IND vs BAN Test: ಟೀಂ ಇಂಡಿಯಾದಲ್ಲಿ ಇಂದು ಪ್ರಯೋಗ ಖಚಿತ

Krishnaveni K
ಶನಿವಾರ, 12 ಅಕ್ಟೋಬರ್ 2024 (08:57 IST)
ಹೈದರಾಬಾದ್: ಬಾಂಗ್ಲಾದೇಶ ವಿರುದ್ಧ ಈಗಾಗಲೇ ಸರಣಿ ಗೆದ್ದಿರುವ ಟೀಂ ಇಂಡಿಯಾ ಇಂದು ಔಪಚಾರಿಕ ಪಂದ್ಯವಾಡಲು ಸಜ್ಜಾಗಿದೆ. ಈ ಪಂದ್ಯವನ್ನು ಗೆದ್ದರೆ ಭಾರತ ಸರಣಿ ಕ್ಲೀಪ್ ಮಾಡಿಕೊಳ್ಳಲಿದೆ.

ಈಗಾಗಲೇ ಕಳೆದ ಎರಡೂ ಟಿ20 ಪಂದ್ಯಗಳಲ್ಲಿ ಭಾರತ ತಂಡ ಅಧಿಕಾರಯುತ ಗೆಲುವು ಸಾಧಿಸಿದೆ. ಎರಡೂ ಪಂದ್ಯಗಳಲ್ಲಿ ಎದುರಾಳಿಗಳಿಗೆ ಉಸಿರೆತ್ತಲೂ ಅವಕಾಶ ನೀಡಿಲ್ಲ. ಇಂದೂ ಕೂಡಾ ಅಂತಹದ್ದೇ ಮತ್ತೊಂದು ಪಂದ್ಯ ನಿರೀಕ್ಷಿಸಬಹುದಾಗಿದೆ. ಹಿರಿಯರ ಅನುಪಸ್ಥಿತಿಯಲ್ಲಿ ಭಾರತ ಕಿರಿಯರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

ಭಾರತ ತಂಡ ಈ ಪಂದ್ಯಕ್ಕೆ ಬೆಂಚ್ ಸ್ಟ್ರೆಂಗ್ತ್ ಪರೀಕ್ಷಿಸುವ ಸಾಧ್ಯತೆಯಿದೆ. ಕಳೆದ ಎರಡೂ ಪಂದ್ಯಗಳಲ್ಲಿ ತಂಡದಲ್ಲಿ ಯಾವುದೇ ಬದಲಾವಣೆಯಿರಲಿಲ್ಲ. ಆದರೆ ಈ ಪಂದ್ಯದಲ್ಲಿ ಕಳೆದ ಪಂದ್ಯದಲ್ಲಿ ಆಡದ ಜಿತೇಶ್ ಶರ್ಮ, ಹರ್ಷಿತ್ ರಾಣಾ ಮುಂತಾದವರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.

ಅತ್ತ ಬಾಂಗ್ಲಾದೇಶ ಇಲ್ಲಿಗೆ ಬಂದಾಗಿನಿಂದ ಒಂದೇ ಒಂದು ಪಂದ್ಯ ಗೆಲುವು ಸಾಧಿಸಿಲ್ಲ. ಹೀಗಾಗಿ ಕನಿಷ್ಠ ಈ ಪಂದ್ಯವನ್ನಾದರೂ ಗೆದ್ದು ಶುಭ ವಿದಾಯ ಮಾಡುವ ಹುಮ್ಮಸ್ಸಿನಲ್ಲಿದೆ. ಆದರೆ ತಂಡಕ್ಕೆ ಅನುಭವಿ ಶಕೀಬ್ ಅಲ್ ಹಸನ್ ನಂತಹ ಆಟಗಾರರ ಅನುಪಸ್ಥಿತಿ ಕಾಡುತ್ತಿದೆ. ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು ಜಿಯೋ ಸಿನಿಮಾ ಆಪ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.
 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಐಪಿಎಲ್ 2026: ಜಿಟಿ ವಿರುದ್ಧ ಡಿಸಿ ಘರ್ಷಣೆ ವೇಳೆ ಸ್ಲೋ ಓವರ್ ರೇಟ್‌ಗಾಗಿ ಶುಭಮನ್ ಗಿಲ್‌ಗೆ 12 ಲಕ್ಷ ದಂಡ

ವಿರಾಟ್ ಕೊಹ್ಲಿ ಜೊತೆ ಹೋಲಿಕೆ ಮಾಡಿದ್ದಕ್ಕೆ ಪತ್ರಿಕಾಗೋಷ್ಠಿಯಲ್ಲೇ ಬಾಬರ್ ಅಜಮ್ ಸಿಟ್ಟು Video

IPL 2026: ಮೈದಾನದಲ್ಲಿ ಮಗಳಿಗಾಗಿ ಸೆಲೆಬ್ರೇಷನ್ ಮಾಡಿದ ಕೆಎಲ್ ರಾಹುಲ್ Video

IPL 2026: ಇಬ್ಬರು ಕನ್ನಡಿಗರ ಪೈಪೋಟಿ ನಡುವೆ ಗೆದ್ದಿದ್ದು ಒಬ್ಬ ಕನ್ನಡಿಗ ಮಾತ್ರ

ರಾಹುಲ್‌, ಮಿಲ್ಲರ್‌ ಹೋರಾಟಕ್ಕೆ ಸಿಗದ ಗೆಲುವು; ಗುಜರಾತ್‌ಗೆ ರೋಚಕ ಒಂದು ರನ್‌ ಗೆಲುವು

ಮುಂದಿನ ಸುದ್ದಿ
Show comments