Webdunia - Bharat's app for daily news and videos

Install App

IND vs ENG: ಬುಮ್ರಾಗೆ ಹೆದರಲ್ಲ ಎಂದಿದ್ದ ಇಂಗ್ಲೆಂಡ್, 5 ವಿಕೆಟ್ ಕಿತ್ತು ತೋರಿಸಿದ ವೇಗಿ

Krishnaveni K
ಭಾನುವಾರ, 22 ಜೂನ್ 2025 (20:28 IST)
Photo Credit: X
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಮುನ್ನ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್  ನಾವು ಬುಮ್ರಾಗೆಲ್ಲಾ ಹೆದರಲ್ಲ ಎಂದಿದ್ದರು. ಆದರೆ ಈಗ ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ 5 ವಿಕೆಟ್ ಕಿತ್ತ ಬುಮ್ರಾ ತಾವು ಎಂಥಾ ಕ್ಲಾಸ್ ಬೌಲರ್ ಎಂದು ತೋರಿಸಿಕೊಟ್ಟಿದ್ದಾರೆ.

ಅಪ್ಪಟ ಬ್ಯಾಟಿಂಗ್ ಪಿಚ್ ನಲ್ಲಿ ಎರಡೂ ತಂಡದ ಬೌಲರ್ ಗಳು ವಿಕೆಟ್ ಕೀಳಲು ಪರದಾಡಿದ್ದಾರೆ. ಮೊದಲ ಇನಿಂಗ್ಸ್ ಭಾರತ 471 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಈಗ 465 ರನ್ ಗಳಿಗೆ ಆಲೌಟ್ ಆಗಿದೆ. ಈ ಮೂಲಕ 6 ರನ್ ಗಳ ಮೊದಲ ಇನಿಂಗ್ಸ್ ಹಿನ್ನಡೆ ಅನುಭವಿಸಿದೆ.

ಒಂದು ಹಂತದಲ್ಲಿ ಇಂಗ್ಲೆಂಡ್ ಮುನ್ನಡೆ ಸಾಧಿಸಬಹುದೇನೋ ಅನಿಸಿತ್ತು. ಆದರೆ ಭಾರತಕ್ಕೆ ಮೊದಲ ಓವರ್ ನಿಂದ ಕೊನೆಯ ಓವರ್ ವರೆಗೂ ಪರಿಣಾಮಕಾರಿ ಬೌಲಿಂಗ್ ಮಾಡಿ ನೆರವಾಗಿದ್ದು ಜಸ್ಪ್ರೀತ್ ಬುಮ್ರಾ. ಇಂಗ್ಲೆಂಡ್ ಪ್ರಮುಖ 5 ವಿಕೆಟ್ ಕಿತ್ತ ಬುಮ್ರಾ ತಾವು ಎಂಥಾ ಕ್ಲಾಸ್ ಬೌಲರ್ ಮತ್ತು ಭಾರತ ತಂಡದ ಅವಿಭಾಜ್ಯ ಅಂಗ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಇಂಗ್ಲೆಂಡ್ ಪರ ಒಲಿ ಪಾಪ್ ಶತಕ ಗಳಿಸಿದರೆ ಹ್ಯಾರಿ ಬ್ಯೂಕ್ 99 ರನ್ ಗಳಿಗೆ ಔಟಾಗುವ ಮೂಲಕ ಶತಕ ವಂಚಿತರಾದರು. ಉಳಿದಂತೆ ಭಾರತದ ಪರ ಪ್ರಸಿದ್ಧ ಕೃಷ್ಣ 3, ಮೊಹಮ್ಮದ್ ಸಿರಾಜ್ 2 ವಿಕೆಟ್ ಕಬಳಿಸಿದರು. ಉಳಿದಂತೆ ಶ್ರಾದ್ಧೂಲ್ ಠಾಕೂರ್, ರವೀಂದ್ರ ಜಡೇಜಾಗೆ ವಿಕೆಟ್ ದಕ್ಕಲಿಲ್ಲ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಬುಮ್ರಾಗೆ ಹೆದರಲ್ಲ ಎಂದಿದ್ದ ಇಂಗ್ಲೆಂಡ್, 5 ವಿಕೆಟ್ ಕಿತ್ತು ತೋರಿಸಿದ ವೇಗ

ರಾಜಕೀಯ ಅಖಾಡಕ್ಕೆ ಧುಮುಕುತ್ತಾರಾ ಸೌರಬ್ ಗಂಗೂಲಿ, ಮಾಜಿ ಕ್ರಿಕೆಟಿಗನ ಅಚ್ಚರಿ ಹೇಳಿಕೆ

Video: ರಿಷಭ್ ಪಂತ್ ಗೆ ಅಂದು ಸ್ಟುಪಿಡ್ ಎಂದಿದ್ದ ಸುನಿಲ್ ಗವಾಸ್ಕರ್ ಇಂದು ಹೇಳಿದ್ದೇನು

IND vs ENG: ರಿಷಭ್ ಪಂತ್ ಈಗ ಪಲ್ಟಿ ಸ್ಟಾರ್: ಈ ವಿಡಿಯೋನೇ ಸಾಕ್ಷಿ

IND vs ENG: ರಿಷಭ್ ಪಂತ್ ಶತಕ, ಲೀಡ್ಸ್ ನಲ್ಲಿ ಟೀಂ ಇಂಡಿಯಾದಿಂದ 2002 ರ ರಿಪೀಟ್ ಶೋ

ಮುಂದಿನ ಸುದ್ದಿ
Show comments