Publish Date: Sun, 05 Jul 2026 (10:30 IST)
Updated Date: Sun, 05 Jul 2026 (10:33 IST)
Photo Credit: Social media
ಲಂಡನ್: ಗೆಲ್ಲಬೇಕಾಗಿದ್ದ ಪಂದ್ಯವನ್ನು ಏಕಾಂಗಿಯಾಗಿ ಚಿನ್ನದ ಹರಿವಾಣದಲ್ಲಿಟ್ಟು ಇಂಗ್ಲೆಂಡ್ ಗೆ ಬಿಟ್ಟುಕೊಟ್ಟ ಟೀಂ ಇಂಡಿಯಾ ಬೌಲರ್ ರವಿ ಬಿಷ್ಣೋಯ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗುತ್ತಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎದುರಾಳಿಗೆ 191 ರನ್ ಗಳ ಗುರಿ ನೀಡಿತ್ತು. ಎರಡನೇ ಇನಿಂಗ್ಸ್ ನಲ್ಲಿ 17 ನೇ ಓವರ್ ವರೆಗೂ ಪಂದ್ಯ ಭಾರತದ ಕೈಯಲ್ಲೇ ಇತ್ತು. ಆದರೆ 17 ನೇ ಓವರ್ ನಲ್ಲಿ ರವಿ ಬೌಲಿಂಗ್ ಗಿಳಿಯುತ್ತಿದ್ದಂತೇ ಪಂದ್ಯದ ಚಿತ್ರಣವೇ ಬದಲಾಯಿತು.
ಈ ಓವರ್ ನಲ್ಲಿ ಎರಡು ನೋ ಬಾಲ್ ಸಹಿತ ರವಿ ಬರೋಬ್ಬರಿ 29 ರನ್ ಲೀಕ್ ಮಾಡಿದರು. ಇದರಿಂದ 12 ರ ಸರಾಸರಿಯಲ್ಲಿ ರನ್ ಗಳಿಸಬೇಕಾಗಿದ್ದ ಇಂಗ್ಲೆಂಡ್ 6 ರ ಸರಾಸರಿಗೆ ಬಂದು ನಿಂತಿತ್ತು. ಅಲ್ಲಿಯವರೆಗೆ ಭಾರತ ಗೆಲ್ಲುವುದು ಬಹುತೇಕ ಪಕ್ಕಾ ಆಗಿತ್ತು. ಆದರೆ ರವಿ ಬಿಷ್ಣೋಯ್ ಏಕಾಂಗಿಯಾಗಿ ಒಂದೇ ಓವರ್ ನಲ್ಲಿ ಗೆಲುವು ಇಂಗ್ಲೆಂಡ್ ಪಾಲಾಗುವಂತೆ ಮಾಡಿದರು. ಕೊನೆಗೆ ಇಂಗ್ಲೆಂಡ್ ಈ ಪಂದ್ಯವನ್ನು 4 ವಿಕೆಟ್ ಗಳಿಂದ ಗೆದ್ದುಕೊಂಡಿತು.
ಇದರಿಂದಾಗಿ ಈಗ ಸೋಷಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ಸಖತ್ ಫನ್ನಿ ಮೆಮೆಗಳು, ಟ್ರೋಲ್ ಗಳಾಗುತ್ತಿವೆ. ಅದರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಈ ಒಂದು ಮೆಮೆ ಸಖತ್ ವೈರಲ್ ಆಗಿದೆ. ಕನ್ನಡಿಗರಂತೂ ಇವನು ಯಾರು ಗುರೂ.. ನಾಯಿಗೆ ಹೊಡೆದಂಗೆ ಹೊಡೆದ್ರು ಎನ್ನುತ್ತಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ