ಪಾಕಿಸ್ತಾನಕ್ಕೆ ಟೆಸ್ಟ್ ಕ್ರಿಕೆಟ್ ನಲ್ಲೇ ಹೀನಾಯ ಸೋಲು: ಸೋಷಿಯಲ್ ಮೀಡಿಯಾ ತುಂಬಾ ಟ್ರೋಲು

Sampriya
ಶುಕ್ರವಾರ, 11 ಅಕ್ಟೋಬರ್ 2024 (19:31 IST)
Photo Courtesy X
ಮುಲ್ತಾನ್ ಕ್ರೀಡಾಂಗಣದಲ್ಲಿ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಹೀನಾಯ ಸೋಲನ್ನು ಅನುಭವಿಸಿದೆ. ಇದು ಟೆಸ್ಟ್‌ ಕ್ರಿಕೆಟ್ ಇತಿಹಾಸದಲ್ಲೇ ಅವಮಾನಕರ ಸೋಲಾಗಿದೆ.

ಈ ಸೋಲಿನೊಂದಿಗೆ ಪಾಕಿಸ್ತಾನ ಕ್ರಿಕೆಟ್ ಹೆಸರಿಗೆ ನಾಚಿಕೆಗೇಡಿನ ದಾಖಲೆಯೊಂದು ಸೇರ್ಪಡೆಯಾಗಿದೆ. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ತಂಡ ಅನುಭವಿಸದ ಸೋಲನ್ನು ಪಾಕ್ ತಂಡ ಎದುರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್‌ಗೆ ಒಳಗಾಗಿದೆ.

ಟಾಸ್ ಗೆದ್ದು ಮೊದಲ ಇನಿಂಗ್ಸ್‌ ಆರಂಭಿಸಿದ್ದ ಪಾಕಿಸ್ತಾನ ತಂಡ 556 ರನ್ ಕಲೆಹಾಕಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಇಂಗ್ಲೆಂಡ್ ಕೂಡ 823 ರನ್​ಗಳ ಬಿಗ್ ಇನ್ನಿಂಗ್ಸ್ ಆಡಿತ್ತು. ಹೀಗಾಗಿ ಪಂದ್ಯದ ಮೊದಲ ಮೂರೂವರೆ ದಿನಗಳ ಕಾಲ ಪಂದ್ಯ ಡ್ರಾದತ್ತ ಸಾಗುವಂತೆ ತೋರುತ್ತಿತ್ತು. ಆದರೆ ನಾಲ್ಕನೇ ದಿನದ ಕೊನೆಯ ಸೆಷನ್‌ನಿಂದ ಪಂದ್ಯ ಹೊಸ ತಿರುವು ಪಡೆದುಕೊಂಡಿತು. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದು ಮೊದಲ ಇನ್ನಿಂಗ್ಸ್‌ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ನಂತರವೂ ಇನ್ನಿಂಗ್ಸ್‌ ಸೋಲು ಎದುರಿಸಿರುವುದು ಇದೇ ಮೊದಲು.

ಈ ಸೋಲು ಅನುಭವಿಸಿದ ಪಾಕಿಸ್ತಾನ ಕ್ರಿಕೆಟ್ ತಂಡ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಪಾಕಿಸ್ತಾನದ ಆಟಗಾರರಾದ ಬಾಬರ್ ಆಜಂ ಪಂಚರ್ ಶಾಪ್‌ವೊಂದನ್ನು ನಡೆಸುವ ಹಾಗೇ ಹಾಗೂ ಡಾಂಬರು ರೋಡ್‌ನಲ್ಲಿ ಕ್ರಿಕೆಟ್ ಆಡುವಾಗ ಹಾಗೇ ಟ್ರೋಲ್ ಮಾಡಿದ್ದಾರೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA Test: ಟೀಂ ಇಂಡಿಯಾ ನಾಳೆಯೇ ಟೆಸ್ಟ್ ಮ್ಯಾಚ್ ಮುಗಿಸೋದು ಪಕ್ಕಾ

IND vs SA: ಬ್ಯಾಟಿಂಗ್ ನಿಲ್ಲಿಸಿ ದಿಡಿರ್ ಮೈದಾನ ತೊರೆದ ಕ್ಯಾಪ್ಟನ್ ಶುಭಮನ್ ಗಿಲ್

ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾಗೆ ಅವಮಾನಕರ ಪದ ಬಳಸಿದ್ರಾ ಜಸ್ಪ್ರೀತ್ ಬುಮ್ರಾ video

ವಿರಾಟ್ ಕೊಹ್ಲಿ ಶತಕದ ಸ್ಟೈಲ್ ಕಾಪಿ ಮಾಡಿದ ಬಾಬರ್ ಅಜಮ್: ಸ್ವಂತಿಕೆನೇ ಇಲ್ವಾ ಎಂದ ನೆಟ್ಟಿಗರು video

IND vs SA: ಟೀಂ ಇಂಡಿಯಾ ವಿರುದ್ಧ ಜುಜುಬಿ ಮೊತ್ತಕ್ಕೆ ಆಲೌಟ್ ಆದ ದಕ್ಷಿಣ ಆಫ್ರಿಕಾ

ಮುಂದಿನ ಸುದ್ದಿ
Show comments