Publish Date: Wed, 08 Jul 2026 (09:41 IST)
Updated Date: Wed, 08 Jul 2026 (09:52 IST)
ನ್ಯಾಟಿಂಗ್ ಹ್ಯಾಮ್: ಇಂಗ್ಲೆಂಡ್ ವಿರುದ್ಧ ನಿನ್ನೆ ಮತ್ತೊಂದು ಟಿ20 ಪಂದ್ಯದಲ್ಲಿ ಹೀನಾಯವಾಗಿ ಸೋತರೂ ಕೋಚ್ ಗೌತಮ್ ಗಂಭೀರ್ ಪತ್ರಿಕಾಗೋಷ್ಠಿಯಲ್ಲಿ ಏನು ಹೇಳಿದ್ರು ಗೊತ್ತಾ?
ನಿನ್ನೆಯ ಪಂದ್ಯವನ್ನು ಟೀಂ ಇಂಡಿಯಾ 202 ರನ್ ಗಳ ಬೃಹತ್ ಗುರಿ ಬೆನ್ನತ್ತಿದ್ದ ಭಾರತ ಕೇವಲ 76 ರನ್ ಗಳಿಗೆ ಆಲೌಟ್ ಆಗಿ 125 ರನ್ ಗಳ ದೊಡ್ಡ ಅಂತರದಿಂದ ಸೋತು ಹೋಗಿದೆ. ಭಾರತದ ಟಿ20 ಇತಿಹಾಸದಲ್ಲೇ ಇದು ಅತ್ಯಂತ ಹೀನಾಯ ಸೋಲಾಗಿದೆ.
ಐರ್ಲ್ಯಾಂಡ್ ವಿರುದ್ಧ ಟಿ20 ಸರಣಿ ಎರಡೂ ಪಂದ್ಯಗಳನ್ನು ಸೋತು ಟೀಂ ಇಂಡಿಯಾ ಅವಮಾನ ಅನುಭವಿಸಿತ್ತು. ಇದರ ಬೆನ್ನಲ್ಲೇ ಈಗ ಇಂಗ್ಲೆಂಡ್ ವಿರುದ್ಧವೂ ಸತತವಾಗಿ ಎರಡು ಪಂದ್ಯ ಸೋತಿದೆ. ಇದರೊಂದಿಗೆ ಟೀಂ ಇಂಡಿಯಾ ಹಿಂದೆಂದೂ ಕಾಣದ ಅವಮಾನಕ್ಕೊಳಗಾಗಿದೆ.
ಇದರ ಬೆನ್ನಲ್ಲೇ ಅಭಿಮಾನಿಗಳು ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮೇಲೆ ಇನ್ನಿಲ್ಲದಂತೆ ಕೆಂಡ ಕಾರುತ್ತಿದ್ದಾರೆ. ಇದರ ನಡುವೆ ನಿನ್ನೆ ಸೋಲಿನ ಬಳಿಕ ಪತ್ರಿಕಾಗೋಷ್ಠಿಯಲ್ಲಿ ತಮ್ಮನ್ನು ಗಂಭೀರ್ ಸಮರ್ಥಿಸಿಕೊಂಡಿದ್ದಾರೆ.
ನಮ್ಮದು ಹೊಸಬರ ತಂಡ. ವಿಶ್ವಕಪ್ ಗೆಲುವಿನ ನಂತರ ನಾವು ಸಾಕಷ್ಟು ಹೊಸದನ್ನು ಪ್ರಯತ್ನ ಮಾಡುತ್ತಿದ್ದೇವೆ. ನಾವು ವೈಭವ್ ಸೂರ್ಯವಂಶಿಯಂತಹ ಆಟಗಾರರಿಗೆ ಆಡುವ ಅವಕಾಶ ನೀಡಿದ್ದೇವೆ. ನಮ್ಮ ತಂಡದಲ್ಲಿ ಈಗ ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಇಲ್ಲ. ಅದರಿಂದ ಹೀಗಾಗುತ್ತಿದೆ ಅಷ್ಟೇ ಎಂದಿದ್ದಾರೆ.
ಆದರೆ ಇದಕ್ಕೆ ನೆಟ್ಟಿಗರು ಝಾಡಿಸಿದ್ದು ಎಷ್ಟು ದಿನ ಹೊಸ ತಂಡ, ಹೊಸ ಆಟಗಾರರು ಎಂದು ನೆಪ ಹೇಳುತ್ತೀರಿ? ಪ್ರತೀ ಬಾರಿ ಸೋತಾಗಲೂ ಇದೊಂದು ನೆಪ ಹೇಳುತ್ತೀರಿ. ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ರಜತ್ ಪಾಟೀದಾರ್, ದೇವದತ್ತ ಪಡಿಕ್ಕಲ್, ರಸಿಕಾ ದಾರ್ ಮುಂತಾದವರನ್ನು ಯಾಕೆ ಕಡೆಗಣಿಸುತ್ತೀರಿ? ಎಂದು ಪ್ರಶ್ನೆ ಮಾಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ