ಸಂಜು ಸ್ಯಾಮ್ಸನ್ ತ್ಯಾಗಕ್ಕೆ ಫ್ಯಾನ್ಸ್ ಶಹಬ್ಬಾಶ್ ಗಿರಿ

Webdunia
ಶುಕ್ರವಾರ, 12 ಮೇ 2023 (09:04 IST)
Photo Courtesy: Twitter
ಕೋಲ್ಕೊತ್ತಾ: ಐಪಿಎಲ್ 2023 ರಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ತಮ್ಮ ಸಹ ಆಟಗಾರ ಯಶಸ್ವಿ ಜೈಸ್ವಾಲ್ ಗಾಗಿ ಮಾಡಿದ ಕೆಲಸಕ್ಕೆ ಟ್ವಿಟರಿಗರು ಕೊಂಡಾಡಿದ್ದಾರೆ.

ನಿನ್ನೆ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ್ ಗೆಲುವಿಗೆ ಒಂದು ರನ್ ಬೇಕಾಗಿದ್ದಾಗ ಸಂಜು ಬ್ಯಾಟಿಂಗ್ ಎಂಡ್ ನಲ್ಲಿದ್ದರು. ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ಯಶಸ್ವಿ ಜೈಸ್ವಾಲ್ ಗೆ ಶತಕ ಗಳಿಸಲು 6 ರನ್ ಬೇಕಾಗಿತ್ತು. ಈ ವೇಳೆ ಕೆಕೆಆರ್ ಬೌಲರ್ ಸುಯಾಶ್ ವೈಡ್ ಎಸೆತ ಎಸೆದರು. ಆದರೆ ಸಂಜು ಉಪಾಯವಾಗಿ ಇದನ್ನು ತಡೆದು ವೈಡ್ ಆಗದಂತೆ ನೋಡಿಕೊಂಡರಲ್ಲದೆ, ರನ್ ಕೂಡಾ ಗಳಿಸದೇ ಓವರ್ ಮುಗಿಸಿದರು. ವಿಶೇಷವೆಂದರೆ ಸಂಜು ಕೂಡಾ ಅರ್ಧಶತಕದ ಹೊಸ್ತಿಲಲ್ಲಿದ್ದರು. ಆದರೆ ತಮ್ಮನ್ನು ಲೆಕ್ಕಕ್ಕಿಡದೇ ಯಶಸ್ವಿ ಶತಕ ಗಳಿಸಲು ಸಂಜು ಪ್ರಯತ್ನ ಪಟ್ಟರು.

ಆದರೆ ಮುಂದಿನ ಓವರ್ ನಲ್ಲಿ ಯಶಸ್ವಿ ಜೈಸ್ವಾಲ್ ಸಿಕ್ಸರ್ ಗಟ್ಟಲು ಯತ್ನಿಸಿದರೂ ಅದು ಬೌಂಡರಿ ಆಗಿತ್ತಷ್ಟೇ. ಹೀಗಾಗಿ ಯಶಸ್ವಿ 98 ರನ್ ಗೆ ಅಜೇಯರಾಗುಳಿದರು. ರಾಜಸ್ಥಾನ್ ಗೆಲುವು ಕಂಡಿತು. ಆದರೆ ತಮ್ಮ ವೈಯಕ್ತಿಕ ಲಾಭ ಲೆಕ್ಕಕ್ಕಿಡದೇ ಯಶಸ್ವಿಗಾಗಿ ತ್ಯಾಗ ಮಾಡಿದ ಸಂಜು ವರ್ತನೆಗೆ ಫ್ಯಾನ್ಸ್ ಕೊಂಡಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಇಂಥಾ ಪಿಚ್ ನಲ್ಲಿ ಸಚಿನ್, ಕೊಹ್ಲಿಗೂ ಆಡಕ್ಕೆ ಆಗ್ತಿರಲಿಲ್ಲ: ಹರ್ಭಜನ್ ಸಿಂಗ್ ವಾಗ್ದಾಳಿ

ಐಪಿಎಲ್ ನಲ್ಲಿ ಮಾಲಿಕರು ಏನೇನೋ ಪ್ರಶ್ನೆ ಕೇಳ್ತಾರೆ: ಕೆಎಲ್ ರಾಹುಲ್ ಬಿಚ್ಚಿಟ್ಟ ಸತ್ಯ

ಟೀಂ ಇಂಡಿಯಾ ಟೆಸ್ಟ್ ತಂಡ ಹಳ್ಳ ಹಿಡಿಸಿದ ಗೌತಮ್ ಗಂಭೀರ್ ಟೆಸ್ಟ್ ದಾಖಲೆ ಹೇಗಿತ್ತು ನೋಡಿ

IND vs SA: ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್ ಯಾವಾಗ, ಎಲ್ಲಿ ಇಲ್ಲಿದೆ ವಿವರ

ಕೋಚ್ ಆಗಿ ಬಂದಾಗ ರಾಹುಲ್ ದ್ರಾವಿಡ್ ಹೇಳಿದ್ದ ಈ ಮಾತು ಗಂಭೀರ್ ಗೂ ಪಾಠವಾಗಬೇಕು

ಮುಂದಿನ ಸುದ್ದಿ
Show comments