Select Your Language

Notifications

webdunia
webdunia
webdunia
webdunia

IND vs ENG: ವಿ ವಾಂಟ್ ಸಂಜು ಎಂದು ಜೋರಾಗಿ ಕೂಗಿದ ಫ್ಯಾನ್ಸ್: ಗಂಭೀರ್, ತಿಲಕ್ ವರ್ಮ ಮುಖಭಾವ ನೋಡಬೇಕು Video

Gautam Gambhir
Photo Credit: X
ನ್ಯಾಟಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟಿ20 ಪಂದ್ಯವನ್ನೂ ಹೀನಾಯವಾಗಿ ಸೋತ ಬಳಿಕ ಹೋಟೆಲ್ ಗೆ ತೆರಳುತ್ತಿದ್ದ ಕೋಚ್ ಗೌತಮ್ ಗಂಭೀರ್ ಮತ್ತು ತಿಲಕ್ ವರ್ಮಗೆ ಕೇಳಿಸುವಂತೆ ಅಭಿಮಾನಿಗಳು ನಮಗೆ ಸಂಜು ಬೇಕು ಎಂದು ಜೋರಾಗಿ ಕೂಗಿದ್ದಾರೆ. ಆಗ ಇಬ್ಬರ ಮುಖಭಾವ ಹೇಗಾಗಿತ್ತು ಗೊತ್ತಾ?

ಟೀಂ ಇಂಡಿಯಾ ಸತತವಾಗಿ ಸೋಲುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ಕಳೆದ ಎರಡು ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ರನ್ನು ಹೊರಗಿಡಲಾಗಿದೆ. ಇದರಿಂದ ಭಾರತಕ್ಕೆ ಯಾವುದೇ ಲಾಭವಾಗಿಲ್ಲ. ಸಂಜುಗಿಂತಲೂ ಸತತವಾಗಿ ತಿಲಕ್ ವರ್ಮ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಹೀಗಿದ್ದರೂ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲಾಗಿದೆ.

ಹೀಗಾಗಿ ನಿನ್ನೆ ತಿಲಕ್ ವರ್ಮ ಜೊತೆ ಗಂಭೀರ್ ಬಸ್ ಏರಲು ಹೋಗುವಾಗ ಅಲ್ಲೇ ಗುಂಪು ಸೇರಿದ್ದ ಅಭಿಮಾನಿಗಳು ‘ವಿ ವಾಂಟ್ ಸಂಜು’ ಎಂದು ಘೋಷಣೆ ಕೂಗಿದ್ದಾರೆ.

ಮೈದಾನದ ಹೊರಗೆ ಸೃಷ್ಟಿಯಾದ ಈ ವಾತಾವರಣ ಹಾಗೂ ಅಭಿಮಾನಿಗಳ ಅಸಮಾಧಾನದ ದನಿಯನ್ನು ಗಂಭೀರ್ ಅತ್ಯಂತ ಗಂಭೀರ ಮುಖಭಾವದಿಂದ ಆಲಿಸುತ್ತಾ ಮುಂದೆ ಸಾಗಿದರು. ಗ್ಯಾಲರಿಯಿಂದ ಸತತವಾಗಿ ಕೇಳಿಬರುತ್ತಿದ್ದ ಕೂಗನ್ನು ಗಮನಿಸಿದ ತಿಲಕ್ ವರ್ಮಾ ಕೂಡ ಒಮ್ಮೆ ಅಭಿಮಾನಿಗಳತ್ತ ನೋಡಿ ಪೆಚ್ಚಾಗಿ ಮುಂದೆ ನಡೆದರು.

pic.twitter.com/7B795hNErk

 

— Raghu देश प्रेमी (@Raghubharat2024) July 8, 2026

Share this Story:

Follow Webdunia kannada

ಮುಂದಿನ ಸುದ್ದಿ

IND vs ENG: ಟೀಂ ಇಂಡಿಯಾ ಹೀನಾಯವಾಗಿ ಸೋತ ಮೇಲೂ ಪತ್ರಿಕಾಗೋಷ್ಠಿಯಲ್ಲಿ ಕೋಚ್ ಗೌತಮ್ ಗಂಭೀರ್ ಹೀಗೆ ಹೇಳೋದಾ Video