಿ ನಡೆಸಲು ಉದ್ದೇಶಿಸಿದೆ.

ಭಾರತಕ್ಕೆ ಆರಂಭಿಕರದ್ದೇ ಚಿಂತೆ. ಟಿ20 ಸರಣಿಯಲ್ಲಿ ಆರಂಭಿಕ ಶಿಖರ್ ಧವನ್ ಒಂದೇ ಒಂದು ಪಂದ್ಯದಲ್ಲಿ ತಮ್ಮ ಖ್ಯಾತಿಗೆ ತಕ್ಕ ಆಟವಾಡಿಲ್ಲ. ಹೀಗಾಗಿ ಭಾರತದ ಆರಂಭ ಚೆನ್ನಾಗಿರಲಿಲ್ಲ. ಇದರಿಂದಾಗಿ ಮಧ್ಯಮ ಕ್ರಮಾಂಕದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿತ್ತು.

ಇನ್ನು ಟಿ20 ಸರಣಿಯಲ್ಲಿ ಕಂಡ ಯಶಸ್ಸಿನ ಬಳಿಕ ಏಕದಿನ ಸರಣಿಯಲ್ಲೂ ಕೆಎಲ್ ರಾಹುಲ್ ರನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಸಿ, ತಾವು ನಾಲ್ಕನೇ ಕ್ರಮಾಂಕದಲ್ಲಿ ಆಡಲು ನಾಯಕ ವಿರಾಟ್ ಕೊಹ್ಲಿ ಮುಂದಾಗುವ ಸಾಧ್ಯತೆ ಹೆಚ್ಚು.

ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಗೆ ಉಮೇಶ್ ಯಾದವ್ ಇದ್ದರೂ ಸಾಥಿ, ಏಕದಿನ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಕಾಡಲಿದೆ. ಆ ಕೊರತೆಯನ್ನು ಸ್ಪಿನ್ನರ್ ಗಳು ನೀಗಬೇಕಿದೆ. ಆದರೆ ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್ ಕೊನೆಯ ಎರಡು ಟಿ20 ಪಂದ್ಯದಲ್ಲಿ ಹೆಚ್ಚಿನ ಜಾದೂ ಮಾಡದೇ ಇರುವುದು ಭಾರತಕ್ಕೆ ಚಿಂತೆಯ ವಿಷಯವಾಗಿದೆ. ಸ್ಥಳೀಯ ಸಮಯ 11.30 ಕ್ಕೆ ಪಂದ್ಯ ನಡೆಯಲಿದ್ದು, ಸೋನಿ ವಾಹಿನಿಯಲ್ಲಿ ಪಂದ್ಯದ ನೇರ ಪ್ರಸಾರ ವೀಕ್ಷಿಸಬಹುದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಏಕದಿನ ಪಂದ್ಯಕ್ಕೆ ಮೊದಲು ಇಂಗ್ಲೆಂಡ್ ಗೆ ಚಿಯರ್ ಅಪ್ ಮಾಡಿದ ಸಚಿನ್ ತೆಂಡುಲ್ಕರ್!