Select Your Language

Notifications

webdunia
webdunia
webdunia
webdunia

IND vs SL: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ: ಕೆಎಲ್ ರಾಹುಲ್ ಗೆ ಮಹತ್ವದ ಜವಾಬ್ಧಾರಿ

KL Rahul
ಮುಂಬೈ: ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯಲಿರುವ ಮುಂಬರುವ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದ್ದು, ಕನ್ನಡಿಗ ಕೆಎಲ್ ರಾಹುಲ್ ಗೆ ಮಹತ್ವದ ಜವಾಬ್ಧಾರಿ ನೀಡಲಾಗಿದೆ.

ತಂಡದ ಅನುಭವಿ ಕನ್ನಡಿಗ ಕೆ.ಎಲ್. ರಾಹುಲ್ ಅವರಿಗೆ ಮತ್ತೆ ಜವಾಬ್ದಾರಿ ಹಸ್ತಾಂತರಿಸಲಾಗಿದ್ದು, ಸರಣಿಗೆ ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ.

ತಂಡದ ಅನುಭವ ಮತ್ತು ಯುವ ಆಟಗಾರರ ಸಮತೋಲನವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಆಯ್ಕೆ ಸಮಿತಿಯು ಈ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಕಳೆದ ಕೆಲವು ಸರಣಿಗಳಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಕೆ.ಎ.ಎಲ್. ರಾಹುಲ್, ಬ್ಯಾಟಿಂಗ್ ಸಾಲಿನಲ್ಲಿ ಮಧ್ಯಮ ಕ್ರಮಾಂಕ ಹಾಗೂ ವಿಕೆಟ್ ಕೀಪಿಂಗ್ ಎರಡರಲ್ಲೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ರಾಹುಲ್ ಈಗಾಗಲೇ ಐಪಿಎಲ್ ಹಾಗೂ ಭಾರತೀಯ ತಂಡವನ್ನು ವಿವಿಧ ಹಂತಗಳಲ್ಲಿ ಯಶಸ್ವಿಯಾಗಿ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಇವರನ್ನು ಉಪನಾಯಕನನ್ನಾಗಿ ಮಾಡಿರುವುದು ನಾಯಕನಿಗೆ ಗಂಭೀರ ಸಂದರ್ಭಗಳಲ್ಲಿ ಸೂಕ್ತ ಸಲಹೆ ನೀಡಲು ಹಾಗೂ ತಂಡದ ಬ್ಯಾಟಿಂಗ್‌ಗೆ ಹೆಚ್ಚಿನ ಸ್ಥಿರತೆ ತರಲು ನೆರವಾಗಲಿದೆ.

ಶ್ರೀಲಂಕಾದ ಸ್ಪಿನ್ ಸ್ನೇಹಿ ಪಿಚ್‌ಗಳಿಗೆ ಸೂಕ್ತವಾಗುವಂತೆ ಪ್ರಮುಖ ಸ್ಪಿನ್ನರ್‌ಗಳು ಹಾಗೂ ಜಂಟಿ ವೇಗದ ಬೌಲಿಂಗ್ ಪಡೆಗೆ ಆದ್ಯತೆ ನೀಡಲಾಗಿದೆ. ಉಳಿದಂತೆ ಮಾನವ್ ಸುತಾರ್, ಸಾಯಿ ಸುದರ್ಶನ್, ದೇವದತ್ತ ಪಡಿಕ್ಕಲ್ ರಂತಹ ಯುವ ಬ್ಯಾಟಿಗರಿದ್ದಾರೆ. ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಜೊತೆಗೆ ಗುರ್ನೂರ್ ಬ್ರಾರ್, ಸಾರಾಂಶ್ ಜೈನ್ ರಂತಹ ಯುವ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಆಗಸ್ಟ್ 15 ರಂದು ಮೊದಲ ಟೆಸ್ಟ್ ನಡೆಯಲಿದ್ದು, ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 23 ರಿಂದ ಆರಂಭವಾಗಲಿದೆ.

ಉಳಿದಂತೆ ತಂಡ ಇಂತಿದೆ: ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ (ಉಪ ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಧ್ರುವ ಜ್ಯುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮಾನವ್ ಸುತಾರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಗುರ್ನೂರ್ ಬ್ರಾರ್, ದೇವದತ್ತ ಪಡಿಕ್ಕಲ್, ಸಾರಾಂಶ್ ಜೈನ್.

Share this Story:

Follow Webdunia kannada

ಮುಂದಿನ ಸುದ್ದಿ

ಫಾರ್ಮ್ ಇಲ್ಲ ಅಂದ್ರೆ ಡ್ರಾಪ್ ಮಾಡೋದು ಸಂಜು ಸ್ಯಾಮ್ಸನ್ ಗೆ ಮಾತ್ರನಾ: ಅಭಿಷೇಕ್ ಶರ್ಮಾ ಏನು ಸ್ಪೆಷಲ್