Publish Date: Thu, 26 Jul 2018 (16:03 IST)
Updated Date: Thu, 26 Jul 2018 (16:07 IST)
ಚೆಮ್ಸ್ ಫೋರ್ಡ್: ಎಸೆಕ್ಸ್ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಇಂದು ಮೊದಲ ಬಾಲ್ ಗೆ ಔಟಾಗಿ ನಿರಾಸೆ ಮೂಡಿಸಿದ್ದಾರೆ.
ನಿನ್ನೆ 82 ರನ್ ಗಳಿಸಿ ನಾಟೌಟ್ ಆಗಿದ್ದ ಕಾರ್ತಿಕ್ ಇಂದು ಶತಕ ಗಳಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಇಂದು ದಿನದ ಮೊದಲ ಎಸೆತಕ್ಕೇ ಔಟಾಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ 38 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ನಿನ್ನೆ 6 ವಿಕೆಟ್ ನಷ್ಟಕ್ಕೆ 322 ರನ್ ಗಳಿಗೆ ದಿನದಾಟ ಮುಗಿಸಿದ್ದ ಭಾರತ ಇಂದು ಇತ್ತೀಚೆಗಿನ ವರದಿ ಬಂದಾಗ 8 ವಿಕೆಟ್ ಕಳೆದುಕೊಂಡು 339 ರನ್ ಗಳಿಸಿದೆ. ಕನ್ನಡಿಗ ಕರುಣ್ ನಾಯರ್ (4) ಇಂದು ಔಟಾದ ಮತ್ತೊಬ್ಬ ಬ್ಯಾಟ್ಸ್ ಮನ್. ಪಾಂಡ್ಯ ಜತೆಗೆ 8 ರನ್ ಗಳಿಸಿರುವ ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.