ಚ್ಯೂಯಿಂಗ್ ಗಮ್ ಜಗಿದು, ವಿಚಿತ್ರ ಶಾಟ್ ಹೊಡೆದು ಸೂರ್ಯಗೆ ಟಾಂಗ್ ಕೊಟ್ಟರಾ ಹಾರ್ದಿಕ್ ಪಾಂಡ್ಯ (video)

Krishnaveni K
ಸೋಮವಾರ, 7 ಅಕ್ಟೋಬರ್ 2024 (10:30 IST)
Photo Credit: X
ಗ್ವಾಲಿಯರ್: ಚ್ಯುಯಿಂಗ್ ಗಮ್ ಜಗಿಯುತ್ತಾ ಬ್ಯಾಟ್ ಸ್ವಿಂಗ್ ಮಾಡಿ ವಿಚಿತ್ರ ಶಾಟ್ ಹೊಡೆದ ಹಾರ್ದಿಕ್ ಪಾಂಡ್ಯ ಬಾಂಗ್ಲಾದೇಶದ  ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಗೇ ಟಾಂಗ್ ಕೊಟ್ಟರಾ ಎಂಬ ಸಂಶಯ ಮೂಡುತ್ತಿದೆ.

ರೋಹಿತ್ ಶರ್ಮಾ ಟಿ20 ಕ್ರಿಕೆಟ್ ನಿಂದ ನಿವೃತ್ತರಾದ ಮೇಲೆ ಹಾರ್ದಿಕ್ ಪಾಂಡ್ಯ ನಾಯಕರಾಗಬಹುದು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಅಚ್ಚರಿಯೆಂಬಂತೆ ಸೂರ್ಯಕುಮಾರ್ ನಾಯಕರಾದರು. ಇದರ ಹಿಂದಿನ ಕಾರಣಗಳು ಏನೇ ಇರಬಹುದು. ಆದರೆ ಸಹಜವಾಗಿಯೇ ಇದು ಹಾರ್ದಿಕ್ ಗೆ ಎಲ್ಲೋ ಅಸಮಾಧಾನಕ್ಕೆ ಕಾರಣವಾಗಿರುತ್ತದೆ.

ಇದೀಗ ಸೂರ್ಯಕುಮಾರ್ ನಾಯಕತ್ವದಲ್ಲಿ ಹಾರ್ದಿಕ್ ಸಾಮಾನ್ಯ ಆಟಗಾರನಾಗಿ ಆಡುತ್ತಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಅಬ್ಬರದ 39 ರನ್ ಗಳಿಸಿದರು. ಅವರ ಇನಿಂಗ್ಸ್ ನಲ್ಲಿ ಭರ್ಜರಿ ಹೊಡೆತಗಳೂ ಸೇರಿತ್ತು. ಅದರಲ್ಲೂ ಒಂದು ಶಾಟ್ ಅಂತೂ ಇದು ಯಾವ ಪರಿ ಶಾಟ್ ಎಂದು ವೀಕ್ಷಕರು ಅಚ್ಚರಿಗೊಳಪಡುವಂತೆ ಮಾಡಿತು.

ಒಂಥರಾ ಸೂರ್ಯಕುಮಾರ್ ಯಾದವ್ ಶೈಲಿಯಲ್ಲೇ ಬ್ಯಾಟ ಸ್ವಿಂಗ್ ಮಾಡಿ ಹೆಚ್ಚು ಶ್ರಮಪಡದೇ ವಿಕೆಟ್ ಕೀಪರ್ ಹಿಂದುಗಡೆ ಚೆಂಡು ತಳ್ಳಿ ಬೌಂಡರಿ ಗಿಟ್ಟಿಸಿದರು. ಅವರ ಈ ಹೊಡೆತ ಎಲ್ಲರೂ ಅಚ್ಚರಿಪಡುವಂತೆ ಮಾಡಿತು. ಸಾಮಾನ್ಯವಾಗಿ ಬ್ಯಾಟಿಂಗ್ ಮಾಡುವಾಗ ಸೂರ್ಯ ಚ್ಯುಯಿಂಗ್ ಗಮ್ ಜಗಿಯುತ್ತಿರುತ್ತಾರೆ. ಇದೀಗ ಹಾರ್ದಿಕ್ ಕೂಡಾ ಚ್ಯುಯಿಂಗ್ ಗಮ್ ಜಗಿಯುತ್ತಾ ಸೂರ್ಯ ಶೈಲಿಯಲ್ಲೇ ಆ ಶಾಟ್ ಹೊಡದಿದ್ದಾರೆ. ಇದಕ್ಕೆ ಫ್ಯಾನ್ಸ್ ಸೂರ್ಯಗೆ ಟಾಂಗ್ ಕೊಡಲೆಂದೇ ಹಾರ್ದಿಕ್ ಈ ರೀತಿ ಮಾಡಿದ್ದಾರೆ ಎಂದು ಅಭಿಪ್ರಾಯಪಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಮೃತಿ ಮಂಧಾನ, ಪಾಲಾಶ್ ಮದುವೆ ನಡೆಯುತ್ತಾ: ಬಿಗ್ ಅಪ್ ಡೇಟ್ ಕೊಟ್ಟ ಪಾಲಾಶ್ ತಾಯಿ

ಗೆಳೆತನ ಅಂದ್ರೆ ಹೀಗಿರಬೇಕು: ಸ್ಮೃತಿ ಮಂಧಾನಗಾಗಿ ದೊಡ್ಡ ನಿರ್ಧಾರ ಕೈಗೊಂಡ ಜೆಮಿಮಾ ರೊಡ್ರಿಗಸ್

ಧೋನಿ ಮನೆಯಲ್ಲಿ ಪಾರ್ಟಿ, ಆದ್ರೆ ಎಲ್ಲರಿಗಿಲ್ಲ ಆಹ್ವಾನ: ಕೊಹ್ಲಿಗೆ ಧೋನಿಯಿಂದ ಸ್ಪೆಷಲ್ ಟ್ರೀಟ್ಮೆಂಟ್

IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಏಕದಿನ ಯಾವಾಗ, ಎಲ್ಲಿ ಇಲ್ಲಿದೆ ವಿವರ

ಕ್ಯಾಪ್ಟನ್ ಜೊತೆ ಹೊಂದಾಣಿಕೆಯಾಗ್ತಿಲ್ಲ ಎಂದಾಕ್ಷಣ ಕೋಚ್ ಹುದ್ದೆ ಬಿಟ್ಟಿದ್ದ ಅನಿಲ್ ಕುಂಬ್ಳೆ: ಆದ್ರೆ ಗಂಭೀರ್...

ಮುಂದಿನ ಸುದ್ದಿ
Show comments