Select Your Language

Notifications

webdunia
webdunia
webdunia
webdunia

IND vs SL ODI: ಆಟಗಾರನಾಗಿ ಅಂದು ಭಾರತ ಸೋಲಿಸಿದ್ದ ಸನತ್ ಜಯಸೂರ್ಯ ಈಗ ಕೋಚ್ ಆಗಿಯೂ ಸರಣಿ ಸೋಲುಣಿಸಿದರು

Sanat Jayasurya

Krishnaveni K

ಕೊಲಂಬೊ , ಗುರುವಾರ, 8 ಆಗಸ್ಟ್ 2024 (10:10 IST)
Photo Credit: Facebook
ಕೊಲಂಬೊ: ಭಾರತ ಮತ್ತು ಶ್ರೀಲಂಕಾ ಮೂರನೇ ಏಕದಿನ ಪಂದ್ಯವನ್ನೂ ಟೀಂ ಇಂಡಿಯಾ ಹೀನಾಯವಾಗಿ ಸೋತು ಸರಣಿ ಕಳೆದುಕೊಂಡು 1997 ರಲ್ಲಿ ಭಾರತಕ್ಕೆ ಆಟಗಾರನಾಗಿ ಸೋಲುಣಿಸಿದ್ದ ಸನಜತ್ ಜಯಸೂರ್ಯ ಈಗ ಕೋಚ್ ಆಗಿ ಭಾರತವನ್ನು ಮಣಿಸಿದ್ದಾರೆ.

ಮೂರನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ನೀಡಿದ 249 ರನ್ ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಕೇವಲ 138 ರನ್ ಗಳಿಗೆ ಆಲೌಟ್ ಆಗಿ ಹೀನಾಯ ಸೋಲು ಒಪ್ಪಿಕೊಂಡಿತು. ಇದರೊಂದಿಗೆ ಟೀಂ ಇಂಡಿಯಾ 27 ವರ್ಷಗಳ ಬಳಿಕ ಏಕದಿನ ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ಸರಣಿ ಸೋತು ಅವಮಾನ ಅನುಭವಿಸಿತು.

ಈ ಸರಣಿ ಸೋಲಿನ ಹಿಂದೆ ಇನ್ನೊಂದು ರೋಚಕ ಅಂಶವಿದೆ. ಈ ಹಿಂದೆ 1997 ರಲ್ಲಿ ಭಾರತದ ವಿರುದ್ಧ ಶ್ರೀಲಂಕಾ ಏಕದಿನ ಸರಣಿ ಗೆದ್ದಿತ್ತು. ಈ ಸರಣಿಯಲ್ಲಿ ಲಂಕಾ ಗೆಲುವಿನಲ್ಲಿ ಪ್ರಮುಖ ಪಾತ್ರ  ವಹಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದವರು ಅಂದಿನ ಆರಂಭಿಕ ಸನತ್ ಜಯಸೂರ್ಯ.

ವಿಪರ್ಯಾಸವೆಂದರೆ ಈಗ ಸನತ್ ಜಯಸೂರ್ಯ ಅದೇ ಲಂಕಾ ತಂಡದ ಕೋಚ್ ಆಗಿದ್ದಾರೆ. ಈಗ ಸನತ್ ಜಯಸೂರ್ಯ ಕೋಚ್ ಆಗಿ ಭಾರತ ತಂಡವನ್ನು ಸೋಲಿಸಿ ಇತಿಹಾಸ ಬರೆದರು. ಬಹುಶಃ ಮೊದಲ ಪಂದ್ಯವನ್ನೂ ಭಾರತ ಸೋತಿದ್ದರೆ ವೈಟ್ ವಾಶ್ ಅವಮಾನ ಅನುಭವಿಸಬೇಕಾಗಿತ್ತು. ಎಲ್ಲಾ ಮೂರೂ ಪಂದ್ಯಗಳಲ್ಲೂ ಲಂಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿತ್ತು. ಬಹುಶಃ ಭಾರತವೂ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿದ್ದರೆ ಅನುಕೂಲವಾಗುತ್ತಿತ್ತೇನೋ.

Share this Story:

Follow Webdunia kannada

ಮುಂದಿನ ಸುದ್ದಿ

Paris Olympics 2024: ನೀರಜ್ ಚೋಪ್ರಾ ಪಂದ್ಯ ಇಂದು ಎಷ್ಟು ಗಂಟೆಗೆ ವೀಕ್ಷಿಸಬೇಕು