Select Your Language

Notifications

webdunia
webdunia
webdunia
webdunia

IND vs ENG: ವೈಭವ್ ಸೂರ್ಯವಂಶಿ ಆಡ್ತಾರೆ ಎಂದು ಶ್ರೇಯಸ್ ಹೇಳಿದ ತಕ್ಷಣ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿತ್ತು ನೋಡಿ Video

Vaibhav Sooryavamshi
Photo Credit: BCCI
ಲಂಡನ್: ಕೊನೆಗೂ ಅನೇಕ ಅಭಿಮಾನಿಗಳ ಆಗ್ರಹವನ್ನು ಇಂದು ಟೀಂ ಇಂಡಿಯಾ ಪೂರೈಸಿದೆ. ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಪದಾರ್ಪಣೆ ಮಾಡಿದ್ದಾರೆ.

ಟಾಸ್ ಸಂದರ್ಭದಲ್ಲಿ ನಾಯಕ ಶ್ರೇಯಸ್ ಅಯ್ಯರ್ ವೈಭವ್ ಸೂರ್ಯವಂಶಿ ಆಡಲಿದ್ದಾರೆ ಎಂದು ಹೇಳಿದಾಗ ಅಭಿಮಾನಿಗಳಿಂದ ಭಾರೀ ಹರ್ಷೋದ್ಗಾರ ಕೇಳಿಬಂದಿದೆ. ಇಷ್ಟು ದಿನ ವೈಭವ್ ಗೆ ಒಂದು ಅವಕಾಶ ಕೊಡಿ ಎಂದು ಫ್ಯಾನ್ಸ್ ಆಗ್ರಹಿಸುತ್ತಲೇ ಇದ್ದರು. ಕೊನೆಗೂ ಅಭಿಮಾನಿಗಳ ಬಯಕೆ ಈಡೇರಿದೆ.

15 ವರ್ಷದ ವೈಭವ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದು ಈ ಮೂಲಕ ಸಚಿನ್ ದಾಖಲೆಯನ್ನು ಮುರಿದಿದ್ದಾರೆ. ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ದಾಖಲೆ ಮಾಡಿದರು.

ತಿಲಕ್ ವರ್ಮರಿಂದ ಕ್ಯಾಪ್ ಪಡೆದ ವೈಭವ್ ಕೊಂಚ ಭಾವುಕರಾದರು. ಈ ವೇಳೆ ಉಳಿದೆಲ್ಲಾ ಆಟಗಾರರು ಅವರನ್ನು ಸುತ್ತುವರಿದು ಅಭಿನಂದಿಸಿ  ಚಿಯರ್ ಅಪ್ ಮಾಡಿದರು. ಈ ಪಂದ್ಯದಲ್ಲಿ ವೈಭವ್ 10 ಎಸೆತಗಳಲ್ಲಿ 2 ಸಿಕ್ಸರ್ ಸಹಿತ ಗಳಿಸಿದ್ದು ಕೇವಲ 14 ರನ್. ಈ ವೇಳೆ ಅವರು ಜೋಸ್ ಬಟ್ಲರ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಆದರೆ ಅವರು ಹೊಡೆದ ಎರಡು ಸಿಕ್ಸರ್ ಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಹೊಸ ಸ್ಟಾರ್ ಆಗಮನವಾಗಿದೆ ಎಂದು ಸಾರುವಂತಿತ್ತು.

ಇನ್ನು ಭಾರತ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿದೆ. ಅಭಿಷೇಕ್ ಶರ್ಮಾ 43, ಇಶಾನ್ ಕಿಶನ್ 49, ಶ್ರೇಯಸ್ ಅಯ್ಯರ್ 37, ತಿಲಕ್ ವರ್ಮ 24 ರನ್ ಗಳಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ತಂಡಕ್ಕೆ ಆಯ್ಕೆ ಮಾಡಿದ್ಯಾಕೆ.. ನೆಟ್ಸ್ ನಲ್ಲೂ ವೈಭವ್ ಸೂರ್ಯವಂಶಿಗೆ ಇದೆಂಥಾ ಅವಸ್ಥೆ Video