Select Your Language

Notifications

webdunia
webdunia
webdunia
Wednesday, 9 April 2025
webdunia

ಇಡ್ಲಿ ಆರ್ಡರ್ ಮಾಡಿದ್ದಕ್ಕೆ ವಿರಾಟ್ ಕೊಹ್ಲಿಯನ್ನು ತಮಾಷೆ ಮಾಡಿದ್ದ ಫುಟ್ಬಾಲಿಗ ಸುನಿಲ್ ಚೆಟ್ರಿ!

ವಿರಾಟ್ ಕೊಹ್ಲಿ
ಮುಂಬೈ , ಶನಿವಾರ, 2 ಫೆಬ್ರವರಿ 2019 (09:46 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಫಿಟ್ ನೆಸ್ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಗೊತ್ತು. ಆದರೆ ಕೊಹ್ಲಿ ಸಂಪೂರ್ಣ ಸಸ್ಯಾಹಾರಿಯಾಗಿದ್ದಾರೆ ಎಂದು ನಿಮಗೆ ಗೊತ್ತೇ?!


ಈ ವಿಚಾರವನ್ನು ಇದೀಗ ಅವರ ಸ್ನೇಹಿತ ಫುಟ್ಬಾಲಿಗ ಸುನಿಲ್ ಚೆಟ್ರಿ ಬಹಿರಂಗಪಡಿಸಿದ್ದಾರೆ. ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡಾ ಮಾಂಸಾಹಾರ ತ್ಯಜಿಸಿ ಫಿಟ್ನೆಸ್ ಗಾಗಿ ಸಸ್ಯಾಹಾರಿಯಾಗಿದ್ದಾರೆ. ಕೊಹ್ಲಿ ಕೂಡಾ ಪತ್ನಿಯ ಹಾಗೇ ಫಿಟ್ನೆಸ್ ಗಾಗಿ ಸಂಪೂರ್ಣ ಸಸ್ಯಾಹಾರಿ ಎಂದು ಚೆಟ್ರಿ ಬಹಿರಂಗಪಡಿಸಿದ್ದಾರೆ.

‘ಒಮ್ಮೆ ನಾವಿಬ್ಬರೂ ಸ್ಟಾರ್ ಸ್ಪೋರ್ಟ್ಸ್ ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆವು. ಕಾರ್ಯಕ್ರಮದ ಬಳಿಕ ಕೊಹ್ಲಿ ತಿಂಡಿಗೆ ಇಡ್ಲಿ ಆರ್ಡರ್ ಮಾಡಿದ್ದರು. ಅದನ್ನು ನೋಡಿ ನಾನು ತಮಾಷೆ ಮಾಡಿದ್ದೆ. ಆಗಲೇ ನನಗೆ ಗೊತ್ತಾಗಿದ್ದು, ಕೊಹ್ಲಿ ತಮ್ಮ ಫಿಟ್ನೆಸ್ ಗಾಗಿ ಸಂಪೂರ್ಣ ಸಸ್ಯಾಹಾರಿಯಾಗಿದ್ದಾರೆಂದು. ಅವರು ಒಬ್ಬ ಫುಟ್ಬಾಲಿಗನ ರೀತಿ ತಮ್ಮ ದೈಹಿಕ ಸಾಮರ್ಥ್ಯವನ್ನು ಕಾಯ್ದುಕೊಳ್ಳುತ್ತಾರೆ. ಅವರು ಫಿಟ್ನೆಸ್ ಕಾಯ್ದುಕೊಳ್ಳುವ ರೀತಿ ನಿಜಕ್ಕೂ ಅದ್ಭುತ’ ಎಂದು ಚೆಟ್ರಿ ಹೊಗಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ಟೀಂ ಇಂಡಿಯಾವೇ ವಿಶ್ವಕಪ್ ಗೆಲ್ಲುವ ಫೇವರಿಟ್ ಎಂದ ರಾಹುಲ್ ದ್ರಾವಿಡ್