Webdunia - Bharat's app for daily news and videos

Install App

IND vs ENG: ಕೊಹ್ಲಿ, ರೋಹಿತ್ ಕೊರತೆ ಸ್ವಲ್ಪವೂ ಕಾಡದಂತೆ ನೋಡಿಕೊಂಡ ಯುವ ಬ್ಯಾಟಿಗರು

Krishnaveni K
ಶುಕ್ರವಾರ, 20 ಜೂನ್ 2025 (20:32 IST)
Photo Credit: X
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸುತ್ತಿರುವ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಗೈರು ಸ್ವಲ್ಪವೂ ಕಾಡದಂತೆ ನೋಡಿಕೊಂಡಿದ್ದಾರೆ.

ಇಂದು ಟಾಸ್ ಸೋತು ಮೊದಲು ಬ್ಯಾಟಿಂಗ್ ಗಿಳಿಸಲ್ಪಟ್ಟ ಟೀಂ ಇಂಡಿಯಾಗೆ ಕೆಎಲ್ ರಾಹುಲ್ ಯಶಸ್ವೀ ಜೈಸ್ವಾಲ್ ಉತ್ತಮ ಆರಂಭ ನೀಡಿದರು. ಆದರೆ ಲಯದಲ್ಲಿದ್ದ ರಾಹುಲ್ ಆಫ್ ಸ್ಟಂಪ್ ಆಚೆ ಹೋಗುತ್ತಿದ್ದ ಚೆಂಡು ಕೆಣಕಲು ಹೋಗಿ 42 ರನ್ ಗಳಿಗೆ ಔಟಾದರು. ನಂತರ ಬಂದ ಸಾಯಿ ಸುದರ್ಶನ್ ಕೂಡಾ 4 ಎಸೆತ ಎದುರಿಸಿ ಶೂನ್ಯಕ್ಕೆ ನಿರ್ಗಮಿಸಿದಾಗ ಭಾರತ ಕೊಂಚ ಒತ್ತಡಕ್ಕೆ ಸಿಲುಕಿತ್ತು.

ಆದರೆ ಇನ್ನೊಂದೆಡೆ ಬಂಡೆಯಂತೆ ನಿಂತು ಆಡಿದ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಸಿಡಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಮತ್ತೊಮ್ಮೆ ಅವರು ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು. ಇದೀಗ ಅವರು 155 ಎಸೆತಗಳಿಂದ ಭರ್ತಿ 100 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ಇನ್ನೊಂದೆಡೆ ಕೊಂಚ ಬಿರುಸಿನ ಆಟಕ್ಕೆ ಕೈ ಹಾಕಿದ ಕ್ಯಾಪ್ಟನ್ ಶುಬ್ಮನ್ ಗಿಲ್ 58 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಭೋಜನ ವಿರಾಮದ ಬಳಿಕ ಈ ಜೋಡಿ ಮುರಿಯದ ಮೂರನೇ ವಿಕೆಟ್ ಗೆ 123 ರನ್ ಗಳ ಜೊತೆಯಾಟವಾಡಿದೆ. ಭಾರತ ಇದೀಗ ಚಹಾ ವಿರಾಮದ ವೇಳೆಗೆ 2 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿ ಸುಸ್ಥಿತಿಯಲ್ಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಕೊಹ್ಲಿ, ರೋಹಿತ್ ಕೊರತೆ ಸ್ವಲ್ಪವೂ ಕಾಡದಂತೆ ನೋಡಿಕೊಂಡ ಯುವ ಬ್ಯಾಟಿಗರು

IND vs ENG: ಆಹಾ.. ಕೆಎಲ್ ರಾಹುಲ್ ಈ ಕ್ಲಾಸಿಕಲ್ ಶಾಟ್ ನೀವು ನೋಡಲೇಬೇಕು video

IND vs ENG: ಟಾಸ್ ಗೆದ್ದ ಇಂಗ್ಲೆಂಡ್, ತಂಡಕ್ಕಾಗಿ ತ್ಯಾಗ ಮಾಡಿದ ಶುಬ್ಮನ್ ಗಿಲ್

ಎಂಟು ವರ್ಷಗಳ ವನವಾಸ ಮುಗಿಸಿದ ಕರುಣ್‌ ನಾಯರ್‌: ಟೆಸ್ಟ್‌ ಅಗ್ನಿಪರೀಕ್ಷೆಗೆ ಸಜ್ಜಾದ ಕನ್ನಡಿಗ

ಆಂಡರ್ಸನ್ ತೆಂಡುಲ್ಕರ್ ಟ್ರೋಫಿಯಲ್ಲಿದೆ ಒಂದು ವಿಶೇಷತೆ ಏನದು ನೋಡಿ

ಮುಂದಿನ ಸುದ್ದಿ
Show comments