Publish Date: Sat, 13 Jun 2026 (13:04 IST)
Updated Date: Sat, 13 Jun 2026 (13:06 IST)
ಧರ್ಮಶಾಲಾ: ಇಂದು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯ ಆರಂಭಕ್ಕೆ ಮುನ್ನವೇ ವಿಘ್ನ ಎದುರಾಗಿದೆ.
ಧರ್ಮಶಾಲಾದಲ್ಲಿ ಇದೀಗ ಮಳೆ ಸುರಿಯುತ್ತಿರುವ ಕಾರಣಕ್ಕೆ ಇದುವರೆಗೆ ಟಾಸ್ ಕೂಡಾ ನಡೆದಿಲ್ಲ. ಎಲ್ಲಾ ಸರಿ ಹೋಗಿದ್ದರೆ ಈಗ ಟಾಸ್ ನಡೆಯಬೇಕಿತ್ತು. ಆದರೆ ಮೈದಾನ ಒದ್ದೆಯಾಗಿರುವುದು ಪಂದ್ಯ ಆರಂಭ ವಿಳಂಬವಾಗಿದೆ.
ಸದ್ಯಕ್ಕೆ ಮಳೆ ಧಾರಾಕಾರವಾಗಿದ್ದು ಇಂದಿನ ಪಂದ್ಯ ಒಂದು ವೇಳೆ ನಡೆದರೂ ಪೂರ್ತಿಯಾಗಿ ನಡೆಯುವುದು ಅನುಮಾನವಾಗಿದೆ. ಇಂದು ದಿನದಲ್ಲಿ 60-70% ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ಹೀಗಾಗಿ ಇಂದಿನ ಪಂದ್ಯಕ್ಕಾಗಿ ಕಾದು ನಿಂತಿರುವ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಟೀಂ ಇಂಡಿಯಾ ಪರ ರೋಹಿತ್ ಶರ್ಮಾ ಕಣಕ್ಕಿಳಿಯುತ್ತಿರುವ ಕಾರಣ ಅಭಿಮಾನಿಗಳು ಏಕದಿನ ಪಂದ್ಯ ನೋಡಲು ಉತ್ಸುಕರಾಗಿದ್ದರು. ಆದರೆ ಮಳೆ ಎಲ್ಲಾ ಕುತೂಹಲಕ್ಕೆ ತಣ್ಣೀರೆರಚಿದೆ. ಪಂದ್ಯ ಯಾವಾಗ ಶುರುವಾಗಲಿದೆ ಎಂದು ಇನ್ನೂ ಅಧಿಕೃತ ಪ್ರಕಟಣೆ ಬಂದಿಲ್ಲ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ