Publish Date: Fri, 10 Jul 2026 (09:16 IST)
Updated Date: Fri, 10 Jul 2026 (09:18 IST)
ಮುಂಬೈ: ಹೇಗಿದ್ದ ಟೀಂ ಇಂಡಿಯಾ ಹೇಗಾಗೋಯ್ತಲ್ಲಾ.. ಎಂದು ಅಭಿಮಾನಿಗಳು ಬೇಸರಪಡುವ ಹಾಗಾಗಿದೆ ನಮ್ಮ ಕ್ರಿಕೆಟ್ ತಂಡದ ಪರಿಸ್ಥಿತಿ. ಟೀಂ ಇಂಡಿಯಾ ಈ ಮಟ್ಟಿಗೆ ಸೋಲುವುದಕ್ಕೆ ಕಾರಣ ಯಾರು ಎಂದು ಪ್ರಶ್ನಿಸಿಕೊಳ್ಳುವಂತಾಗಿದೆ.
ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟಿ20 ಪಂದ್ಯವನ್ನೂ ಟೀಂ ಇಂಡಿಯಾ 9 ವಿಕೆಟ್ ಗಳಿಂದ ಹೀನಾಯವಾಗಿ ಸೋತಿದೆ. ಇದರೊಂದಿಗೆ ಶ್ರೇಯಸ್ ಅಯ್ಯರ್ ಟೀಂ ಇಂಡಿಯಾ ನಾಯಕರಾದ ಮೇಲೆ ಒಂದೇ ಒಂದು ಪಂದ್ಯ ಗೆಲ್ಲದೇ ಹೀನಾಯ ಸ್ಥಿತಿಗೆ ತಲುಪಿದೆ.
90 ರ ದಶಕದಲ್ಲಿ ಗಂಗೂಲಿ ನಾಯಕರಾಗುವುದಕ್ಕೂ ಮೊದಲು ಕೂಡಾ ಟೀಂ ಇಂಡಿಯಾ ಪರಿಸ್ಥಿತಿ ಬಹುಶಃ ಹೀಗಿರಲಿಲ್ಲ. ಸಚಿನ್ ಯುಗ ಕೂಡಾ ಆರಂಭವಾಗುವ ಮೊದಲು ಟೀಂ ಇಂಡಿಯಾ ಒಂದು ಪಂದ್ಯ ಗೆಲ್ಲುವುದೂ ಭಾರೀ ದೊಡ್ಡ ವಿಚಾರವಾಗಿತ್ತು. ಆದರೆ ಗಂಗೂಲಿ ನಾಯಕರಾದ ಮೇಲೆ ಟೀಂ ಇಂಡಿಯಾ ವಿದೇಶದಲ್ಲೂ ಗೆಲ್ಲಲು ಪ್ರಾರಂಭ ಮಾಡಿತು.
ಧೋನಿ ನಾಯಕರಾದ ಮೇಲೆ ಐಸಿಸಿ ಟ್ರೋಫಿ ಗೆಲ್ಲುವುದನ್ನೂ ಕರಗತ ಮಾಡಿಕೊಂಡಿತು. ಕೊಹ್ಲಿ ನಾಯಕರಾದ ಮೇಲೆ ಟೆಸ್ಟ್ ಮಾದರಿಯಲ್ಲಿ ಉತ್ತುಂಗದಲ್ಲಿತ್ತು. ಇತ್ತೀಚೆಗೆ ರೋಹಿತ್ ನಾಯಕರಾದ ಮೇಲೆ ಸತತವಾಗಿ ಟೀಂ ಇಂಡಿಯಾ ಐಸಿಸಿ ಫೈನಲ್ ಗೇರುತ್ತಿತ್ತು.
ಆದರೆ ಈಗ ಗೌತಮ್ ಗಂಭೀರ್ ಕೋಚ್ ಆದ ಮೇಲೆ ಟೀಂ ಇಂಡಿಯಾ ಮತ್ತೆ ಹಳೆಯ ಕಾಲಕ್ಕೆ ಬಂದು ನಿಂತಿದೆ. ಇದೀಗ ಒಂದು ಪಂದ್ಯ ಗೆಲ್ಲುವುದೂ ಕಷ್ಟ ಎನ್ನುವ ಪರಿಸ್ಥಿತಿಗೆ ಬಂದು ನಿಂತಿದೆ. ಸ್ಟಾರ್ ಆಟಗಾರರನ್ನು, ಪ್ರತಿಭಾವಂತರನ್ನೆಲ್ಲಾ ಹೊರದಬ್ಬಿ ಏನೋ ಸಾಧನೆ ಮಾಡುತ್ತೇನೆ, ಯುವ ಪಡೆ ಕಟ್ಟುತ್ತೇನೆ ಎಂದು ಬಂದು ಈಗ ಇದುವರೆಗೆ ಮಾಡಿದ್ದ ಹೆಸರನ್ನೆಲ್ಲಾ ಹೊಳೆಗೆ ಬಿಟ್ಟಾಯ್ತು. ಇದೀಗ ಟೀಂ ಇಂಡಿಯಾದಲ್ಲಿ ಪ್ರತಿಭೆಗಿಂತ ಪ್ರತಿಷ್ಠೆಗೇ ಹೆಚ್ಚು ಮಣೆ ಎನ್ನುವ ಪರಿಸ್ಥಿತಿಯಾಗಿದೆ. ಇದರಿಂದಾಗಿಯೇ ಇಂದು ಟೀಂ ಇಂಡಿಯಾ ಸತತ ಸೋಲು ಕಾಣುತ್ತಿದೆ. ಅತಿಯಾದ ಪ್ರಯೋಗ ಮಾಡಲು ಹೋಗಿ ಈ ಹಿಂದೆ ಗ್ರೆಗ್ ಚಾಪೆಲ್ ಟೀಂ ಇಂಡಿಯಾವನ್ನು ಹಳ್ಳ ಹಿಡಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಗಂಭೀರ್-ಅಜಿತ್ ಅಗರ್ಕರ್ ಕಾಲಘಟ್ಟದಲ್ಲಿ ಟೀಂ ಇಂಡಿಯಾ ಅದೇ ಪರಿಸ್ಥಿತಿಗೆ ಬಂದು ನಿಂತಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ