ಫೀಲ್ಡಿಂಗ್ ಸೆಟ್ ಮಾಡುತ್ತಿದ್ದ ಯಜುವೇಂದ್ರ ಚಾಹಲ್ ರನ್ನು ಧೋನಿ ಲೇವಡಿ ಮಾಡಿದ್ದು ಹೀಗೆ!

Webdunia
ಗುರುವಾರ, 7 ಫೆಬ್ರವರಿ 2019 (09:35 IST)
ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಬೌಲಿಂಗ್ ಮಾಡುವ ಮೊದಲು ಫೀಲ್ಡಿಂಗ್ ಸೆಟ್ ಮಾಡಲು ಹೊರಟ ಸ್ಪಿನ್ನರ್ ಯಜುವೇಂದ್ರ ಚಾಹಲ್ ರನ್ನು ಧೋನಿ ಟ್ರೋಲ್ ಮಾಡಿದ್ದು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು.


ಸ್ಟಂಪ್ ಹಿಂದೆ ಧೋನಿಯ ಕೆಲವು ಸಂಭಾಷಣೆಗಳು ಆಗಾಗ ವೈರಲ್ ಆಗುತ್ತವೆ. ಇದೀಗ ಅದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ಬೌಲಿಂಗ್ ಮಾಡುವ ಮೊದಲು ಫೀಲ್ಡಿಂಗ್ ಸೆಟ್ ಮಾಡಲು ಹೊರಟ ಚಾಹಲ್ ರನ್ನು ಧೋನಿ ತಮಾಷೆ ಮಾಡಿದ್ದಾರೆ.

ಬ್ಯಾಟ್ಸ್ ಮನ್ ನೀಶಾಮ್ ಬ್ಯಾಟಿಂಗ್ ಗೆ ರೆಡಿಯಾಗಿದ್ದರೂ ಚಾಹಲ್ ಫೀಲ್ಡಿಂಗ್ ಸೆಟ್ಟಿಂಗ್ ಮುಗಿಸಿರಲಿಲ್ಲ. ಹೀಗಾಗಿ ಪಕ್ಕದಲ್ಲೇ ನಿಂತಿದ್ದ ಬದಲಿ ಕ್ಷೇತ್ರರಕ್ಷಕ ಕುಲದೀಪ್ ಯಾದವ್ ಬಳಿ ಧೋನಿ ಹಿಂದಿಯಲ್ಲಿ ‘ಅವನಿಗೆ ಬೌಲ್ ಮಾಡಲು ಬಿಡಿ. ಫೀಲ್ಡಿಂಗ್ ಮಾಡುವ ವಿಚಾರದಲ್ಲಿ ಮುತ್ತಯ್ಯ ಮುರಳೀಧರನ್ ಗಿಂತಲೂ ಹೆಚ್ಚು ಕಾಳಜಿ ವಹಿಸುತ್ತಾನೆ ಇವ’ ಎಂದು ನಗುತ್ತಾ ಕಾಲೆಳೆದಿದ್ದು ನೋಡಿ ಅಲ್ಲಿದ್ದವರ ಮೊಗದಲ್ಲೂ ನಗು ಮೂಡಿತ್ತು. ಈ ಸಂಭಾಷಣೆಯ ವಿಡಿಯೋ ಈಗ ಟ್ವಿಟರ್ ನಲ್ಲಿ ವೈರಲ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: 82 ಬಾಲ್, 14 ರನ್.. ಅಬ್ಬಬ್ಬಾ ಕುಲದೀಪ್ ಯಾದವ್ ಗೆ ಏನು ತಾಳ್ಮೆ ಗುರೂ

IND vs SA: ಟೀಂ ಇಂಡಿಯಾಕ್ಕೆ ಟೆಸ್ಟ್ ನಲ್ಲಿ ತವರಿನಲ್ಲೇ ಇಂಥಾ ಸ್ಥಿತಿ ಯಾವತ್ತೂ ಇರಲಿಲ್ಲ

ಮಹಿಳಾ ಏಕದಿನ ವಿಶ್ವಕಪ್‌ ಗೆದ್ದ ಬೆನ್ನಲ್ಲೇ ಚೊಚ್ಚಲ ಅಂಧರ ಟಿ20 ವಿಶ್ವಕಪ್ ಕಿರೀಟ ಜಯಿಸಿದ ಭಾರತ

IND vs SA: ಏಕದಿನ ಸರಣಿಗೆ ಭಾರತ ತಂಡ ಪ್ರಕಟ, ಕನ್ನಡಿಗ ರಾಹುಲ್‌ಗೆ ಒಲಿದ ನಾಯಕತ್ವ

IND vs SA 2nd Test: ಹರಿಣ ಪಡೆಯ ಬಾಲಂಗೋಚಿಗಳ ಆಟಕ್ಕೆ ಸುಸ್ತಾದ ಭಾರತದ ಬೌಲರ್‌ಗಳು

ಮುಂದಿನ ಸುದ್ದಿ
Show comments