Select Your Language

Notifications

webdunia
webdunia
webdunia
webdunia

ಭಾರತ-ಆಸ್ಟ್ರೇಲಿಯಾ ಅಂತಿಮ ಟೆಸ್ಟ್ ನಾಳೆಯಿಂದ

ಭಾರತ-ಆಸ್ಟ್ರೇಲಿಯಾ ಅಂತಿಮ ಟೆಸ್ಟ್ ನಾಳೆಯಿಂದ
ಬ್ರಿಸ್ಬೇನ್ , ಗುರುವಾರ, 14 ಜನವರಿ 2021 (09:33 IST)
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ನಾಳೆಯಿಂದ ಬ್ರಿಸ್ಬೇನ್ ನಲ್ಲಿ ಆರಂಭವಾಗಲಿದೆ.


ಈಗಾಗಲೇ ಸರಣಿ 1-1 ರಿಂದ ಸಮಬಲವಾಗಿರುವುದರಿಂದ ಈ ಪಂದ್ಯ ಉಭಯ ತಂಡಗಳಿಗೆ ನಿರ್ಣಾಯಕವಾಗಲಿದೆ. ಟೀಂ ಇಂಡಿಯಾಕ್ಕೆ ಈ ಪಂದ್ಯದಲ್ಲಿ ಆಟಗಾರರದ್ದೇ ಚಿಂತೆ. ಅತ್ಯುತ್ತಮ ಆಟಗಾರರೆಲ್ಲಾ ಗಾಯಗೊಂಡು ತವರಿಗೆ ಮರಳಿರುವುದರಿಂದ ಈ ಪಂದ್ಯವನ್ನು ಭಾರತ ಹೇಗೆ ಎದುರಿಸುತ್ತದೆ ಎನ್ನುವುದೇ ದೊಡ್ಡ ಚಿಂತೆಯಾಗಿದೆ. ಆಸ್ಟ್ರೇಲಿಯನ್ನರ ದಾಳಿಯನ್ನು ಎದುರಿಸಲು ಅನುಭವ ಬೇಕೇ ಬೇಕು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಭಾರತ ಇರುವ ಸಂಪನ್ಮೂಲ ಬಳಸಿಕೊಂಡು ಆಡಲಿದೆ. ಹೀಗಾಗಿ ಈ ಪಂದ್ಯ ಭಾರತದ ಅನನುಭವಿ ಮತ್ತು ಆಸ್ಟ್ರೇಲಿಯಾದ ಅನುಭವಿ ತಂಡದ ನಡುವಿನ ಕಾದಾಟವೆನ್ನಬಹುದು. ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಬೆಳಿಗ್ಗೆ 5 ಗಂಟೆಗೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಯಾಳುಗಳ ಸಮಸ್ಯೆ: ನೆಟ್ ಬೌಲರ್ ಗಳನ್ನೂ ಆಡುವ ಬಳಗಕ್ಕೆ ಸೇರಿಸಿಕೊಳ್ಳಲಿರುವ ಟೀಂ ಇಂಡಿಯಾ