Publish Date: Thu, 26 Jul 2018 (09:15 IST)
Updated Date: Thu, 26 Jul 2018 (09:17 IST)
ಲಂಡನ್: ಟೀಂ ಇಂಡಿಯಾ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿ ಆಡಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ಇದುವರೆಗೆ ಯಾರೂ ಮಾಡದ ದಾಖಲೆಯೊಂದನ್ನು ಮಾಡಲಿದೆ.
ಎಡ್ಜ್ ಬಾಸ್ಟನ್ ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಇಂಗ್ಲೆಂಡ್ ಪಾಲಿಗೆ 1000 ನೇ ಟೆಸ್ಟ್ ಪಂದ್ಯವಾಗಲಿದೆ. ವಿಶ್ವದ ಯಾವುದೇ ತಂಡವೂ ಇಷ್ಟು ಪಂದ್ಯವನ್ನಾಡಿಲ್ಲ. ಆ ಮೂಲಕ ಇಂಗ್ಲೆಂಡ್ ಇತಿಹಾಸ ಪುಟ ಸೇರಲಿದೆ.
812 ಪಂದ್ಯವಾಡಿರುವ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ಟೀಂ ಇಂಡಿಯಾ ಇದುವರೆಗೆ 522 ಟೆಸ್ಟ್ ಪಂದ್ಯವಾಡಿದ್ದು ನಾಲ್ಕನೇ ಸ್ಥಾನದಲ್ಲಿದೆ. 535 ಟೆಸ್ಟ್ ಪಂದ್ಯವಾಡಿರುವ ವೆಸ್ಟ್ ಇಂಡೀಸ್ ಗೆ ಮೂರನೇ ಸ್ಥಾನ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.