Webdunia - Bharat's app for daily news and videos

Install App

IND vs AUS: ಟ್ರಾವಿಸ್ ಹೆಡ್ ಎಂದರೆ ಟೀಂ ಇಂಡಿಯಾಗೆ ಭಯ ಯಾಕೆ: ಇಲ್ಲಿದೆ ಭಾರತದ ವಿರುದ್ಧ ಹೆಡ್ ದಾಖಲೆಗಳ ಪಟ್ಟಿ

Krishnaveni K
ಮಂಗಳವಾರ, 4 ಮಾರ್ಚ್ 2025 (09:35 IST)
Photo Credit: X
ದುಬೈ: ಚಾಂಪಿಯನ್ಸ್ ಟ್ರೋಫಿ 2025 ರ ಸೆಮಿಫೈನಲ್ ನಲ್ಲಿ ಇಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲಿರುವ ಟೀಂ ಇಂಡಿಯಾಗೆ ಟ್ರಾವಿಸ್ ಹೆಡ್ ಭಯವಿದೆ. ಅಷ್ಟಕ್ಕೂ ಟೀಂ ಇಂಡಿಯಾಗೆ ಹೆಡ್ ಕಂಡರೆ ಭಯ ಯಾಕೆ ಇಲ್ಲಿದೆ ಅವರ ದಾಖಲೆಗಳ ಪಟ್ಟಿ.

ಭಾರತದ ವಿರುದ್ಧ ಅತ್ಯುತ್ತಮ ಆಟ ಆಡುವ ಕೆಲವೇ ಆಟಗಾರರ ಪೈಕಿ ಟ್ರಾವಿಸ್ ಹೆಡ್ ಕೂಡಾ ಒಬ್ಬರು. ಅದು ಇತ್ತೀಚೆಗಿನ ದಿನಗಳಲ್ಲಿ ಪದೇ ಪದೇ ಸಾಬೀತಾಗುತ್ತಿದೆ. ಭಾರತದ ವಿರುದ್ಧದ ಮಹತ್ವದ ಪಂದ್ಯಗಳಲ್ಲಿ ಆಸೀಸ್ ಆರಂಭಿಕ ಮೈಮೇಲೆ ಭೂತ ಹೊಕ್ಕವರಂತೆ ಬೀಡುಬೀಸಾಗಿ ಪಂದ್ಯವನ್ನೇ ಕಸಿಯುತ್ತಾರೆ.

ಇದಕ್ಕೆ ಬೆಸ್ಟ್ ಉದಾಹರಣೆ ಕಳೆದ ಏಕದಿನ ವಿಶ್ವಕಪ್. ಇದು ಇಷ್ಟೇ ಅಲ್ಲ. ಭಾರತದ ವಿರುದ್ಧ ಮಹತ್ವದ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಎಷ್ಟೆಷ್ಟು ರನ್ ಗಳಿಸಿದ್ದಾರೆ ಇಲ್ಲಿದೆ ನೋಡಿ ವಿವರ.

ಏಕದಿನ ವಿಶ್ವಕಪ್ ಫೈನಲ್: ಅಹಮ್ಮದಾಬಾದ್ ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್ ಭಾರತದ ಚಾಂಪಿಯನ್ ಕನಸನ್ನು ನುಚ್ಚು ನೂರು ಮಾಡಿದ್ದು ಟ್ರಾವಿಸ್ ಹೆಡ್. 137 ರನ್ ಸಿಡಿಸಿ ಅದುವರೆಗೆ ಸೋಲೇ ಕಾಣದ ಭಾರತಕ್ಕೆ ಸೋಲುಣಿಸಿ ಕಪ್ ಕಸಿದುಕೊಂಡಿದ್ದರು.

ಡಬ್ಲ್ಯುಟಿಸಿ ಫೈನಲ್: ಇದಕ್ಕೆ ಮೊದಲು ನಡೆದಿದ್ದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಭಾರತದ ವಿರುದ್ಧ 146 ರನ್ ಸಿಡಿಸಿದ್ದ ಟ್ರಾವಿಸ್ ಭಾರತದ ಗೆಲುವಿನ ಕನಸು ಭಗ್ನಗೊಳಿಸಿದ್ದರು.

2024 ರ ಟಿ20 ವಿಶ್ವಕಪ್: ಟೀಂ ಇಂಡಿಯಾ ಈ ಪಂದ್ಯವನ್ನು ಗೆದ್ದಿತ್ತು. ಹಾಗಿದ್ದರೂ ಆ ಪಂದ್ಯದಲ್ಲೂ ಟ್ರಾವಿಸ್ ಹೆಡ್ 43 ಎಸೆತಗಳಿಂದ 76 ರನ್ ಚಚ್ಚಿ ಅಪಾಯಕಾರಿಯಾಗಿದ್ದರು.

2024 ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ: ಈ ಸರಣಿಯನ್ನು ಭಾರತ ಗೆದ್ದುಕೊಂಡಿದ್ದ ಈ ವರ್ಷ ಸತತ ಮೂರನೇ ಬಾರಿಗೆ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಆಡಬಹುದಿತ್ತು. ಆದರೆ ಈ ಸರಣಿಯಲ್ಲಿ ಸತತ ರನ್ ಗಳಿಸಿದ್ದ ಟ್ರಾವಿಸ್ ಹೆಡ್ ಭಾರತದ ಕನಸು ನುಚ್ಚುನೂರು ಮಾಡಿದರು. ಈ ಸರಣಿಯಲ್ಲಿ ಅವರು ಒಟ್ಟು 448 ರನ್ ಗಳಿಸಿದ್ದರು.

ಹೀಗಾಗಿಯೇ ಭಾರತಕ್ಕೆ ಟ್ರಾವಿಸ್ ಹೆಡ್ ದೊಡ್ಡ ತಲೆನೋವು. ಪ್ರತೀ ಭಾರೀ ಭಾರತದ ವಿರುದ್ಧ ಅತ್ಯುತ್ತಮ ಆಟವಾಡುವ ಅವರನ್ನು ಬೇಗನೇ ಔಟ್ ಮಾಡದೇ ಇದ್ದರೆ ಟೀಂ ಇಂಡಿಯಾಕ್ಕೆ ಈ ಪಂದ್ಯ ಗೆಲ್ಲಲು ಕಷ್ಟವಾಗಬಹುದು ಎಂಬುದೇ ಅಭಿಮಾನಿಗಳ ಆತಂಕವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments