ಸಿಡ್ನಿ; ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಮುಕ್ತಾಯವಾಗಿದ್ದು, ಇದೀಗ ಮಹತ್ವದ ಟೆಸ್ಟ್ ಸರಣಿ ಆರಂಭವಾಗಲಿದೆ. ಇದಕ್ಕೂ ಮೊದಲು ಎದುರಾಳಿಗಳಿಗೆ ಮಾತಿನ ಎಚ್ಚರಿಕೆ ನೀಡಲು ಆಸೀಸ್ ಮಾಜಿ ಆಟಗಾರರು ಶುರುವಿಟ್ಟುಕೊಂಡಿದ್ದಾರೆ.
ಈ ಸರಣಿಯಲ್ಲಿ ‘ನೋ ಸ್ಲೆಡ್ಜಿಂಗ್ ಪಾಲಿಸಿ’ ಅಳವಡಿಸುವುದಾಗಿ ಈಗಾಗಲೇ ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿತ್ತು. ಕ್ರಿಕೆಟ್ ಆಸ್ಟ್ರೇಲಿಯಾ ತೀರ್ಮಾನವನ್ನು ಸ್ವಾಗತಿಸಿದ್ದ ವಿರಾಟ್ ಕೊಹ್ಲಿ ನೆಮ್ಮದಿಯಿಂದ ಆಟದತ್ತ ಗಮನಹರಿಸಬಹುದು ಎಂದಿದ್ದರು.
ಆದರೆ ಟೀಂ ಇಂಡಿಯಾ ಆಟಗಾರರು ಸ್ಲೆಡ್ಜಿಂಗ್ ಇಲ್ಲ ಎಂದು ನೆಮ್ಮದಿಯಿಂದ ಇರುವುದು ಬೇಡ. ಮುಂಬರುವ ಸರಣಿಯಲ್ಲಿ ಬೌನ್ಸರ್ ಎದುರಿಸಲು ಸಜ್ಜಾಗಿ ಎಂದು ಮಾಜಿ ಕ್ರಿಕೆಟಿಗ ಇಯಾನ್ ಚಾಪೆಲ್ ಎಚ್ಚರಿಸಿದ್ದಾರೆ.
‘ಆಸ್ಟ್ರೇಲಿಯಾ ಬಳಿ ವಿಶ್ವ ದರ್ಜೆಯ ಮೂವರು ವೇಗಿಗಳಿದ್ದಾರೆ. ಅವರು ಶಾರ್ಟ್ ಪಿಚ್, ಬೌನ್ಸರ್ ಗಳನ್ನು ಎಸೆಯುವಲ್ಲಿ ನಿಷ್ಣಾತರು. ಹೀಗಾಗಿ ಟೀಂ ಇಂಡಿಯಾ ಅಗ್ರ ಬ್ಯಾಟ್ಸ್ ಮನ್ ಗಳು ಎಚ್ಚರವಾಗಿರುವುದು ಒಳ್ಳೆಯದು’ ಎಂದು ಚಾಪಲೆ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.