Webdunia - Bharat's app for daily news and videos

Install App

ಸೋಲಿನ ಸುಳಿಯಲ್ಲಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ದಿಡೀರ್ ಆಗಿ ಪ್ರಬಲವಾಗಿದ್ದು ಹೇಗೆ ಗೊತ್ತಾ?!

Webdunia
ಶುಕ್ರವಾರ, 15 ಮಾರ್ಚ್ 2019 (09:11 IST)
ನವದೆಹಲಿ: ಒಂದು ಕಾಲದಲ್ಲಿ ವಿಶ್ವದ ಎಲ್ಲಾ ತಂಡಗಳಿಗೂ ಕಬ್ಬಿಣದ ಕಡಲೆಯಾಗಿದ್ದ ಆಸ್ಟ್ರೇಲಿಯಾ ತಂಡ ಕಳೆದ ಕೆಲವು ವರ್ಷಗಳಲ್ಲಿ ಸಾಮಾನ್ಯ ತಂಡವಾಗಿಬಿಟ್ಟಿತ್ತು.


ಹಾಗಿದ್ದರೂ ಭಾರತದಂತಹ ಉಪಖಂಡದ ಪಿಚ್ ನಲ್ಲಿ ಆಸ್ಟ್ರೇಲಿಯಾಕ್ಕೆ ದೊಡ್ಡ ಮಟ್ಟಿಗಿನ ಯಶಸ್ಸು ಸಿಗುತ್ತಿರಲಿಲ್ಲ. ಆದರೆ ದುರ್ಬಲವಾಗಿದ್ದ ಆಸ್ಟ್ರೇಲಿಯಾ ಇದೀಗ ದಿಡೀರ್ ಆಗಿ ಭಾರತದಲ್ಲಿ ಪುಟಿದೇಳಲು ಕಾರಣವೇನು ಗೊತ್ತಾ?

ಇತ್ತ ಟೀಂ ಇಂಡಿಯಾದಂತಹ ಉಪಖಂಡದ ತಂಡಗಳು ಇತ್ತೀಚೆಗೆ ಸ್ಪಿನ್ ಬಿಟ್ಟು, ವೇಗದ ಪಿಚ್ ಗಳಲ್ಲಿ ಆಡಲು ಸಿದ್ಧವಾಗುತ್ತಿದ್ದರೆ, ಅತ್ತ ಆಸ್ಟ್ರೇಲಿಯಾದಂತಹ ತಂಡಗಳು ಸ್ಪಿನ್ ಪಿಚ್ ಗಳಲ್ಲಿ ಆಡಲು ಸಾಕಷ್ಟು ತಯಾರಿ ನಡೆಸುತ್ತಿವೆ. ಇದರಿಂದಾಗಿ ತಮ್ಮದೇ ನೆಲದಲ್ಲಿ ಪೇಲವವಾಗಿದ್ದ ಆಸೀಸ್ ಭಾರತೀಯ ಪಿಚ್ ನಲ್ಲಿ ಯಶಸ್ಸು ಗಳಿಸಿದೆ.

ಅದರಲ್ಲೂ ಭಾರತೀಯ ಮೂಲದವರೇ ಆದ ಶ್ರೀಧರನ್ ಅವರ ಸಹಾಯ ಪಡೆಯುತ್ತಿರುವ ಆಸೀಸ್, ಸ್ಪಿನ್ ಬೌಲಿಂಗ್ ವಿಭಾಗವನ್ನು ಚೆನ್ನಾಗಿ ತಯಾರು ಮಾಡುತ್ತಿದೆ. ಇದರಿಂದಾಗಿ ಅವರು ಭಾರತದಂತಹ ಪಿಚ್ ಗಳಲ್ಲಿ ಯಶಸ್ಸು ಸಾಧಿಸುತ್ತಿದ್ದಾರೆ. ಇದೇ ಪ್ರದರ್ಶನ ವಿಶ್ವಕಪ್ ನಲ್ಲೂ ಮುಂದುವರಿದರೆ ಮತ್ತೆ ಆಸ್ಟ್ರೇಲಿಯಾ ವಿಶ್ವ ಕ್ರಿಕೆಟ್ ನ ದೊರೆಯಾಗುವುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments