IND vs ENG: ದ್ರಾವಿಡ್, ಕೊಹ್ಲಿ ಸಾಲಿಗೆ ಸೇರಿದ ಯಶಸ್ವಿ ಜೈಸ್ವಾಲ್

Krishnaveni K
ಶನಿವಾರ, 24 ಫೆಬ್ರವರಿ 2024 (16:42 IST)
ರಾಂಚಿ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ದ್ವಿತೀಯ ದಿನದಂತ್ಯಕ್ಕೆ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ ವಿಕೆಟ್ ನಷ್ಟಕ್ಕೆ ರನ್ ಗಳಿಸಿದೆ.

ಇಂದು ಮತ್ತೆ ಭಾರತದ ಪಾಲಿಗೆ ಆಪತ್ ಬಾಂಧವನಾಗಿದ್ದು ಯಶಸ್ವಿ ಜೈಸ್ವಾಲ್. ಈ ಸರಣಿಯುದ್ದಕ್ಕೂ ಅದ್ಭುತ ಫಾರ್ಮ್ ಪ್ರದರ್ಶಿಸಿರುವ ಜೈಸ್ವಾಲ್ ಇಂದೂ ಕೂಡಾ ಅರ್ಧಶತಕ ಸಿಡಿಸಿದರು. ಕೇವಲ 4 ರನ್ ಗೆ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಾಗ ಶುಬ್ಮನ್ ಗಿಲ್ ಜೊತೆ ಅರ್ಧಶತಕದ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಒಟ್ಟು 117 ಎಸೆತ ಎದುರಿಸಿದ ಜೈಸ್ವಾಲ್ 1 ಸಿಕ್ಸರ್ ಸಹಿತ 73 ರನ್ ಗಳಿಸಿ ಔಟಾದರು. ಇಂದು ಮತ್ತೊಮ್ಮೆ ಶತಕ ಸಿಡಿಸುವ ಅವರ ಕನಸು ಭಗ್ನವಾಯಿತು. ಇನ್ನೊಂದೆಡೆ ಅವರಿಗೆ ಸಾಥ್ ನೀಡಿದ್ದ ಗಿಲ್ ಕೂಡಾ 38 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.

ಈ ಮೂಲಕ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ ಒಂದೇ ಸರಣಿಯಲ್ಲಿ 600 ಕ್ಕೂ ಹೆಚ್ಚು ರನ್ ಗಳಿಸಿ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದರು. ಇದಕ್ಕೆ ಮೊದಲು ಹಾಲಿ ಕೋಚ್ ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಈ ದಾಖಲೆ ಮಾಡಿದ್ದರು. ಜೈಸ್ವಾಲ್ ಈ ದಿಗ್ಗಜರ ಸಾಲಿಗೆ ಸೇರಿಕೊಂಡರು.

ಗಿಲ್ ಔಟಾದ ಬಳಿಕ ಕ್ರೀಸ್ ಗೆ ಬಂದ ರಜತ್ ಪಟಿದಾರ್ ನಿಧಾನಗತಿಯ ಆಟದ ಮೂಲಕ ಇಂದಾದರೂ ರನ್ ಗಳಿಸಬಹುದೆಂಬ ಭರವಸೆ ನೀಡಿದ್ದರು. ಆದರೆ 17 ರನ್ ಗಳಿಸಿದ್ದಾಗ ಶೊಯೇಬ್ ಬಾಶಿರ್ ಎಸೆತದಲ್ಲಿ ವಿವಾದಾತ್ಮಕವಾಗಿ ಎಲ್ ಬಿಡಬ್ಲ್ಲುಆಗಿ ನಿರ್ಗಮಿಸಿದರು. ಅವರ ಬೆನ್ನಲ್ಲೇ ಕಳೆದ ಪಂದ್ಯದ ಶತಕಧಾರಿ ರವೀಂದ್ರ ಜಡೇಜಾ ಕೂಡಾ 12 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ರವಿಚಂದ್ರನ್ ಅಶ್ವಿನ್ ಕೇವಲ 1 ರನ್ ಗಳಿಗೆ ಇನಿಂಗ್ಸ್ ಕೊನೆಗೊಳಿಸಿದರು. ಕಳೆದ ಪಂದ್ಯದಲ್ಲಿ ಎರಡೂ ಇನಿಂಗ್ಸ್ ಗಳಲ್ಲಿ ಅರ್ಧಶತಕ ಸಿಡಿಸಿದ್ದ ಸರ್ಫರಾಜ್ ಖಾನ್ 14 ರನ್ ಗಳಿಸಲಷ್ಟೇ ಶಕ್ತರಾದರು.

ಆದರೆ ಇದೀಗ 30 ರನ್ ಗಳಿಸಿರುವ ಧ್ರುವ ಜ್ಯುರೆಲ್-ಕುಲದೀಪ್ ಯಾದವ್ (17) ಜೋಡಿ 8 ನೇ ವಿಕೆಟ್ ಗೆ 42 ರನ್ ಗಳ ಜೊತೆಯಾಟವಾಡಿದ್ದಾರೆ. ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 353 ರನ್ ಗಳಿಸಿತ್ತು. ಇದೀಗ ಭಾರತ 134 ರನ್ ಗಳ ಹಿನ್ನಡೆಯಲ್ಲಿದೆ. ಇಂಗ್ಲೆಂಡ್ ಪರ ಶೊಯೇಬ್ ಬಾಶಿರ್ 4, ಟಾಮ್ ಹಾರ್ಟ್ಲೀ 2 ವಿಕೆಟ್ ಕಬಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬ್ರೇಕಪ್ ಆದ ಸ್ಮೃತಿ ಮಂಧಾನಗೆ ಇಂಥಾ ಕಾಮೆಂಟ್ ಮಾಡೋದಾ: ಇದೆಂಥಾ ಮನಸ್ಥಿತಿ

ಟೀಂ ಇಂಡಿಯಾ ಪರ ರೋಹಿತ್, ಕೊಹ್ಲಿ ಆಡುವ ಮುಂದಿನ ಪಂದ್ಯ ಯಾವುದು ನೋಡಿ

IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಇಂದಿನಿಂದ ಟಿ20 ಸರಣಿ, ಅದೊಂದು ದಾಖಲೆಯಾಗದಿದ್ರೆ ಸಾಕಪ್ಪಾ..

ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸೂರ್ಯಕುಮಾರ್ ಯಾದವ್

ಪಾಲಾಶ್ ಜೊತೆ ಮದುವೆ ಮುರಿದ ಬೆನ್ನಲ್ಲೇ ಸ್ಮೃತಿ ಮಂಧಾನ ಮತ್ತು ಕ್ರಿಕೆಟಿಗರು ಮಾಡಿದ್ದೇನು ಗೊತ್ತಾ

ಮುಂದಿನ ಸುದ್ದಿ
Show comments