Daily Horoscope

IND vs ENG: ಕೆಎಲ್ ರಾಹುಲ್ ಬ್ಯಾಟ್ ಕಾಣೆ: ಮಳೆ ಬಂತೆಂದು ಬ್ಯಾಟಿಗ ಮಾಡಿದ್ದೇನು ನೋಡಿ

Krishnaveni K
ಸೋಮವಾರ, 23 ಜೂನ್ 2025 (09:58 IST)
Photo Credit: X
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಲೀಡ್ಸ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಂತ್ಯಕ್ಕೆ ಮಳೆಯಿಂದಾಗಿ ದಿನದಾಟ ಬೇಗನೇ ಮುಕ್ತಾಯಗೊಳಿಸಲಾಯಿತು. ಮಳೆ ಬಂತೆಂದು ಕೆಎಲ್ ರಾಹುಲ್ ತಮ್ಮ ಬ್ಯಾಟ್ ಮುಚ್ಚಿಟ್ಟುಕೊಂಡ ಪರಿ ಈಗ ಎಲ್ಲರ ಗಮನಸೆಳೆಯುತ್ತಿದೆ.

ಕೆಎಲ್ ರಾಹುಲ್ ತಮ್ಮ ಬ್ಯಾಟ್, ಗ್ಲೌಸ್ ಗಳನ್ನು ದೇವರ ಸಮಾನವೆಂದು ಪರಿಗಣಿಸುತ್ತಾರೆ. ಇದಕ್ಕೆ ಈ ಹಿಂದೊಮ್ಮೆ ಅವರು ಗ್ಲೌಸ್ ನೆಲಕ್ಕೆ ಬಿದ್ದಾಗ ನಮಸ್ಕರಿಸಿ ಮತ್ತೆ ಅದನ್ನು ಎತ್ತಿಕೊಂಡ ವಿಡಿಯೋವೇ ಸಾಕ್ಷಿ. ನಿನ್ನೆಯ ಪಂದ್ಯದಲ್ಲೂ ಅವರು ತಮ್ಮ ಬ್ಯಾಟ್ ನ್ನು ಅಷ್ಟೇ ಜೋಪಾನವಾಗಿ ಕಾಯ್ದುಕೊಂಡಿದ್ದಾರೆ.

ಬ್ಯಾಟಿಗರಿಗೆ ಬ್ಯಾಟ್ ಸುಸ್ಥಿತಿಯಲ್ಲಿರುವುದು ತುಂಬಾ ಮುಖ್ಯ. ನಿನ್ನೆ ಮೈದಾನದಿಂದ ಹೊರ ನಡೆಯುವಾಗ ಮಳೆ ಸುರಿಯುತ್ತಿತ್ತು. ಹೀಗಾಗಿ ಬ್ಯಾಟ್ ಹೊರಗಿಟ್ಟುಕೊಂಡು ಹೋದರೆ ಒದ್ದೆಯಾಗುವ ಭೀತಿಯಿತ್ತು. ಈ ಕಾರಣಕ್ಕೆ ರಾಹುಲ್ ಅದನ್ನು ತಮ್ಮ ಶರ್ಟ್ ಒಳಗೆ ಅಡಗಿಸಿಟ್ಟುಕೊಂಡು ಪೆವಿಲಿಯನ್ ಗೆ ತೆರಳಿದ್ದಾರೆ.

ರಾಹುಲ್ ರ ಈ ವಿಭಿನ್ನ ನಡೆ ಎಲ್ಲರ ಗಮನ ಸೆಳೆದಿದೆ. ಸಾಮಾನ್ಯವಾಗಿ ಯಾರೂ ಬ್ಯಾಟ್ ಬಗ್ಗೆ ಇಷ್ಟೊಂದು ಶ್ರದ್ಧೆ ವಹಿಸುವುದಿಲ್ಲ. ಇದಲ್ಲದೇ ಇದ್ದರೆ ಇನ್ನೊಂದು ಬ್ಯಾಟ್ ಎಂದು ಒದ್ದೆಯಾಗಲು ಬಿಡಬಹುದಿತ್ತು. ಆದರೆ ರಾಹುಲ್ ಹಾಗೆ ಮಾಡಿಲ್ಲ ಎನ್ನುವುದು ವಿಶೇಷ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AFG: ಅಫ್ಘಾನಿಸ್ತಾನ ವಿರುದ್ಧ ವಿಶ್ವದಾಖಲೆಯ ಶತಕ ಸಿಡಿಸಿ ವಿಶಿಷ್ಟವಾಗಿ ಸಂಭ್ರಮಿಸಿದ ಅಭಿಷೇಕ್ ಶರ್ಮಾ Video

ಟೀಂ ಇಂಡಿಯಾ ಮುಖ್ಯ ಆಯ್ಕೆಗಾರನ ಸ್ಥಾನಕ್ಕೆ ಅಜಿತ್ ಅಗರ್ಕರ್ ಬಳಿಕ ಕೇಳಿಬರುತ್ತಿದೆ ಈ ಅಚ್ಚರಿಯ ಹೆಸರು

ಏಷ್ಯನ್ ಗೇಮ್ಸ್ 2026 ಆರಂಭ ಯಾವಾಗ, ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ಸಂಪೂರ್ಣ ವಿವರ

ಪಾಕಿಸ್ತಾನದ ಯುವ ಕ್ರಿಕೆಟಿಗನಿಗೆ ಜಸ್ಪ್ರೀತ್ ಬುಮ್ರಾಗೆ ಆರು ಸಿಕ್ಸರ್ ಚಚ್ಚೋದೇ ಗುರಿಯಂತೆ ನೋಡ್ರಪ್ಪಾ..

ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಗೆ ಶಾಕ್ ಕೊಡಲು ಮುಂದಾದ ಬಿಸಿಸಿಐ

ಮುಂದಿನ ಸುದ್ದಿ
Show comments