Daily Horoscope

Select Your Language

Notifications

webdunia
webdunia
webdunia
webdunia

ಹೆಂಡ್ತಿ ಇದ್ದಾಳೆ ಬಿಡ್ರೋ... ಅಭಿಮಾನಿಗಳ ಕಾಟಕ್ಕೆ ಬೇಸತ್ತ ಕೆಎಲ್ ರಾಹುಲ್ ಮಾಡಿದ್ದೇನು Video

KL Rahul
Photo Credit: X
ಮುಂಬೈ: ಸೆಲೆಬ್ರಿಟಿಗಳು ಎಲ್ಲೇ ಹೋದರೂ ಅಭಿಮಾನಿಗಳು ಅವರೊಂದಿಗೆ ಸೆಲ್ಫಿ ಅಥವಾ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬೀಳುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಈ ಅಭಿಮಾನದ ಗಡಿ ಮೀರಿ ಸೆಲೆಬ್ರಿಟಿಗಳ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಖಾಸಗಿ ಸಮಯಕ್ಕೆ ಧಕ್ಕೆ ತರುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಂತಹದ್ದೇ ಒಂದು ಕಹಿ ಅನುಭವ ಈಗ ಟೀಮ್ ಇಂಡಿಯಾದ ಬ್ಯಾಟರ್ ಕೆ.ಎಲ್. ರಾಹುಲ್ ಮತ್ತು ಅಥಿಯಾ ಶೆಟ್ಟಿ ದಂಪತಿಗೆ ಎದುರಾಗಿದೆ.
 
ಕೆ.ಎಲ್. ರಾಹುಲ್ ತಮ್ಮ ಬಿಡುವಿನ ದಿನಗಳಲ್ಲಿ ಪತ್ನಿ ಅಥಿಯಾ ಶೆಟ್ಟಿ ಜೊತೆ ರೆಸ್ಟೋರೆಂಟ್‌ ಒಂದಕ್ಕೆ ರಾತ್ರಿಯ ಭೋಜನಕ್ಕೆ (Dinner) ತೆರಳಿದ್ದರು. ಊಟ ಮುಗಿಸಿ ದಂಪತಿಗಳು ಹೊರಬಂದು ರಸ್ತೆಯಲ್ಲಿ ಪ್ರಶಾಂತವಾಗಿ ವಾಕಿಂಗ್ ಮಾಡಲು ಮುಂದಾದಾಗ, ಅಲ್ಲಿ ನೆರೆದಿದ್ದ ಕೆಲವು ಜನರು ಇವರನ್ನು ಗುರುತಿಸಿದ್ದಾರೆ.
 
ತಕ್ಷಣವೇ ರಾಹುಲ್ ಮತ್ತು ಅಥಿಯಾ ಅವರನ್ನು ಸುತ್ತುವರಿದ ಜನರು, ಫೋಟೋ ಮತ್ತು ಸೆಲ್ಫಿ ನೀಡುವಂತೆ ಒತ್ತಾಯಿಸಲು ಆರಂಭಿಸಿದ್ದಾರೆ. ಆರಂಭದಲ್ಲಿ ರಾಹುಲ್ ನಯವಾಗಿಯೇ ನಿರಾಕರಿಸಿದರೂ, ಬಂದಿದ್ದ ಜನರು ಮಾತ್ರ ದಂಪತಿಗಳಿಗೆ ದಾರಿ ಬಿಡದೆ, ಹಠ ಹಿಡಿದು ಫೋಟೋಗಾಗಿ ಪೀಡಿಸಲು ಶುರುಮಾಡಿದ್ದಾರೆ.
 
ಅಭಿಮಾನಿಗಳ ಈ ನೂಕುನುಗ್ಗಲು ಮತ್ತು ಅತಿರೇಕದ ವರ್ತನೆಯಿಂದ ಕೆ.ಎಲ್. ರಾಹುಲ್ ತೀವ್ರ ಅಸಮಾಧಾನ ಹಾಗೂ ಮುಜುಗರಕ್ಕೊಳಗಾಗಿರುವುದು ಅವರ ಮುಖದಲ್ಲೇ ಎದ್ದು ಕಾಣುತ್ತಿತ್ತು. ಪತ್ನಿ ಅಥಿಯಾ ಶೆಟ್ಟಿ ಅವರ ಕೈ ಹಿಡಿದು ಅಲ್ಲಿಂದ ಬೇಗನೆ ಹೊರಡಲು ಯತ್ನಿಸಿದರೂ, ಜನರು ಅವರನ್ನು ಸುಲಭವಾಗಿ ಹೋಗಲು ಬಿಡದೆ ಹಿಂಬಾಲಿಸಿದ್ದಾರೆ. ಕೊನೆಗೆ ಭದ್ರತಾ ಸಿಬ್ಬಂದಿ ಹಾಗೂ ಅವರ ಕಾರಿನ ಚಾಲಕನ ಸಹಾಯದಿಂದ ದಂಪತಿಗಳು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.
pic.twitter.com/aA0EuBLomf

 

— 'vohra???? (@aayush_430) June 30, 2026

Share this Story:

Follow Webdunia kannada

ಮುಂದಿನ ಸುದ್ದಿ

ಇಷ್ಟೊಂದು ಹೊಟ್ಟೆ ಕಿಚ್ಚಾ... ವೈಭವ್ ಸೂರ್ಯವಂಶಿ ಬಗ್ಗೆ ಶ್ರೇಯಸ್ ಅಯ್ಯರ್ ಕಾಮೆಂಟ್ ನೋಡಿ Video