Select Your Language

Notifications

webdunia
webdunia
webdunia
webdunia

ಏಷ್ಯಾ ಕಪ್ ಕ್ರಿಕೆಟ್: ರಿಷಬ್ ಪಂತ್ ಗೆ ಕ್ಲಾಸ್ ತೆಗೆದುಕೊಂಡ ರೋಹಿತ್ ಶರ್ಮಾ

ಏಷ್ಯಾ ಕಪ್ ಕ್ರಿಕೆಟ್: ರಿಷಬ್ ಪಂತ್ ಗೆ ಕ್ಲಾಸ್ ತೆಗೆದುಕೊಂಡ ರೋಹಿತ್ ಶರ್ಮಾ
ದುಬೈ , ಸೋಮವಾರ, 5 ಸೆಪ್ಟಂಬರ್ 2022 (09:20 IST)
ದುಬೈ: ಪಾಕಿಸ್ತಾನ ವಿರುದ್ಧ ಏಷ್ಯಾ ಕಪ್ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಕಳಪೆ ಮೊತ್ತಕ್ಕೆ ಔಟಾದ ರಿಷಬ್ ಪಂತ್ ಗೆ ನಾಯಕ ರೋಹಿತ್ ಶರ್ಮಾ ಕ್ಲಾಸ್ ತೆಗೆದುಕೊಂಡಿದ್ದಾರೆ.

ತಂಡದ ರನ್ ಗತಿ ಹೆಚ್ಚಿಸಲೆಂದು ರಿಷಬ್ ರನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಸಲಾಗಿತ್ತು. ಆದರೆ ಬೇಜವಾಬ್ಧಾರಿ ಹೊಡೆತಕ್ಕೆ ಕೈ ಹಾಕಿ ರಿಷಬ್ ಕೇವಲ 9 ರನ್ ಗೆ ಔಟಾದರು. ಇದಕ್ಕಾಗಿ ಅವರು 9 ಎಸೆತಗಳನ್ನು ಎದುರಿಸಿದ್ದರು.

ಅವರ ಬ್ಯಾಟಿಂಗ್ ಶೈಲಿ ನಾಯಕ ರೋಹಿತ್ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ರಿಷಬ್ ಔಟಾಗಿ ಪೆವಿಲಿಯನ್ ಗೆ ಮರಳಿದ ಮೇಲೆ ಡ್ರೆಸ್ಸಿಂಗ್ ರೂಂನಲ್ಲಿ ಕೆಲ ಹೊತ್ತು ರೋಹಿತ್ ರಿಷಬ್ ಮಾಡಿದ ತಪ್ಪೇನೆಂದು ತಿಳಿ ಹೇಳುತ್ತಿದ್ದುದು ಕಂಡುಬಂತು.

ಸೋಷಿಯಲ್ ಮೀಡಿಯಾದಲ್ಲೂ ರಿಷಬ್ ಸಾಕಷ್ಟು ಟೀಕೆಗೊಳಗಾಗಿದ್ದಾರೆ. ರಿಷಬ್ ಬದಲು ದಿನೇಶ್ ಕಾರ್ತಿಕ್ ರನ್ನು ಉಳಿಸಿಕೊಂಡಿದ್ದರೆ ತಂಡಕ್ಕೆ ಇನ್ನಷ್ಟು ರನ್ ಬರುತ್ತಿತ್ತು. ರಿಷಬ್ ಅತಿಯಾದ ಪ್ರಚಾರ ಪಡೆದ ಆಟಗಾರ ಎಂದು ಹಲವರು ಟೀಕಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ವಿರುದ್ಧ ಟೀಂ ಇಂಡಿಯಾ ಸೋಲಲು ಇದುವೇ ಕಾರಣ