Select Your Language

Notifications

webdunia
webdunia
webdunia
webdunia

ಧೋನಿ ಬಂದರೂ ಟೀಂ ಇಂಡಿಯಾದ್ದು ಅದೇ ರಾಗ ಅದೇ ಹಾಡು

ಧೋನಿ ಬಂದರೂ ಟೀಂ ಇಂಡಿಯಾದ್ದು ಅದೇ ರಾಗ ಅದೇ ಹಾಡು
ವೆಲ್ಲಿಂಗ್ಟನ್ , ಭಾನುವಾರ, 3 ಫೆಬ್ರವರಿ 2019 (09:00 IST)
ವೆಲ್ಲಿಂಗ್ಟನ್: ಧೋನಿ ಬಂದ ಮೇಲಾದರೂ ಟೀಂ ಇಂಡಿಯಾ ಪರಿಸ್ಥಿತಿ ಸುಧಾರಿಸಬಹುದು ಎಂಬ ನಿರೀಕ್ಷೆಗಳು ಸುಳ್ಳಾಗಿವೆ. ನ್ಯೂಜಿಲೆಂಡ್ ವಿರುದ್ಧ ಐದನೇ ಏಕದಿನ ಪಂದ್ಯದಲ್ಲೂ ಟೀಂ ಇಂಡಿಯಾ ಹೀನಾಯ ಸ್ಥಿತಿಯಲ್ಲಿದೆ.


ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ ಇತ್ತೀಚೆಗಿನ ವರದಿ ಬಂದಾಗ 4 ವಿಕೆಟ್ ಕಳೆದುಕೊಂಡು 19 ಓವರ್ ಗಳಲ್ಲಿ ಕೇವಲ 56 ರನ್ ಗಳಿಸಿದೆ. ಇದೀಗ ಬ್ಯಾಟಿಂಗ್ ಮಾಡುತ್ತಿರುವ ಅಂಬಟಿ ರಾಯುಡು (12) ಮತ್ತು ವಿಜಯ್ ಶಂಕರ್ (20) ಬಿಟ್ಟರೆ ಉಳಿದ ಬ್ಯಾಟ್ಸ್ ಮನ್ ಗಳು ಎರಡಂಕಿ ಮೊತ್ತವೂ ದಾಟಲಿಲ್ಲ. ನಾಯಕ ರೋಹಿತ್ ಶರ್ಮಾ 2 ರನ್ ಗಳಿಸಿದರೆ ಶಿಖರ್ ಧವನ್ 6 ರನ್ ಗೆ ವಿಕೆಟ್ ಒಪ್ಪಿಸಿದದರು. ಧೋನಿ ಕೇವಲ 1 ರನ್ ಗೆ ಬೌಲ್ಡ್ ಆಗಿದ್ದಾರೆ.

ಕಳೆದ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಬೆನ್ನುಲುಬು ಮುರಿಯಲು ಕಾರಣರಾಗಿದ್ದ ಟ್ರೆಂಟ್ ಬೌಲ್ಟ್  2 ವಿಕೆಟ್ ಮತ್ತು ಮ್ಯಾಟ್ ಹೆನ್ರಿ 2 ವಿಕೆಟ್ ಕಬಳಿಸಿದ್ದಾರೆ. ಭಾರತದ ಬ್ಯಾಟಿಂಗ್ ಇನ್ನು ಸುಧಾರಿಸುವ ಲಕ್ಷಣ ಕಾಣುತ್ತಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಸ್ಟ್ರೇಲಿಯಾ ಟಿ20 ಮೊದಲ ಪಂದ್ಯ ಬೆಂಗಳೂರಿನಲ್ಲಿ ನಡೆಯಲ್ಲ! ಕಾರಣ ಬಹಿರಂಗ