IND vs BAN test: ಬಾಲ್ ಹಿಡಿಯಕ್ಕೂ ಲಾಯಕ್ಕಿಲ್ಲದವನು, ಕೆಎಲ್ ರಾಹುಲ್ ಮೇಲೆ ರೋಹಿತ್, ಸಿರಾಜ್ ಸಿಟ್ಟು

Krishnaveni K
ಸೋಮವಾರ, 30 ಸೆಪ್ಟಂಬರ್ 2024 (11:39 IST)
Photo Credit: X
ಕಾನ್ಪುರ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ವರುಣ ಕೃಪೆ ತೋರಿದ್ದು ನಾಲ್ಕನೇ ದಿನದಾಟ ನಡೆಯುತ್ತಿದೆ. ಇಂದಿನ ದಿನದಾಟದಲ್ಲಿ ಮೈದಾನದಲ್ಲೇ ಕಳಪೆ ಫೀಲ್ಡಿಂಗ್ ಮಾಡಿದ ಕೆಎಲ್ ರಾಹುಲ್ ಮೇಲೆ ನಾಯಕ ರೋಹಿತ್ ಶರ್ಮಾ ಮತ್ತು ಬೌಲರ್ ಮೊಹಮ್ಮದ್ ಸಿರಾಜ್ ಸಿಟ್ಟಾದ ಘಟನೆ ನಡೆದಿದೆ.

ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತ್ತು. ಮೊದಲ ದಿನ 35 ಓವರ್ ಗಳ ಪಂದ್ಯ ನಡೆದಿತ್ತು. ಬಳಿಕ ಎರಡು ದಿನ ಮಳೆಯಿಂದಾಗಿ ಪಂದ್ಯ ನಡೆಯಲಿಲ್ಲ. ಇಂದು ನಾಲ್ಕನೇ ದಿನ ಪಂದ್ಯ ನಡೆಯುತ್ತಿದೆ. ಬಾಂಗ್ಲಾದೇಶ ಬ್ಯಾಟಿಂಗ್ ಮುಂದುವರಿಸಿದೆ.

ಮೊಮಿನುಲ್ ಹಕ್ ಹೊಡೆದ ಬಾಲ್ ನ್ನು ಕೆಎಲ್ ರಾಹುಲ್ ತಡೆಯಲು ವಿಫಲರಾದರು. ಬಳಿಕ ಚೇಸ್ ಕೂಡಾ ಮಾಡಲಿಲ್ಲ. ಇದು ನಾಯಕ ರೋಹಿತ್ ಶರ್ಮಾ ಮತ್ತು ಬೌಲರ್ ಮೊಹಮ್ಮದ್ ಸಿರಾಜ್ ಕೆಂಗಣ್ಣಿಗೆ ಗುರಿಯಾಯಿತು. ರೋಹಿತ್ ನಿರಾಸೆಯಿಂದ ಮುಖ ಮುಚ್ಚಿಕೊಂಡರೆ ಸಿರಾಜ್ ಕೂಡಾ ಸಿಟ್ಟಿನಿಂದ ದಿಟ್ಟಿಸಿ ನೋಡಿದರು.

ಇಬ್ಬರೂ ತನ್ನ ಮೇಲೆ ಸಿಟ್ಟಿಗೆದ್ದಿರುವುದನ್ನು ನೋಡಿ ಕೆಎಲ್ ರಾಹುಲ್ ಬಾಲ್ ತುಂಬಾ ವೈಡ್ ಆಗಿತ್ತು ಎಂದು ಸಮಜಾಯಿಷಿ ಕೊಡಲು ನೋಡಿದರು. ಆದರೆ ಕೆಎಲ್ ರಾಹುಲ್ ಈ ವಿಚಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ. ರನ್ ಮಾಡಲ್ಲ, ಫೀಲ್ಡಿಂಗ್ ಗೂ ಲಾಯಕ್ಕಿಲ್ಲ ಎಂದು ನೆಟ್ಟಿಗರು ಟೀಕ್ಷಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮಹಿಳಾ ಏಕದಿನ ವಿಶ್ವಕಪ್‌ ಗೆದ್ದ ಬೆನ್ನಲ್ಲೇ ಚೊಚ್ಚಲ ಅಂಧರ ಟಿ20 ವಿಶ್ವಕಪ್ ಕಿರೀಟ ಜಯಿಸಿದ ಭಾರತ

IND vs SA: ಏಕದಿನ ಸರಣಿಗೆ ಭಾರತ ತಂಡ ಪ್ರಕಟ, ಕನ್ನಡಿಗ ರಾಹುಲ್‌ಗೆ ಒಲಿದ ನಾಯಕತ್ವ

IND vs SA 2nd Test: ಹರಿಣ ಪಡೆಯ ಬಾಲಂಗೋಚಿಗಳ ಆಟಕ್ಕೆ ಸುಸ್ತಾದ ಭಾರತದ ಬೌಲರ್‌ಗಳು

ಸ್ಮೃತಿ ಮಂಧಾನ ಮದುವೆ ದಿಡೀರ್ ಮುಂದೂಡಿಕೆ: ಕಾರಣ ಶಾಕಿಂಗ್

Australian Open: ದೀರ್ಘ ಕಾಯುವಿಕೆಯ ಬಳಿಕ ಕೊನೆಗೂ ಕಿರೀಟ ಗೆದ್ದ ಲಕ್ಷ್ಯ ಸೇನ್

ಮುಂದಿನ ಸುದ್ದಿ
Show comments