ಮುಂಬೈ: ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಕೋಚ್ ಸ್ಥಾನದಿಂದ ಕೆಳಗಿಳಿಯಲಿರುವ ರವಿಶಾಸ್ತ್ರಿ ಸ್ಥಾನಕ್ಕೆ ಹೊಸ ಕೋಚ್ ನೇಮಿಸಲು ಬಿಸಿಸಿಐ ಈಗಾಗಲೇ ತಯಾರಿ ಮಾಡಿಕೊಂಡಿದೆ.
ಮಾಜಿ ಕೋಚ್ ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್ ಹೆಸರು ಚಾಲ್ತಿಯಲ್ಲಿದೆ. ಈ ಇಬ್ಬರು ದಿಗ್ಗಜ ಕ್ರಿಕೆಟಿಗರಿಗೆ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಸ್ವತಃ ಸೌರವ್ ಗಂಗೂಲಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಆದರೆ ಈಗಾಗಲೇ ಒಮ್ಮೆ ಟೀಂ ಇಂಡಿಯಾ ಕೋಚ್ ಆಗಿ ಹೊಂದಾಣಿಕೆ ಕೊರತೆಯಿಂದ ರಾಜೀನಾಮೆ ನೀಡಿದ್ದ ಅನಿಲ್ ಕುಂಬ್ಳೆ ಮತ್ತೆ ಅರ್ಜಿ ಸಲ್ಲಿಸುವುದು ಅನುಮಾನ. ಆದರೆ ವಿವಿಎಸ್ ಲಕ್ಷ್ಮಣ್ ಅರ್ಜಿ ಸಲ್ಲಿಸಿದರೂ ಅಚ್ಚರಿಯಿಲ್ಲ. ಸ್ವತಃ ಗಂಗೂಲಿ ಭಾರತದ ಖ್ಯಾತ ಮಾಜಿ ಕ್ರಿಕೆಟಿಗರನ್ನೇ ಕೋಚ್ ಆಗಿ ನೇಮಿಸುವುದರ ಬಗ್ಗೆ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಟೀಂ ಇಂಡಿಯಾಕ್ಕೆ ಮತ್ತೆ ದೇಶೀಯ ಕ್ರಿಕೆಟಿಗರೇ ಕೋಚ್ ಆಗುವ ಸಾಧ‍್ಯತೆಯಿದೆ.