Select Your Language

Notifications

webdunia
webdunia
webdunia
webdunia

ಸಿಂಗಾಪುರದಲ್ಲಿ ಐಸಿಸಿ ಎಜಿಎಂ: ಟಿ20 ವಿಶ್ವಕಪ್​ನಲ್ಲಿ ಬರೋಬ್ಬರಿ 32 ತಂಡಗಳನ್ನು ಕಣಕ್ಕಿಳಿಸಲು ಮಾಸ್ಟರ್‌ ಪ್ಲಾನ್‌

International Cricket Council

Sampriya

ಸಿಂಗಾಪುರ , ಭಾನುವಾರ, 20 ಜುಲೈ 2025 (13:26 IST)
Photo Credit X
ಸಿಂಗಾಪುರ: ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ ವಾರ್ಷಿಕ ಸಾಮಾನ್ಯ ಸಭೆ ಸಿಂಗಾಪುರದಲ್ಲಿ ನಡೆಯುತ್ತಿದೆ. ಈ ಸಭೆಯಲ್ಲಿ ಮುಂದಿನ ಟಿ20 ವಿಶ್ವಕಪ್ ಅನ್ನು 32 ರಾಷ್ಟ್ರಗಳಿಗೆ ವಿಸ್ತರಿಸುವ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ.

ಟಿ20 ವಿಶ್ವಕಪ್‌ ಟೂರ್ನಿಗೆ ಹೆಚ್ಚಿನ ತಂಡಗಳನ್ನು ಸೇರಿಸುವ ಪ್ರಸ್ತಾವ ಐಸಿಸಿ ಮುಂದಿದೆ. ಈ ಪ್ರಸ್ತಾವನೆಯನ್ನು ಪರಿಶೀಲಿಸಲು ಐಸಿಸಿಯು ನ್ಯೂಝಿಲೆಂಡ್‌ನ ರೋಜರ್ ಟ್ವೋಸ್ ನೇತೃತ್ವದಲ್ಲಿ ಭಾರತ ಸೇರಿದಂತೆ ಪ್ರಮುಖ ಕ್ರಿಕೆಟ್ ಮಂಡಳಿಗಳ ಉನ್ನತ ಅಧಿಕಾರಿಗಳನ್ನು ಒಳಗೊಂಡ ಆರು ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಿದೆ.

ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ 2026 ರಲ್ಲಿ 20 ತಂಡಗಳು ಕಣಕ್ಕಿಳಿಯುವುದು ಖಚಿತವಾಗಿದೆ. ಈಗಾಗಲೇ ಟೂರ್ನಿಗೆ 15 ತಂಡಗಳು ಅರ್ಹತೆ ಪಡೆದುಕೊಂಡಿದ್ದು, ಇನ್ನುಳಿದ 5 ತಂಡಗಳು ಅರ್ಹತಾ ಸುತ್ತಿನ ಮೂಲಕ ವಿಶ್ವಕಪ್​ಗೆ ಸ್ಥಾನ ಪಡೆಯಲಿವೆ. ಈ ವಿಶ್ವಕಪ್ ಬೆನ್ನಲ್ಲೇ 2028ರ ಟಿ20 ವಿಶ್ವಕಪ್​ಗಾಗಿ ಐಸಿಸಿ ಪೂರ್ವ ತಯಾರಿಗಳನ್ನು ಆರಂಭಿಸಲು ನಿರ್ಧರಿಸಿದೆ.

2028ರ ಟೂರ್ನಿಯಲ್ಲಿ ಬರೋಬ್ಬರಿ 32 ತಂಡಗಳನ್ನು ಕಣಕ್ಕಿಳಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಚಿಂತಿಸಿದೆ. 2028 ರಲ್ಲಿ ಆಸ್ಟ್ರೇಲಿಯಾ-ನ್ಯೂಝಿಲೆಂಡ್​ನ ಆತಿಥ್ಯದಲ್ಲಿ ಟೂರ್ನಿ ನಡೆಯಲಿದೆ. 

ಯುಎಸ್​ಎ, ಕೆನಡಾ, ಇಟಲಿ ಸೇರಿದಂತೆ ಪ್ರಮುಖ ದೇಶಗಳಲ್ಲಿ ಕ್ರಿಕೆಟ್‌ ಜನಪ್ರಿಯವಾಗುತ್ತಿದೆ. ಇದನ್ನು ಪರಿಗಣಿಸಿ ಅಸೋಸಿಯೇಟ್ ನೇಷನ್ಸ್ ತಂಡಗಳಿಗೆ ಮೆಗಾ ಈವೆಂಟ್‌ನಲ್ಲಿ ಭಾಗವಹಿಸಲು ಅವಕಾಶ ನೀಡುವ ಬಗ್ಗೆ ಚರ್ಚಿಸಲಾಗಿದೆ. ಈ ಮೂಲಕ 2028 ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ತಂಡಗಳ ಸಂಖ್ಯೆಯನ್ನು 32 ಕ್ಕೆ ಹೆಚ್ಚಿಸಲು ಐಸಿಸಿ ಆಸಕ್ತಿ ತೋರಿದೆ. 

2026 ರ ಟಿ20 ವಿಶ್ವಕಪ್​ನಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಇತ್ತ ತಂಡಗಳ ಹೆಚ್ಚುವರಿಯೊಂದಿಗೆ ಮುಂಬರುವ ಟಿ20 ವಿಶ್ವಕಪ್​ನಲ್ಲಿ ಒಟ್ಟು 55 ಪಂದ್ಯಗಳನ್ನು ಆಡಲಾಗುತ್ತದೆ. ಇಲ್ಲಿ 20 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿ ಮೊದಲ ಸುತ್ತಿನ ಮ್ಯಾಚ್​ಗಳನ್ನು ಆಯೋಜಿಸಲಾಗುತ್ತದೆ. ಆ ಬಳಿಕ ಸೂಪರ್-8, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವ ಲೆಜೆಂಡ್ಸ್ ಚಾಂಪಿಯನ್‌ಶಿಪ್: ಪಾಕ್‌ಗೆ ಭಾರತ ಶಾಕ್‌, ಇಂದು ನಡೆಯಬೇಕಿದ್ದ ಪಂದ್ಯ ರದ್ದು