Daily Horoscope

Select Your Language

Notifications

webdunia
webdunia
webdunia
webdunia

IND vs AFG: ಭಲೇ ಜೋಡಿ... ಶುಭಮನ್ ಗಿಲ್, ಇಶಾನ್ ಕಿಶನ್ ನಡುವೆ ಪೈಪೋಟಿ, ಕೊನೆಗೆ ಶತಕ

Ishan Kishan-Shubman Gill
Photo Credit: BCCI
ಲಕ್ನೋ: ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ಒಂದೇ ಓವರ್ ನಲ್ಲಿ ಪೈಪೋಟಿ ನಡೆಸಿ ಶತಕ ಸಿಡಿಸಿದ್ದಾರೆ.

ಇಂದು ಟಾಸ್ ಗೆದ್ದ ಅಫ್ಘಾನಿಸ್ತಾನ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಆದರೆ ಏಕನಾ ಸ್ಟೇಡಿಯಂನಲ್ಲಿ ಬಿರು ಬಿಸಿಲಿನ ಜೊತೆಗೆ ಗಿಲ್-ಇಶಾನ್ ಜೋಡಿ ಅಫ್ಘಾನಿಸ್ತಾನ ಆಟಗಾರರನ್ನು ಯಾಕಾದರೂ ಮೊದಲು ಬೌಲಿಂಗ್ ಆಯ್ದುಕೊಂಡೆವೋ ಎಂದು ಹಣೆ ಚಚ್ಚಿಕೊಳ್ಳುವ ಮಟ್ಟಿಗೆ ರನ್ ಮಳೆ ಸುರಿಸಿ ಗೋಳು ಹೊಯ್ದುಕೊಂಡರು.

ಆರಂಭದಲ್ಲಿಯೇ ಯಶಸ್ವಿ ಜೈಸ್ವಾಲ್ ಕೇವಲ 4 ರನ್ ಗಳಿಸಿ ಮೊದಲನೆಯವರಾಗಿ ಔಟಾದರೂ ಅನುಭವಿ ರೋಹಿತ್ ಶರ್ಮಾ ಹೊಡೆಬಡಿಯ ಆರಂಭ ನೀಡಿದರು. ಕೇವಲ 39 ಎಸೆತಗಳಲ್ಲಿ 48 ರನ್ ಚಚ್ಚಿದ ಅವರು ಅರ್ಧಶತಕ ಪೂರೈಸುವಲ್ಲಿ ಎಡವಿದರು.

ಆದರೆ ನಂತರ ನಡೆದಿದ್ದು ಇಶಾನ್-ಗಿಲ್ ಜೊತೆಯಾಟದ ವೈಭವ. ಗಿಲ್ ಮೊದಲನೆಯವರಾಗಿ ಶತಕದ ಅಂಚಿಗೆ ಬಂದು ನಿಂತಿದ್ದರೂ ಅವರಿಗಿಂತ ಬಿರುಸಿನ ಆಟವಾಡುತ್ತಿದ್ದ ಇಶಾನ್ ತಾವೇ ಮೊದಲು ಶತಕ ಗಳಿಸುವವರಂತೆ ಸಿಕ್ಸ್, ಬೌಂಡರಿಗಳ ಮೂಲಕ ಪೈಪೋಟಿಗಿಳಿದರು. ಆದರೂ ಮೊದಲು 77 ಎಸೆತಗಳಲ್ಲಿ 32.1 ನೇ ಓವರ್ ನಲ್ಲಿ ಶತಕ ಪೂರೈಸಿದರು. ಈ ವೇಳೆ ಇಶಾನ್ 68 ಎಸೆತಗಳಿಂದ 91 ರನ್ ಗಳಿಸಿದ್ದರು.

ಇದೇ ಓವರ್ ನ ಕೊನೆಯ ಎಸೆತದಲ್ಲಿ ಇಶಾನ್ ಕಿಶನ್ ಕೂಡಾ ಬೌಂಡರಿ ಮೂಲಕ ಶತಕ ಪೂರೈಸಿದರು. ಕೊನೆಗೆ ಇಶಾನ್ ಇದೀಗ 79 ಎಸೆತಗಳಿಂದ 125 ರನ್ ಗಳಿಸಿ ಔಟಾಗಿದ್ದಾರೆ. ಭಾರತ ಇತ್ತೀಚೆಗಿನ ವರದಿ ಬಂದಾಗ 38 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 333 ರನ್ ಗಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಅಭಿಮಾನಿಗಳಿಗೆ ಇಂದು ಡಬಲ್ ಧಮಾಕ