Publish Date: Wed, 17 Jun 2026 (21:30 IST)
Updated Date: Wed, 17 Jun 2026 (21:33 IST)
ಲಕ್ನೋ: ಅಫ್ಘಾನಿಸ್ತಾನ ವಿರುದ್ಧ ಎರಡನೇ ಏಕದಿನ ಪಂದ್ಯವನ್ನು 170 ರನ್ ಗಳಿಂದ ಗೆದ್ದ ಟೀಂ ಇಂಡಿಯಾ ಇನ್ನೂ ಒಂದು ಪಂದ್ಯ ಬಾಕಿ ಇರುವಂತೇ ಸರಣಿ ತನ್ನದಾಗಿಸಿಕೊಂಡಿದೆ.
ಇಂದು ಟಾಸ್ ಗೆದ್ದು ಅಫ್ಘಾನಿಸ್ತಾನ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಏಕನಾ ಮೈದಾನದ ಉರಿಬಿಸಿಲಿನಲ್ಲಿ ಟೀಂ ಇಂಡಿಯಾ ಬ್ಯಾಟಿಗರ ರನ್ ಅಬ್ಬರಕ್ಕೆ ಅಫ್ಘಾನಿಸ್ತಾನ ಸಂಪೂರ್ಣ ಬಸವಳಿದು ಹೋಗಿತ್ತು. ಭಾರತ ಮೊದಲು ಬ್ಯಾಟಿಂಗ್ ಮಾಡಿ 49.5 ಓವರ್ ಗಳಲ್ಲಿ 402 ರನ್ ಗಳಿಸಿ ಆಲೌಟ್ ಆಗಿತ್ತು.
ಗೆಲುವಿಗೆ ಬೃಹತ್ ಮೊತ್ತ ಬೆನ್ನತ್ತಿದ ಅಫ್ಘಾನಿಸ್ತಾನಕ್ಕೆ ರೆಹಮಾನುಲ್ಲಾ ಗುರ್ಬಾಜ್ (41), ಇಬ್ರಾಹಿಂ ಜರ್ದಾನ್ (21) ಉತ್ತಮ ಆರಂಭ ನೀಡಿದರು. ಬಳಿಕ ಸೆದಿಕ್ಕುಲ್ಲಾ ಅಟಲ್ 42 ಮತ್ತು ರೆಹಮತ್ ಶಾ 79ರನ್ ಗಳಿಸಿ ಅಬ್ಬರಿಸಿದರು. ಆದರೆ ನಂತರ ಅಫ್ಘಾನಿಸ್ತಾನ ಕುಸಿತ ಆರಂಭವಾಯಿತು.
ಭಾರತದ ಪರ ಅರ್ಷ್ ದೀಪ್ ಸಿಂಗ್ 3, ಗುರ್ನೂರ್ ಬ್ರಾರ್ 3, ಪ್ರಿನ್ಸ್ ಯಾದವ್ 2, ವಾಷಿಂಗ್ಟನ್ ಸುಂದರ್ 1 ವಿಕೆಟ್ ಕಬಳಿಸಿದರು. ಅಂತಿಮವಾಗಿ ಅಫ್ಘಾನಿಸ್ತಾನ 44. 3 ಓವರ್ ಗಳಲ್ಲಿ 232 ರನ್ ಗಳಿಸಲಷ್ಟೇ ಶಕ್ತವಾಯಿತು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ