Publish Date: Mon, 05 Sep 2022 (16:35 IST)
Updated Date: Mon, 05 Sep 2022 (16:37 IST)
ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಗಂಗೂಲಿ ಮತ್ತು ಮಾಜಿ ಕೋಚ್ ಗ್ರೆಗ್ ಚಾಪೆಲ್ ನಡುವಿನ ವೈಮನಸ್ಯ ಇಡೀ ಕ್ರಿಕೆಟ್ ಜಗತ್ತಿಗೇ ಗೊತ್ತು.
ಟೀಂ ಇಂಡಿಯಾದಿಂದ ಗಂಗೂಲಿ ಮೂಲೆಗುಂಪಾಗಲು ಚಾಪೆಲ್ ಕಾರಣರಾಗಿದ್ದರು. ಚಾಪೆಲ್ ಕೋಚಿಂಗ್ ಶೈಲಿ ಬಗ್ಗೆ ಅನೇಕರು ಅಸಮಾಧಾನ ಹೊಂದಿದ್ದರು.
ಆದರೆ ಇದೀಗ ಶಿಕ್ಷಕರ ದಿನಾಚರಣೆಯಂದು ಗಂಗೂಲಿ ಮಾಜಿ ಕೋಚ್ ಗ್ರೆಗ್ ಚಾಪೆಲ್ ರನ್ನು ನೆನೆದಿದ್ದು, 2003 ರ ವಿಶ್ವಕಪ್ ಬಳಿಕ ಗ್ರೆಗ್ ಚಾಪೆಲ್ ರನ್ನು ತಂಡದ ಕೋಚ್ ಆಗಿ ಕರೆತಂದಿದ್ದೆ. ಆಗ ಮುಂದಿನ ವಿಶ್ವಕಪ್ ಗೆಲ್ಲುವುದು ನಮ್ಮ ಗುರಿಯಾಗಿತ್ತು. ಆದರೆ ದುರದೃಷ್ಟವಶಾತ್ ನಾನು ನಾಯಕತ್ವ ತ್ಯಜಿಸಬೇಕಾಯಿತು. ಆದರೆ ಯಾವತ್ತೂ ನಾನು ತಂಡದ ಹಿತವನ್ನೇ ಬಯಸಿದ್ದೆ ಎಂದು ಗಂಗೂಲಿ ಹೇಳಿದ್ದಾರೆ.