Webdunia - Bharat's app for daily news and videos

Install App

ಶಿಖರ್ ಧವನ್ ಮೇಲಿನ ಮೋಹ ಬಿಟ್ಟು ಕೆಎಲ್ ರಾಹುಲ್ ಗೆ ಇಂದಾದರೂ ಮಣೆ ಹಾಕುತ್ತಾರಾ ವಿರಾಟ್ ಕೊಹ್ಲಿ?

Webdunia
ಮಂಗಳವಾರ, 17 ಜುಲೈ 2018 (08:59 IST)
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದು ನಿರ್ಣಾಯಕ ಏಕದಿನ ಪಂದ್ಯ ಲೀಡ್ಸ್ ನ ಹೆಡ್ಡಿಂಗ್ಲೇ ಮೈದಾನದಲ್ಲಿ ನಡೆಯಲಿದೆ.

ಉಭಯ ತಂಡಗಳು ಸರಣಿಯಲ್ಲಿ ತಲಾ ಒಂದು ಪಂದ್ಯ ಗೆದ್ದಿರುವುದರಿಂದ ಸರಣಿ ಸಮಬಲಗೊಂಡಿದೆ. ಇಂದಿನ ಅಂತಿಮ ಪಂದ್ಯಕ್ಕೆ ಫೈನಲ್ ಕಳೆ ಬಂದಿದೆ. ಇಂದು ಪಂದ್ಯ ಗೆದ್ದವರು ಸರಣಿ ಗೆಲ್ಲಲಿದ್ದಾರೆ.

ಆದರೆ ಭಾರತಕ್ಕೆ ಬ್ಯಾಟಿಂಗ್ ನದ್ದೇ ಚಿಂತೆ. ಆರಂಭಿಕ ಶಿಖರ್ ಧವನ್ ಮೇಲಿಂದ ಮೇಲೆ ವಿಫಲರಾಗುತ್ತಿದ್ದರೂ ವಿರಾಟ್ ಕೊಹ್ಲಿ ಆ ಬಗ್ಗೆ ತಲೆಕೆಡಿಸಿಕೊಳ್ಳದೇ ಪ್ರತಿಭಾವಂತ ಕೆಎಲ್ ರಾಹುಲ್ ರನ್ನು ಆ ಸ್ಥಾನದಲ್ಲಿ ಆಡಿಸದೇ ಇರುವುದು ದುರದೃಷ್ಟಕರ. ರಾಹುಲ್ ಗೆ ಸರಿ ಹೊಂದದ ಮಧ್ಯಮ ಕ್ರಮಾಂಕ ನೀಡಿ ಕರ್ನಾಟಕ ಪ್ರತಿಭಾವಂತ ಆಟಗಾರನನ್ನು ಕೊಹ್ಲಿ ಕಡೆಗಣಿಸುತ್ತಿದ್ದಾರೆ.

ಇತ್ತ ವಿರಾಟ್ ಕೊಹ್ಲಿ ಕೂಡಾ ಇದುವರೆಗೆ ತಮ್ಮ ಖ್ಯಾತಿಗೆ ತಕ್ಕ ಆಟವಾಡಿಲ್ಲ. ರೋಹಿತ್ ಶರ್ಮಾ ಎರಡು ಶತಕ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್ ಮನ್ ಗಳ ಸಾಧನೆ ಶೂನ್ಯ. ಇಂಗ್ಲೆಂಡ್ ನಂತಹ ದೊಡ್ಡ ತಂಡದ ಎದುರು ಭಾರತ ಯಶಸ್ವಿಯಾಗಬೇಕಾದರೆ ತನ್ನ ಖ್ಯಾತಿಗೆ ತಕ್ಕ ಬ್ಯಾಟಿಂಗ್ ಮಾಡಬೇಕಿದೆ. ಅದರಲ್ಲೂ ಚೇಸಿಂಗ್ ಶೂರನೆನಿಸಿಕೊಂಡಿರುವ ಭಾರತದ ಬ್ಯಾಟ್ಸ್ ಮನ್ ಗಳು ಇಲ್ಲಿಯೇ ಎಡವುತ್ತಿರುವುದು ದುರದೃಷ್ಟಕರ.

ಇಂದು ಸಂಜೆ 5 ಗಂಟೆಗೆ ಪಂದ್ಯ ನಡೆಯಲಿದ್ದು, ಸೋನಿ ವಾಹಿನಿಯಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments