ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧ ಅಂತಿಮ ಟೆಸ್ಟ್ ಪಂದ್ಯವಾಡಲಿರುವ ಟೀಂ ಇಂಡಿಯಾಗೆ ಎಲ್ಲಕ್ಕಿಂತ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದು ಆಡುವ ಅಂತಿಮ 11 ರ ಬಳಗವನ್ನು ಹೊಂದಿಸುವುದು.
ಯಾಕೆಂದರೆ ಅರ್ಧಕ್ಕಿಂತ ಹೆಚ್ಚು ಕ್ರಿಕೆಟಿಗರು ಗಾಯಾಳುಗಳಾಗಿದ್ದಾರೆ. ಹೀಗಾಗಿ ಆಡುವ ಅತ್ಯುತ್ತಮ 11 ಕ್ರಿಕೆಟಿಗರನ್ನು ಆರಿಸುವುದೇ ದೊಡ್ಡ ತಲೆನೋವಾಗಿದೆ. ಮೂರನೇ ಟೆಸ್ಟ್ ಬಳಿಕ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ಕೂಡಾ ಹೊರಬಿದ್ದಿದ್ದಾರೆ. ಹೀಗಾಗಿ ಈಗ ಒಬ್ಬ ವೇಗಿ ಮತ್ತು ಸ್ಪಿನ್ನರ್ ನ್ನು ತಂಡಕ್ಕೆ ಆಯ್ಕೆ ಮಾಡಬೇಕಿದೆ. ಆಸ್ಟ್ರೇಲಿಯಾ ಸರಣಿ ವೇಳೆ ನೆಟ್ ಬೌಲರ್ ಆಗಿ ಬಳಕೆಯಾಗಿದ್ದ ಯುವ ವೇಗಿ ಟಿ ನಟರಾಜನ್ ಗೆ ಈಗ ಬುಮ್ರಾ ಸ್ಥಾನದಲ್ಲಿ ಆಡುವ ಅವಕಾಶ ಸಿಗುವ ಸಾಧ‍್ಯತೆಯಿದೆ. ಇನ್ನು, ಜಡೇಜಾ ಬದಲಿಗೆ ಸ್ಪಿನ್ನರ್ ಆಗಿ ಕುಲದೀಪ್ ಯಾದವ್ ಕಣಕ್ಕಿಳಿಯಬಹುದು. ಬ್ಯಾಟ್ಸ್ ಮನ್ ಗಳ ಅಭಾವವಿರುವುದರಿಂದ ವೃದ್ಧಿಮಾನ್ ಸಹಾ ಮತ್ತು ರಿಷಬ್ ಪಂತ್ ಇಬ್ಬರೂ ಕಣಕ್ಕಿಳಿದರೂ ಅಚ್ಚರಿಯಿಲ್ಲ. ಅಂತೂ ಸರಣಿ ನಿರ್ಣಾಯಕ ಹಂತದಲ್ಲಿ ಎ ದರ್ಜೆಯ ತಂಡದೊಂದಿಗೆ ಆಡುವ ಪರಿಸ್ಥಿತಿ ಟೀಂ ಇಂಡಿಯಾದ್ದಾಗಿದೆ.