Webdunia - Bharat's app for daily news and videos

Install App

IND vs ENG ODI: ವಿರಾಟ್ ಕೊಹ್ಲಿಗೆ ಇಂದು ಸತ್ವ ಪರೀಕ್ಷೆ

Krishnaveni K
ಬುಧವಾರ, 12 ಫೆಬ್ರವರಿ 2025 (09:10 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದು ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ನಡೆಯಲಿದ್ದು ಈ ಪಂದ್ಯ ವಿರಾಟ್ ಕೊಹ್ಲಿ ಪಾಲಿಗೆ ಸತ್ವ ಪರೀಕ್ಷೆಯಾಗಿದೆ.

ಈಗಾಗಲೇ ಫಾರ್ಮ್ ಕಳೆದುಕೊಂಡು ತೀವ್ರ ಟೀಕೆಯಲ್ಲಿರುವ ವಿರಾಟ್ ಕೊಹ್ಲಿ ಇಂದು ರನ್ ಗಳಿಸುವ ಒತ್ತಡದಲ್ಲಿದ್ದಾರೆ. ಈಗಾಗಲೇ ರೋಹಿತ್ ಶರ್ಮಾ ಶತಕ ಸಿಡಿಸಿ ತಮ್ಮ ಮೇಲಿದ್ದ ಒತ್ತಡ ಕಳೆದುಕೊಂಡಿದ್ದಾರೆ. ಇದೀಗ ಕೊಹ್ಲಿ ಸರದಿ.

ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಮೊದಲು ಅವರು ಕೊಂಚ ರನ್ ಗಳಿಸಲೇಬೇಕು. ಇಲ್ಲದೇ ಹೋದರೆ ಒಂದು ಕಾಲದಲ್ಲಿ  ವಿಶ್ವದ ಘಟಾನುಘಟಿ ಬೌಲರ್ ಗಳ ಬೆವರಿಳಿಸಿದ್ದ ಕೊಹ್ಲಿ ತಂಡಕ್ಕೆ ಹೊರೆಯಾಗಲಿದ್ದಾರೆ.

ಇನ್ನು ಭಾರತೀಯ ಅಭಿಮಾನಿಗಳಿಗೆ ಮತ್ತೊಂದು ಕಳಕಳಿಯೆಂದರೆ ಕೆಎಲ್ ರಾಹುಲ್ ಬ್ಯಾಟಿಂಗ್ ಕ್ರಮಾಂಕ. ಪ್ರಯೋಗ ಪಶುವಿನಂತಾಗಿರುವ ಪ್ರತಿಭಾವಂತ ಕ್ರಿಕೆಟಿಗ ರಾಹುಲ್ ಆರನೇ ಕ್ರಮಾಂಕದಲ್ಲಿ ಆಡುತ್ತಿದ್ದು ಅವರಿಗೆ ಈ ಪಂದ್ಯದಲ್ಲಾದರೂ ಮೇಲಿನ ಕ್ರಮಾಂಕ ಸಿಗಬಹುದು ಎಂಬ ವಿಶ್ವಾಸ ಅಭಿಮಾನಿಗಳದ್ದು. ಚಾಂಪಿಯನ್ಸ್ ಟ್ರೋಫಿ ದೃಷ್ಟಿಯಿಂದ ಭಾರತಕ್ಕೆ ಇದು ಮಹತ್ವದ ಪಂದ್ಯವಾಗಿದ್ದು ಎಲ್ಲಾ ಆಟಗಾರರಿಗೆ ಮತ್ತೊಮ್ಮೆ ಅಭ್ಯಾಸದ ವೇದಿಕೆಯಾಗಿರಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

ವಿಚ್ಛೇದನ ಪಡೆದ ಬೆನ್ನಲ್ಲೇ ಯಜುವೇಂದ್ರ ಚಾಹಲ್ ಪ್ರತಿಭೆಯನ್ನು ಕೊಂಡಾಡಿದ ಆಪ್ತ ಗೆಳತಿ ಆರ್‌ಜೆ ಮಹ್ವಾಶ

IPL 2025: ತವರಿನಲ್ಲಿ ಕಡಿಮೆ ರನ್‌ ಮಾಡಿಯೂ ಗೆದ್ದುಬೀಗಿದ ಪಂಜಾಬ್‌ ಕಿಂಗ್ಸ್‌: ಕೋಲ್ಕತ್ತಕ್ಕೆ ಭಾರೀ ಮುಖಭಂಗ

IPL 2025: ತವರಿನ ಪ್ರೇಕ್ಷಕರ ಮುಂದೆ ಪರದಾಡಿದ ಪಂಜಾಬ್‌ ಬ್ಯಾಟರ್‌ಗಳು: ಕೆಕೆಆರ್‌ ಬೌಲರ್‌ಗಳ ಕರಾಮತ್ತು

Glenn Maxwell: ಮ್ಯಾಕ್ಸ್ ವೆಲ್ ರನ್ನು ಹರಾಜಿನಲ್ಲಿ ಕೈ ಬಿಟ್ಟಿದ್ದಕ್ಕೇ ಬಚಾವ್ ಎಂದ ಆರ್ ಸಿಬಿ ಫ್ಯಾನ್ಸ್

ಮುಂದಿನ ಸುದ್ದಿ
Show comments