Webdunia - Bharat's app for daily news and videos

Install App

IND vs ENG: ಟಾಸ್ ಗೆದ್ದ ಇಂಗ್ಲೆಂಡ್, ತಂಡಕ್ಕಾಗಿ ತ್ಯಾಗ ಮಾಡಿದ ಶುಬ್ಮನ್ ಗಿಲ್

Krishnaveni K
ಶುಕ್ರವಾರ, 20 ಜೂನ್ 2025 (15:11 IST)
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ನಾಯಕನಾಗಿ ಮೊದಲ ಪಂದ್ಯದಲ್ಲೇ ಶುಬ್ಮನ್ ಗಿಲ್ ತಂಡದ ಹಿತಕ್ಕಾಗಿ ತ್ಯಾಗ ಮಾಡಿದ್ದಾರೆ.

ಲೀಡ್ಸ್ ಪಿಚ್ ಮೊದಲ ದಿನ ಬೌಲಿಂಗ್ ಗೆ ಸಹಕಾರಿಯಾಗಿರಲಿದೆ. ಹೀಗಾಗಿ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ದುಕೊಂಡಿದೆ. ಭಾರತ ತಂಡದಲ್ಲಿ 8 ವರ್ಷಗಳ ಬಳಿಕ ಆಯ್ಕೆಯಾದ ಕರುಣ್ ನಾಯರ್ ಸ್ಥಾನ ಪಡೆದುಕೊಂಡಿದ್ದಾರೆ. ಯುವ ಬ್ಯಾಟಿಗ ಸಾಯಿ ಸುದರ್ಶನ್ ಗೆ ಅವಕಾಶ ನೀಡಲಾಗಿದೆ.

ಇನ್ನು, ಸಾಯಿ ಸುದರ್ಶನ್ ಗಾಗಿ ಶುಬ್ಮನ್ ಗಿಲ್ ತಮ್ಮ ಸ್ಥಾನವನ್ನು ತ್ಯಾಗ ಮಾಡಿದ್ದಾರೆ. ರೋಹಿತ್ ಶರ್ಮಾ ನಾಯಕರಾಗಿದ್ದಾಗ ಗಿಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಳಲಿಳಿಯುತ್ತಿದ್ದರು. ಇದರಿಂದ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಅನುಭವಿಯ ಸಾಥ್ ಸಿಗುತ್ತಿತ್ತು.

ಇದೀಗ ಗಿಲ್ ತಂಡದ ಜವಾಬ್ಧಾರಿ ಹೊತ್ತುಕೊಂಡಿದ್ದು, ನಾಲ್ಕನೇ ಕ್ರಮಾಂಕಕ್ಕೆ ಹಿಂಬಡ್ತಿ ಪಡೆದಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಆಡಲಿದ್ದಾರೆ. ಉಳಿದಂತೆ ಕುಲದೀಪ್ ಯಾದವ್ ಆಡುವ ಬಳಗದಿಂದ ಹೊರಗಿದ್ದಾರೆ. ಭಾರತ ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿದಿದೆ.

ಟೀಂ ಇಂಡಿಯಾ ಇಂತಿದೆ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಬ್ಮನ್ ಗಿಲ್, ರಿಷಭ್ ಪಂತ್, ಕರುಣ್ ನಾಯರ್, ರವೀಂದ್ರ ಜಡೇಜಾ, ಶ್ರಾದ್ಧೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ ಕೃಷ್ಣ.

ಇಂಗ್ಲೆಂಡ್: ಜ್ಯಾಕ್ ಕ್ರಾಲೆ, ಬೆನ್ ಡಕೆಟ್, ಒಲಿ ಪಾಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ಜೆಮಿ ಸ್ಮಿತ್, ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸೆ, ಜೋಶ್ ಟಂಗ್ ಮತ್ತು ಶೊಯೇಬ್ ಬಶೀರ್.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಷ್ಯಾ ಕಪ್ ಗೆ ತಿಲಕ್ ವರ್ಮ ಬಿಟ್ಟು ಶುಭಮನ್ ಗಿಲ್ ಗೆ ಮಣೆ: ಇದೆಂಥಾ ಲೆಕ್ಕಾಚಾರ

ತಂದೆ ಸಚಿನ್ ಹಾದಿಯಲ್ಲೇ ನಡೆದ ಮಗ ಅರ್ಜುನ್‌, ಕೈ ಹಿಡಿಯಲಿರುವ ಸಾನಿಯಾ ವಯಸ್ಸೆಷ್ಟು ಗೊತ್ತಾ

ಮತ್ತೆ ಬ್ಯಾಟ್‌ ಹಿಡಿಯಲು ಸಜ್ಜಾದ ಸೂರ್ಯಕುಮಾರ್‌ ಯಾದವ್: ಏಷ್ಯಾ ಕಪ್‌ ಟೂರ್ನಿಗೆ ಮುನ್ನ ಪರೀಕ್ಷೆಯಲ್ಲಿ ಪಾಸ್‌

ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್ ನಿಶ್ಚಿತಾರ್ಥ: ಸಚಿನ್ ಸೊಸೆಯಾಗುತ್ತಿರುವ ಸಾನಿಯಾ ಯಾರು

Rishabh Pant: ಕ್ರಿಕೆಟ್ ಆಡಲಾಗುತ್ತಿಲ್ಲ, ಅಸಹಾಯಕನಾದ ರಿಷಭ್ ಪಂತ್: ವಿಡಿಯೋ ನೋಡಿ

ಮುಂದಿನ ಸುದ್ದಿ
Show comments