IND vs ENG: ಬಾಝ್ ಬಾಲ್ ಆಟ ತೋರಿಸು ನೋಡೋಣ.. ಜೋ ರೂಟ್ ಕೆಣಕಿದ ಸಿರಾಜ್: ವಿಡಿಯೋ

Krishnaveni K
ಗುರುವಾರ, 10 ಜುಲೈ 2025 (21:27 IST)
Photo Credit: X
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನ ಇಂಗ್ಲೆಂಡ್ ತಂಡದ ಬ್ಯಾಟಿಗ ಜೋ ರೂಟ್ ಗೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಬಾಝ್ ಬಾಲ್ ಆಟ ತೋರಿಸು ನೋಡೋಣ ಎಂದು ಕೆಣಕಿರುವ ವಿಡಿಯೋ ಈಗ ವೈರಲ್ ಆಗಿದೆ.

ಇಂಗ್ಲೆಂಡ್ ತಂಡ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಬಾಝ್ ಬಾಲ್ ಶೈಲಿ (ಆಕ್ರಮಣಕಾರೀ ಬ್ಯಾಟಿಂಗ್ ಶೈಲಿ) ಯಲ್ಲಿ ಆಡುತ್ತಾ ಬಂದಿದೆ. ಈ ಮಾದರಿಯಿಂದ ಅನೇಕ ಬಾರಿ ಗೆಲುವನ್ನೂ ಕಂಡಿದೆ. ಆದರೆ ಭಾರತದ ಎದುರು ಮಾತ್ರ ಇಂಗ್ಲೆಂಡ್ ನ ಬಾಝ್ ಬಾಲ್ ಶೈಲಿ ಆಟ ಪರಿಣಾಮಕಾರಿಯಾಗಿಲ್ಲ.

ಇದೇ ಕಾರಣಕ್ಕೆ ಇಂಗ್ಲೆಂಡ್ ಈ ಪಂದ್ಯದಲ್ಲಿ ತನ್ನ ಹಳೆಯ ಶೈಲಿಯಲ್ಲಿ ಆಡುತ್ತಿದೆ. ಟೆಸ್ಟ್ ಶೈಲಿಗೆ ತಕ್ಕಂತೇ ಬ್ಯಾಟಿಂಗ್ ಮಾಡುತ್ತಿದೆ. ಆದರೆ ಇದನ್ನಿಟ್ಟುಕೊಂಡು ಮೈದಾನದಲ್ಲಿ ಸಿರಾಜ್ ಎದುರಾಳಿ ಬ್ಯಾಟಿಗ ಜೋ ರೂಟ್ ರನ್ನು ಕೆಣಕಿದ್ದಾರೆ.

ಬೌಲಿಂಗ್ ಮಾಡಿದ ಬಳಿಕ ಸ್ಟ್ರೈಕರ್ ಎಂಡ್ ನಲ್ಲಿದ್ದ ಜೋ ರೂಟ್ ಬಳಿ ಬಂದ ಸಿರಾಜ್, ಬಾಝ್ ಬಾಝ್ ಬಾಝ್ ಬಾಲ್. ಬಾಝ್ ಬಾಲ್ ಆಟ ತೋರಿಸು, ನಾನು ನೋಡಬೇಕು ಎಂದು ಸಿರಾಜ್ ಕೆಣಕಿದ್ದಾರೆ. ಇನ್ನು ಇಂಗ್ಲೆಂಡ್ ಇತ್ತೀಚೆಗಿನ ವರದಿ ಬಂದಾಗ 4 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿದೆ. ಇದೂ ಕೂಡಾ ಕಳೆದ ಪಂದ್ಯದಂತೇ ಸಪಾಟೆ ಪಿಚ್ ಎನಿಸುತ್ತಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಚೆನ್ನಾಗಿ ಆಡಿದ್ರೂ ಖುಷಿಯಿಲ್ವಾ: ಪಂದ್ಯದ ಬಳಿಕ ರೋಹಿತ್ ಶರ್ಮಾ ಜೊತೆ ಗಂಭೀರ್ ಕಿತ್ತಾಟ Viral video

ಗೌತಮ್ ಗಂಭೀರ್ ಎದುರಿದ್ದಾಗ ವಿರಾಟ್ ಕೊಹ್ಲಿ ಮಾಡಿದ್ದೇನು: ಶಾಕಿಂಗ್ ವಿಡಿಯೋ

IND VS SA: ಅಬ್ಬರಿಸಿದ ವಿರಾಟ್ ಕೊಹ್ಲಿ, ಸೌತ್‌ ಆಫ್ರಿಕಾಗೆ ಬಿಗ್‌ ಟಾರ್ಗೇಟ್

ವಿರಾಟ್ ಕೊಹ್ಲಿ ಶತಕಕ್ಕೆ ಎಲ್ಲರಿಗಿಂತ ಹೆಚ್ಚು ಖುಷಿಪಟ್ಟವರು ಯಾರು ನೋಡಿ: Video

IND VS SA: ಕಿಂಗ್ ಕೊಹ್ಲಿ ಶತಕ ಬಾರಿಸುತ್ತಿದ್ದಂತ್ತೆ ಮೈದಾನಕ್ಕೆ ನುಗ್ಗಿದ ಅಭಿಮಾನಿ, ಮಾಡಿದ್ದೇನು ನೋಡಿ Video

ಮುಂದಿನ ಸುದ್ದಿ
Show comments