ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಗೆ ಅಶಿಸ್ತಿನ ಕಾರಣಕ್ಕೆ ಎರಡು ಪಂದ್ಯಗಳ ನಿಷೇಧ ಶಿಕ್ಷೆ ವಿಧಿಸಲಾಗಿದೆ.
ಬಾಂಗ್ಲಾದೇಶ ವಿರುದ್ಧ ಕೊನೆಯ ಏಕದಿನ ಪಂದ್ಯದಲ್ಲಿ ಅಂಪಾಯರ್ ವಿವಾದಾತ್ಮಕ ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಹರ್ಮನ್ ಪ್ರೀತ್ ಕೌರ್ ಸ್ಟಂಪ್ಸ್ ಗೆ ಬ್ಯಾಟ್ ನಿಂದ ಹೊಡೆದಿದ್ದಲ್ಲದೆ, ಮೈದಾನದಲ್ಲೇ ಅಂಪಾಯರ್ ಗೆ ಬೈದಿದ್ದಾರೆ. ಅಲ್ಲದೆ, ಪಂದ್ಯದ ಬಳಿಕ ಟ್ರೋಫಿ ಪಡೆಯುವಾಗ ಅಂಪಾಯರ್ ರನ್ನೂ ಕರೆಯಿರಿ ಎಂದು ವ್ಯಂಗ್ಯ ಮಾಡಿದ್ದರು.
ಈ ಕಾರಣಕ್ಕೆ ಪಂದ್ಯದ ಸಂಭಾವನೆಯ ಶೇ.75 ರಷ್ಟು ಕಡಿತ ಮತ್ತು ಡಿಮೆರಿಟ್ಸ್ ಅಂಕಗಳನ್ನು ನೀಡಲಾಗಿತ್ತು. ಇದೀಗ ಐಸಿಸಿ ಇದರ ಜೊತೆಗೆ ಎರಡು ಪಂದ್ಯಗಳ ನಿಷೇಧ ಶಿಕ್ಷೆ ವಿಧಿಸಿದೆ. ಇದರಿಂದಾಗಿ ಮುಂಬರುವ ಏಷ್ಯಾಡ್ ನಲ್ಲಿ ಎರಡು ಪಂದ್ಯಗಳಲ್ಲಿ ಹರ್ಮನ್ ಆಡುವಂತಿಲ್ಲ.