Select Your Language

Notifications

webdunia
webdunia
webdunia
webdunia

ತೀವ್ರ ಒತ್ತಡದಲ್ಲಿ ವಿರಾಟ್ ಕೊಹ್ಲಿ! ಕಾರಣವೇನು ಗೊತ್ತಾ?

ತೀವ್ರ ಒತ್ತಡದಲ್ಲಿ ವಿರಾಟ್ ಕೊಹ್ಲಿ! ಕಾರಣವೇನು ಗೊತ್ತಾ?
ಲಂಡನ್ , ಗುರುವಾರ, 26 ಜುಲೈ 2018 (09:21 IST)
ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತೀವ್ರ ಒತ್ತಡದಲ್ಲಿದ್ದಾರೆ. ಇದಕ್ಕೆ ಕಾರಣಗಳು ಹಲವಾರು.

ಏಕದಿನ ಸರಣಿ ಸೋತಿರುವ ಟೀಂ ಇಂಡಿಯಾ ಟೆಸ್ಟ್ ಸರಣಿ ಗೆದ್ದು ಮಾನ ಉಳಿಸಿಕೊಳ್ಳಬೇಕಿದೆ. ಇದರ ಜತೆಗೆ 2014 ರಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಮಾಡಿದ್ದಾಗ ವಿರಾಟ್ ಕೊಹ್ಲಿ ವಿಫಲರಾಗಿದ್ದರು. ಆದರೆ ಈ ಪ್ರವಾಸದಲ್ಲಿ ಉತ್ತಮ ರನ್ ಗಳಿಸಿ ತಾವು ವಿಶ್ವ ಶ್ರೇಷ್ಠ ಬ್ಯಾಟ್ಸ್ ಮನ್ ಎಂದು ಸಾಧಿಸುವ ಒತ್ತಡದಲ್ಲಿದ್ದಾರೆ. ಈಗಾಗಲೇ ಆಂಗ್ಲ ಕ್ರಿಕೆಟಿಗರು ಒಬ್ಬರಾದ ಮೇಲೆ ಒಬ್ಬರಂತೆ ವಿರಾಟ್ ಕೊಹ್ಲಿ ರನ್ ಗಳಿಸಲೇಬೇಕಾದ ಒತ್ತಡದಲ್ಲಿದ್ದಾರೆ ಎಂದು ಕೆಣಕುತ್ತಿದ್ದಾರೆ.

ಇನ್ನೊಂದೆಡೆ ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಉತ್ತಮ ರನ್ ಗಳಿಸಿದರೆ ಟೆಸ್ಟ್ ಕ್ರಿಕೆಟ್ ರ್ಯಾಂಕಿಂಗ್ ನಲ್ಲಿ ಸದ್ಯ ನಂ.1 ಸ್ಥಾನಿಯಾಗಿರುವ ಸ್ಟೀವ್ ಸ್ಮಿತ್ ರನ್ನು ಕೆಳಗಿಳಿಸಿ ಅಗ್ರ ಸ್ಥಾನಕ್ಕೇರಬಹುದಾಗಿದೆ. ಟೀಂ ಇಂಡಿಯಾ ಕೂಡಾ ನಂ.1 ಸ್ಥಾನದಲ್ಲಿ ಮುಂದುವರಿಯಲು ಈ ಸರಣಿ ಗೆಲ್ಲಲೇಬೇಕು.

ಇದರ ಜತೆಗೆ ಟೀಂ ಇಂಡಿಯಾದಲ್ಲಿ ಜಸ್ಪ್ರೀತ್ ಬುಮ್ರಾ, ಭುವನೇಶ‍್ವರ್ ಕುಮಾರ್ ಎಂಬ ವೇಗದ ಬೌಲಿಂಗ್ ಪಡೆ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದೇ ಇರುವುದು ಕೊಹ್ಲಿ ಚಿಂತೆ ಹೆಚ್ಚು ಮಾಡಿದೆ. ಇದರ ಜತೆಗೆ ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್ ಸ್ಪಿನ್ ಜೋಡಿಯೋ ಅಶ್ವಿನ್-ಜಡೇಜಾ ಅನುಭವಿ ಸ್ಪಿನ್ ಜೋಡಿಗೆ ಮಣೆ ಹಾಕುವುದೋ ಎಂಬ ಚಿಂತೆ ಕೊಹ್ಲಿಯನ್ನು ಕಾಡುತ್ತಿದೆ. ಒಟ್ಟಾರೆ ಈ ಸರಣಿ ನಾಯಕರಾಗಿ ಕೊಹ್ಲಿಗೆ ಅಗ್ನಿ ಪರೀಕ್ಷೆಯಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಮಾಡಿದ ಸಹಾಯ ನೆನೆಸಿಕೊಂಡ ರಿಷಬ್ ಪಂತ್