Webdunia - Bharat's app for daily news and videos

Install App

IND vs ENG: ಓಡಬೇಡ ಎಂದು ನೀನೇ ಹೇಳ್ಬೇಕು: ಮೈದಾನದಲ್ಲೇ ಶುಬ್ಮನ್ ಗಿಲ್ ಗೆ ಟಾಸ್ಕ್ ಕೊಟ್ಟ ಜೈಸ್ವಾಲ್ video

Krishnaveni K
ಶನಿವಾರ, 21 ಜೂನ್ 2025 (12:43 IST)
Photo Credit: X
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಶತಕದ ಜೊತೆಯಾಟವಾಡಿದ ಯಶಸ್ವಿ ಜೈಸ್ವಾಲ್ ಮತ್ತು ಶುಬ್ಮನ್ ಗಿಲ್ ನಡುವೆ ನಡೆದ ಮಾತುಕತೆಯೊಂದು ಸ್ಟಂಪ್ ಮೈಕ್ ನಲ್ಲಿ ಸೆರೆಯಾಗಿದೆ.

ನಿನ್ನೆಯ ಪಂದ್ಯದಲ್ಲಿ ಇಬ್ಬರೂ ಶತಕ ಗಳಿಸಿದ್ದರು. ಜೈಸ್ವಾಲ್ 101 ರನ್ ಗಳಿಸಿ ಔಟಾದರೆ ಕ್ಯಾಪ್ಟನ್ ಗಿಲ್ 127 ರನ್ ಗಳಿಸಿ ಇನ್ನೂ ಕ್ರೀಸ್ ನಲ್ಲಿದ್ದಾರೆ. ಭಾರತ ಮೊದಲ ದಿನದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 359 ರನ್ ಗಳಿಸಿ ಸುಸ್ಥಿತಿಯಲ್ಲಿದೆ.

ನಿನ್ನೆಯ ದಿನದಾಟದಲ್ಲಿ ಸ್ವಾರಸ್ಯಕರ ಪ್ರಸಂಗವೊಂದು ನಡೆದಿದೆ. ಬ್ಯಾಟಿಂಗ್ ಮಾಡುತ್ತಿದ್ದ ಜೈಸ್ವಾಲ್ ಚೆಂಡನ್ನು ತಳ್ಳಿ ಸಿಂಗಲ್ಸ್ ಗಾಗಿ ಓಡಲು ಹೊರಟರು. ಆದರೆ ಬಾಲ್ ಹತ್ತಿರದಲ್ಲೇ ಇದ್ದಿದ್ದರಿಂದ ಗಿಲ್ ‘ಬೇಡ ಬೇಡ’ ಎಂದು ಕಿರುಚಾಡಿದರು.

ಬಳಿಕ ಜೈಸ್ವಾಲ್ ‘ಏನು ಭೈಯಾ.. ನಂಗೆ ಸ್ವಲ್ಪ ಹೇಳ್ತಾನೇ ಇರಬೇಕು ನೀನು ರನ್ ಗಾಗಿ ಓಡಬೇಡ ಎಂದು. ನಂಗೆ ಪ್ರತೀ ಬಾಲ್ ಹೊಡೆದ ಮೇಲೂ ಓಡುವ ಅಭ್ಯಾಸವಿದೆ’ ಎಂದು ನಾನ್ ಸ್ಟ್ರೈಕರ್ ತುದಿಯಲ್ಲಿರುವ ಗಿಲ್ ಗೆ ಹೇಳುತ್ತಾರೆ. ‘ಇಲ್ಲ ಓಡಬೇಡ ಅಷ್ಟೇ’ ಎಂದು ಗಿಲ್ ಹೇಳುತ್ತಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ರಿಷಭ್ ಪಂತ್ ಈಗ ಪಲ್ಟಿ ಸ್ಟಾರ್: ಈ ವಿಡಿಯೋನೇ ಸಾಕ್ಷಿ

IND vs ENG: ರಿಷಭ್ ಪಂತ್ ಶತಕ, ಲೀಡ್ಸ್ ನಲ್ಲಿ ಟೀಂ ಇಂಡಿಯಾದಿಂದ 2002 ರ ರಿಪೀಟ್ ಶೋ

ಪ್ಯಾರಿಸ್‌ ಡೈಮಂಡ್‌ ಲೀಗ್‌ನಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ಭಾರತದ ಜಾವೆಲಿನ್‌ ತಾರೆ ನೀರಜ್‌ ಚೋಪ್ರಾ

IND vs ENG: ಓಡಬೇಡ ಎಂದು ನೀನೇ ಹೇಳ್ಬೇಕು: ಮೈದಾನದಲ್ಲೇ ಶುಬ್ಮನ್ ಗಿಲ್ ಗೆ ಟಾಸ್ಕ್ ಕೊಟ್ಟ ಜೈಸ್ವಾಲ್ video

Funny video: ರಿಷಭ್ ಪಂತ್ ಪೆವಿಲಿಯನ್ ಗೆ ಮರಳುವಾಗ ಕೆಎಲ್ ರಾಹುಲ್ ಹೀಗೆ ಮಾಡೋದಾ

ಮುಂದಿನ ಸುದ್ದಿ
Show comments